More

    ವಿದ್ಯುತ್ ಉಳಿತಾಯಕ್ಕೆ ಎಲ್‌ಇಡಿ ಬಲ್ಬ್ ಸಹಕಾರಿ

    ಮುದ್ದೇಬಿಹಾಳ: ಎಲ್‌ಇಡಿ ಬಲ್ಬ್‌ಗಳ ಬಳಕೆಯಿಂದ ಭಾಗಶಃ ವಿದ್ಯುತ್ ಉಳಿತಾಯ ಮಾಡಬಹುದಾಗಿದೆ ಎಂದು ಬಸವನಬಾಗೇವಾಡಿ ಹೆಸ್ಕಾಂ ಇಇ ಜಗದೀಶ ಜಾಧವ ಹೇಳಿದರು.
    ತಾಲೂಕಿನ ತಂಗಡಗಿ ಶ್ರೀ ಚರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಶುಕ್ರವಾರ ಹೆಸ್ಕಾಂ ತಂಗಡಗಿ ಉಪ ಶಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಲ್‌ಇಡಿ ಬಲ್ಬ್‌ಗಳ ಬಳಕೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
    ಗ್ರಾಮೀಣ ಭಾಗದಲ್ಲಿ ಹೆಚ್ಚು ವೋಲ್ಟೇಜ್ ಸಾಮರ್ಥ್ಯದ ಬಲ್ಬ್ ಬಳಸುವ ಬದಲು ಎಲ್‌ಇಡಿ ಬಲ್ಬ್‌ಗಳ ಬಳಕೆಗೆ ಒತ್ತು ನೀಡಬೇಕು. ಹೆಚ್ಚು ಬೆಳಕು ಹಾಗೂ ಕಡಿಮೆ ಪ್ರಮಾಣದ ಬಿಲ್ ಬರುತ್ತದೆ ಎಂದರು.
    ಹೆಸ್ಕಾಂ ಎಇಇ ರಾಜಶೇಖರ ಹಾದಿಮನಿ, ಡಿ.ಎ. ಶಿರಸಂಗಿಮಠ, ಬಿ.ಎ. ಮಡಿವಾಳರ, ಬಿ.ಎಸ್. ಯಲಗೋಡ ಮಾತನಾಡಿದರು. ನೆರೆ ಹಾವಳಿಯಲ್ಲಿ ಸಂಕಷ್ಟಕ್ಕೀಡಾಗಿದ್ದ ರೈತಾಪಿ ವರ್ಗದವರ ಮೋಟಾರ್ ಪಂಪ್‌ಸೆಟ್ ಹಾಗೂ ಇನ್ನಿತರ ವಿದ್ಯುತ್ ಸಂಬಂಧಿ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡಲು ಶ್ರಮಿಸಿದ ತಂಗಡಗಿ ಶಾಖೆ ಅಧಿಕಾರಿ ಎಂ.ಎಸ್. ತೆಗ್ಗಿನಮಠ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಸದಸ್ಯ ಶಿವಾನಂದ ಮಂಕಣಿ, ಸೆಕ್ಷನ್ ಅಧಿಕಾರಿ ಎಸ್.ಎಸ್. ಪಾಟೀಲ ಇದ್ದರು. ಬಿ.ವೈ. ಹಳ್ಳಿ ಸ್ವಾಗತಿಸಿದರು. ಶಾಖಾ ಕಚೇರಿ ವ್ಯಾಪ್ತಿಯ ರೈತರು, ಹೆಸ್ಕಾಂ ನೌಕರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts