More

    ನೊಂದವರ ಧ್ವನಿಯಾಗಿ ಕೆಲಸ ಮಾಡೋಣ

    ಮುದ್ದೇಬಿಹಾಳ: ಸಮಾಜದಲ್ಲಿರುವ ಕೆಳ ಹಂತದಲ್ಲಿರುವ ಬಡವರು, ದೌರ್ಜನ್ಯಕ್ಕೊಳಗಾದವರು, ಅಸಹಾಯಕರಿಗೆ ನೆರವು ಒದಗಿಸುವ ಕಾರ್ಯವನ್ನು ಕುಮಾರೇಶ್ವರ ಜೀವನ ವಿಕಾಸ ಫೌಂಡೇಷನ್ ಮಾಡಲಿದೆ ಎಂದು ಕುಂಟೋಜಿ ಹಿರೇಮಠದ ಚನ್ನವೀರ ದೇವರು ಹೇಳಿದರು.

    ಪಟ್ಟಣದ ಬಸ್ ನಿಲ್ದಾಣ ಪಕ್ಕದಲ್ಲಿರುವ ಹಳೇ ಸಿಪಿಐ ಕ್ವಾರ್ಟರ್ಸ್ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೀದಿ ಬದಿ ವ್ಯಾಪಾರಸ್ಥರಿಗೆ ಕುಂಟೋಜಿಯ ಜೀವನ ವಿಕಾಸ ಫೌಂಡೇಷನ್ ನೇತೃತ್ವದಲ್ಲಿ ಮಾನವೀಯ ನೆರಳು ಕಾರ್ಯಕ್ರಮದಡಿ ಕೊಡೆಗಳನ್ನು ವಿತರಿಸಿ ಅವರು ಮಾತನಾಡಿದರು.

    ಪ್ರತಿಯೊಂದಕ್ಕೂ ಸರ್ಕಾರದ ಮೇಲೆ ಅವಲಂಬನೆ ಸಲ್ಲದು. ಹಾಗೆಯೇ ಎಲ್ಲ ಕೆಲಸವಕ್ಕೂ ಸರ್ಕಾರವನ್ನೇ ದೂಷಣೆ ಮಾಡುತ್ತೇವೆ. ಸರ್ಕಾರಕ್ಕೆ ಸೇತುವೆಯಾಗಿ ಫೌಂಡೇಷನ್‌ಗಳು ಕೆಲಸ ಮಾಡಿ ನೊಂದವರ ಧ್ವನಿಯಾಗಿ ನಿಲ್ಲಬೇಕಾಗಿದೆ ಎಂದರು.

    ಪತ್ರಕರ್ತ ಡಿ.ಬಿ. ವಡವಡಗಿ ಮಾತನಾಡಿ, ಸಾಮಾಜಿಕ ನೆರವಿನ ನಿರೀಕ್ಷೆಯಲ್ಲಿರುವವರಿಗೆ ಈ ಫೌಂಡೇಷನ್ ಸಹಾಯಹಸ್ತ ಚಾಚಲಿದ್ದು, ಸಾಮಾಜಿಕ ಚಿಂತನೆಯುಳ್ಳ ಕುಂಟೋಜಿ ಹಿರೇಮಠದ ಚನ್ನವೀರ ದೇವರು ಇತರ ಮಠಾಧೀಶರಿಗೆ ಮಾದರಿಯಾಗುವ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

    ಕರ್ನಾಟಕ ಅರ್ಬನ್ ಬ್ಯಾಂಕ್ ನಿರ್ದೇಶಕ ರಾಜು ಕಲ್ಬುರ್ಗಿ ಅವರು ತಮ್ಮ ತಂದೆ ರಾಚಪ್ಪ ಕಲ್ಬುರ್ಗಿ ಸ್ಮರಣಾರ್ಥ ಪಟ್ಟಣದಲ್ಲಿ ಪಾದರಕ್ಷೆ ಮಾರುವರು, ಪತ್ರಿಕೆ ಮಾರಾಟಗಾರರು, ತೆಂಗು, ಬಳ್ಳೊಳ್ಳಿ, ತರಕಾರಿ, ಮಡಿಕೆ, ಹೂವಿನ ವ್ಯಾಪಾರಿ, ಕಾಳಿನ ವ್ಯಾಪಾರಿಗಳು ಸೇರಿದಂತೆ ಹಲವರಿಗೆ ಕೊಡೆಗಳನ್ನು ವಿತರಿಸಿದರು.

    ಪುರಸಭೆ ಸದಸ್ಯ ಚನ್ನಪ್ಪ ಕಂಠಿ, ಮುಖಂಡರಾದ ಅಶೋಕ ನಾಡಗೌಡ, ಬಸವರಾಜ ಸುಕಾಲಿ, ಸಮಾಜ ಸೇವಕಿ ಸಂಗೀತಾ ನಾಡಗೌಡ, ಗುತ್ತಿಗೆದಾರ ಸುರೇಶಗೌಡ ಪಾಟೀಲ, ಕುಂಟೋಜಿ ಬಸವೇಶ್ವರ ದೇವಸ್ಥಾನದ ಕಮಿಟಿ ಅಧ್ಯಕ್ಷ ಎಂ.ಎಸ್. ಬಿರಾದಾರ,ಬಾಂಬೇಗೌಡ ಬಿರಾದಾರ, ಮಹಾಂತೇಶ ಬೂದಿಹಾಳಮಠ, ಬಸವರಾಜ ಬಿರಾದಾರ, ಹಣಮಂತ ನಲವಡೆ ಇತರರಿದ್ದರು.

    ಕೆ.ವಿ.ಜೆ ಫೌಂಡೇಷನ್ ಸದಸ್ಯರು ಪ್ರಾರ್ಥಿಸಿದರು. ಶಿವಕುಮಾರ ಶಾರದಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೈತನ್ಯಾ ದಶವಂತ ಸ್ವಾಗತಿಸಿದರು. ಗಿರಿಜಾ ಕಡಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts