More

    ಗ್ರಾಪಂ ಆಸ್ತಿ ಪುರಸಭೆಗೆ ಸೇರ್ಪಡೆ ಮಾಡದಿರಲು ಆಗ್ರಹ

    ಮದ್ದೇಬಿಹಾಳ: ತಾಲೂಕಿನ ಹಡಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎನ್‌ಎ ಪ್ಲಾಟ್‌ಗಳನ್ನು ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಬಾರದು ಎಂದು ಒತ್ತಾಯಿಸಿ ಹಡಲಗೇರಿ ಗ್ರಾಪಂ ಜನಪ್ರತಿನಿಧಿಗಳು ತಹಸೀಲ್ದಾರ್, ಮುಖ್ಯಾಧಿಕಾರಿ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.
    ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ್ದ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಗ್ರೇಡ್-2 ತಹಸೀಲ್ದಾರ್ ಡಿ.ಜಿ. ಕಳ್ಳಿಮನಿ ಅವರಿಗೆ ಮನವಿ ಸಲ್ಲಿಸಿದರು.
    ಗ್ರಾಮದ ಮುಖಂಡ ಯಲ್ಲಪ್ಪ ಚಲವಾದಿ ಮಾತನಾಡಿ, ಸರ್ಕಾರದಿಂದ ಇನ್ನೂ ಹೆಚ್ಚಿನ ವಿಶೇಷ ಅನುದಾನವನ್ನು ಪಂಚಾಯಿತಿಗಳಿಗೆ ನೀಡಿ ಅಭಿವೃದ್ಧಿ ಮಾಡಬೇಕು. ಪಂಚಾಯಿತಿ ವ್ಯಾಪ್ತಿಗೆ ಬರುವ ಎನ್‌ಎ ಪ್ಲಾಟ್‌ಗಳು ಈಗಾಗಲೇ ನಮೂನೆ 9 ( ನಿಯಮ 28(1)ರ) ಪ್ರಕಾರ ನಮೂದು ಇದ್ದು, ಪ್ಲಾಟ್‌ಗಳನ್ನು ಹಡಲಗೇರಿ ಪಂಚಾಯಿತಿ ವ್ಯಾಪ್ತಿಯಿಂದಲೇ ಅಭಿವೃದ್ಧಿ ಪಡಿಸಬೇಕು ಮತ್ತು ಯಾವುದೇ ಕಾರಣಕ್ಕೂ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂಥ ಎನ್‌ಎ ಪ್ಲಾಟ್‌ಗಳನ್ನು ಪುರಸಭೆ ವ್ಯಾಪ್ತಿಗೆ ಸೇರಿಸಿಕೂಳ್ಳಬಾರದು ಎಂದು ಹೇಳಿದರು.
    ಒಂದು ವೇಳೆ ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಲು ಯತ್ನಿಸಿದ್ದಲ್ಲಿ ಹಡಲಗೇರಿ ಪಂಚಾಯಿತಿ ಮತ್ತು ಗ್ರಾಮಸ್ಥರ ವತಿಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
    ತಾಪಂ ಸಹಾಯಕ ನಿರ್ದೇಶಕ ಪ್ರಕಾಶ ದೇಸಾಯಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಅವರಿಗೆ ಗ್ರಾಮಸ್ಥರು ಪ್ರತ್ಯೇಕ ಮನವಿ ಸಲ್ಲಿಸಿದರು.
    ಹಡಲಗೇರಿ ಗ್ರಾಪಂ ಮಾಜಿ ಅಧ್ಯಕ್ಷ ಹಣಮಂತ ತಳ್ಳಿಕೇರಿ, ಶಿವಪುತ್ರ ಹರಿಂದ್ರಾಳ, ಗ್ರಾಮಸ್ಥರಾದ ಶಿವಪ್ಪ ಮುದ್ನಾಳ, ಬಸವರಾಜ ಹರಿಂದ್ರಾಳ, ಸಿದ್ರಾಮ ಹರಿಂದ್ರಾಳ,ಮುತ್ತಪ್ಪ ಮುರಾಳ, ಹಣಮಂತ ಖಿಲಾರಹಟ್ಟಿ, ನಿಂಗಪ್ಪ ಹರಿಂದ್ರಾಳ, ಪವಾಡೇಶ ಮಾದರ, ಮಾಳಿಂಗರಾಯ ಕಿಲಾರಹಟ್ಟಿ, ಮಾಳಪ್ಪ ಹರಿಂದ್ರಾಳ, ಹೊನ್ನಪ್ಪ ಹಣಮಕಟ್ಟಿ ಸೇರಿದಂತೆ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts