More

    ಭಾರತ ರತ್ನ ಮುಖರ್ಜಿ ಜಾತ್ಯತೀತ, ಪಕ್ಷಾತೀತ ವ್ಯಕ್ತಿ

    ಮುದ್ದೇಬಿಹಾಳ: ಜಾತ್ಯತೀತ ಹಾಗೂ ಪಕ್ಷಾತೀತ ವ್ಯಕ್ತಿಯೊಬ್ಬರನ್ನು ದೇಶ ಕಳೆದುಕೊಂಡಿದೆ ಎಂದು ಬಿಎಸ್‌ಎನ್‌ಎಲ್ ಸಲಹಾ ಸಮಿತಿ ನಾಮನಿರ್ದೇಶಿತ ಸದಸ್ಯ ಸದ್ದಾಂ ಕುಂಟೋಜಿ ಹೇಳಿದರು. ಪಟ್ಟಣದ ಬಸವೇಶ್ವರ ಸರ್ಕಲ್‌ನಲ್ಲಿ ಎನ್‌ಎಸ್‌ಯುಐ ಹಾಗೂ ಯುವ ಕಾಂಗ್ರೆಸ್ ಸಂಘಟನೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಮುಖರ್ಜಿಯವರು ಎಲ್ಲ ಪಕ್ಷದವರನ್ನು ಸಮಾನವಾಗಿ ಕಾಣುತ್ತಿದ್ದ ಮುತ್ಸದ್ದಿ ರಾಜಕಾರಣಿ ಆಗಿದ್ದರು ಎಂದು ಹೇಳಿದರು.
    ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ ಮಾತನಾಡಿ, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿ ಪಡೆದಿರುವ ಮಾಜಿ ರಾಷ್ಟ್ರಪತಿ ನಿಧನ ಹಿನ್ನೆಲೆಯಲ್ಲಿ ಸಾರ್ವತ್ರಿಕ ರಜೆ ನೀಡದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವರಿಗೆ ಅಪಮಾನಿಸಿವೆ ಎಂದು ಆರೋಪಿಸಿದರು.

    ಮುಖರ್ಜಿ ನಿಧನ ಹಿನ್ನೆಲೆಯಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಯುವ ಕಾಂಗ್ರೆಸ್ ತಾಲೂಕಾಧ್ಯಕ್ಷ ಮಹ್ಮದ್‌ರಫೀಕ್ ಶಿರೋಳ, ಉಪಾಧ್ಯಕ್ಷ ಮಹ್ಮದ್‌ಯುಸ್ು ನಾಯ್ಕೋಡಿ, ಪುರಸಭೆ ಸದಸ್ಯರಾದ ಮಹಿಬೂಬ ಗೊಳಸಂಗಿ, ರಿಯಾಜ್ ಢವಳಗಿ, ಮಾಜಿ ಸದಸ್ಯ ಎಚ್.ಬಿ. ಸಾಲಿಮನಿ, ಗ್ರಾಪಂ ಮಾಜಿ ಅಧ್ಯಕ್ಷ ಸಂಗಯ್ಯ ಸಾರಂಗಮಠ, ಹುಸೇನ್ ಮುಲ್ಲಾ, ಬಸವರಾಜ ಗೂಳಿ, ಹರೀಶ ಬೇವೂರ, ಸಚಿನ್ ಪಾಟೀಲ, ಪ್ರಶಾಂತ ತಾರನಾಳ, ಕಾಂಗ್ರೆಸ್ ಪಕ್ಷದ ಅಂತರ್ಜಾಲದ ಅಧ್ಯಕ್ಷ ರಾಕೇಶ ಹೂಲಗೇರಿ, ದಾವಲ್ ಗೊಳಸಂಗಿ, ಮಾನಪ್ಪ ನಾಯಕ, ಮಹಿಬೂಬ ಮೊಕಾಶಿ, ರಂಜಾನ್ ನದಾಫ್ ಸೇರಿದಂತೆ ಇತರರು ಇದ್ದರು.

    ಭಾರತ ರತ್ನ ಮುಖರ್ಜಿ ಜಾತ್ಯತೀತ, ಪಕ್ಷಾತೀತ ವ್ಯಕ್ತಿ
    ಭಾರತ ರತ್ನ ಮುಖರ್ಜಿ ಜಾತ್ಯತೀತ, ಪಕ್ಷಾತೀತ ವ್ಯಕ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts