More

  ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ ಬೇಡ

  ಮುದ್ದೇಬಿಹಾಳ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವುದು ಅರ್ಥಹೀನ ವಿಚಾರ ಎಂದು ಬಿಜೆಪಿ ನಾಯಕಿ ಕಾಶೀಬಾಯಿ ರಾಂಪೂರ ಹೇಳಿದರು.

  ಪಟ್ಟಣದ ವಿದ್ಯಾನಗರದಲ್ಲಿ ಭಾನುವಾರ ಮನೆ ಮನೆಗೆ ತೆರಳಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

  ದೇಶದಲ್ಲಿ ವಾಸವಿರುವ ಅಕ್ರಮ ವಲಸಿಗರನ್ನು ಇಲ್ಲಿಂದ ಹೊರ ಹಾಕಲು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮೀತ್ ಷಾ ಕೈಗೊಂಡಿರುವ ಈ ಕಾಯ್ದೆಯಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದರು. ಪುರಸಭೆ ಸದಸ್ಯರಾದ ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ, ಬಿಜೆಪಿ ನಾಯಕರಾದ ಬಸಮ್ಮ ಸಿದರೆಡ್ಡಿ, ಶಿಲ್ಪಾ ಶರ್ಮಾ ಮತ್ತಿತರರಿದ್ದರು.

  ಕಿಲ್ಲಾ, ವೀರೇಶ್ವರ ನಗರದಲ್ಲಿ ಅರಿವು
  ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಬಿಜೆಪಿ ಮುಖಂಡ ಸೋಮನಗೌಡ ಪಾಟೀಲ, ಬಿಜೆಪಿ ಕಾರ್ಯದರ್ಶಿ ಜಗದೀಶ ಪಂಪಣ್ಣವರ, ಪ್ರಭು ಕಡಿ, ತಾಲೂಕಾಧ್ಯಕ್ಷ ಪರಶುರಾಮ ಪವಾರ, ರಾಜಶೇಖರ ಹೊಳಿ, ಹಣಮಂತ ನಲವಡೆ, ಪುನೀತ ಹಿಪ್ಪರಗಿ ಮತ್ತಿತರರು ಕಿಲ್ಲಾ, ವೀರೇಶ್ವರ ನಗರದಲ್ಲೆಡೆ ಸಂಚರಿಸಿ ಜಾಗೃತಿ ಮೂಡಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts