More

    ಹೋರಾಟಕ್ಕೆ ಸ್ಪಂದಿಸಿ ಅಭಿವೃದ್ಧಿಗೆ ಶ್ರಮಿಸಿ

    ಮುದಗಲ್ : ನಾಡಿನ ನೆಲ, ಜಲ ಮತ್ತು ಭಾಷೆ ಸೇರಿ ನಾಗರಿಕರ ಧ್ವನಿಯಾಗಿರುವ ಕರ್ನಾಟಕ ರಕ್ಷಣ ವೇದಿಕೆ ಸ್ವಾಭಿಮಾನದ ಸಂಕೇತ ಎಂದು ಕರವೇ ಮುದಗಲ್ ಘಟಕದ ಅಧ್ಯಕ್ಷ ಎಸ್‌ಎ.ನಯಿಂ ಹೇಳಿದರು.

    ಐತಿಹಾಸಿಕ ಕೋಟೆ ಮುಂಭಾಗದಲ್ಲಿ ಕರವೇ 14ನೇ ವಾರ್ಷಿಕೋತ್ಸವ ಹಾಗೂ 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಾನುವಾರ ರೈತ ಮತ್ತು ವಿದ್ಯಾರ್ಥಿ ಘಟಕ ಉದ್ಘಾಟನೆ ಹಾಗೂ ಕನ್ನಡ ಖವ್ವಾಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಟ್ಟಣದ ಮೂಲ ಸೌಲಭ್ಯ, ಮುದಗಲ್ ತಾಲೂಕು ಕೇಂದ್ರ ಮತ್ತು ಉತ್ಸವ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸುವಂತೆ ಕರವೇ ಸಂಘಟನೆ ಹೋರಾಡುತ್ತ ಬಂದಿದ್ದು ಸಾರ್ವಜನಿಕರ ಪರವಾದ ಹೋರಾಟಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸುವ ಮೂಲಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.

    ಶಾಸಕ ಡಿಎಸ್.ಹೂಲಗೇರಿ ಕಾರ್ಯಕ್ರಮ ಉದ್ಘಾಟಿಸಿದರು. ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ರಾಜ್ಯ ಶಿಕ್ಷಣ ಇಲಾಖೆ ಅಪರ ಕಾರ್ಯದರ್ಶಿ ಎಂ.ಚಂದ್ರಶೇಖರ ದಫೇದಾರ, ಮುಖಂಡರಾದ ಹನುಮಂತಪ್ಪ ಆಲ್ಕೋಡ್, ಸಿದ್ದು ಬಂಡಿ ಮಾತನಾಡಿದರು. ರಹೆಮಾನ್ ಜಾವಿದ್ ಕಲಾ ತಂಡದಿಂದ ಕನ್ನಡದ ಖವ್ವಾಲಿ ಕಾರ್ಯಕ್ರಮ ಜರುಗಿತು.

    ಪ್ರಮುಖರಾದ ಶಶಿಕಲಾ ಭೋವಿ, ನಾಗನಗೌಡ ತುರಡಗಿ, ಹನುಮಂತಪ್ಪ ಕಂದಗಲ್, ದಾವೂದ್ ಸಾಬ್, ಪುರಸಭೆ ಸದಸ್ಯ ಅಮೀರ್ ಬೇಗ್ ಉಸ್ತಾದ್, ಮೈಬೂಬ್ ಕಡ್ಡಿಪುಡಿ, ಸೈಯದ್ ಸಾಬ್ ಹಳೆಪೇಟೆ, ವೀರನಗೌಡ ಲೆಕ್ಕಿಹಾಳ, ಮಂಜುನಾಥ ಬನ್ನಿಗೋಳ್ಕರ್, ಕರವೇ ನಗರ ಘಟಕದ ಅಧ್ಯಕ್ಷ ಸಾಬು ಹುಸೇನ್, ಎಸ್.ಎನ್.ಖಾದ್ರಿ, ಇಸ್ಮಾಯಿಲ್ ಬಳಿಗಾರ, ನಾಗರಾಜ ನಾಯಕ ಮಟ್ಟೂರು, ರಹೆಮಾನ್ ದೂಲಾ, ಗ್ಯಾನಪ್ಪ, ವಿರುಪಾಕ್ಷಿ ಹೂಗಾರ, ಬಾಲಪ್ಪ, ಅಬ್ದುಲ್ ಮಜೀದ್, ಜಮಾಲಿ ಸಾಬ್, ಶಾಮೀದ ಅರಗಂಜಿ, ನಬಿ, ರಂಗಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts