More

    ಕುಂಬಳಹಳ್ಳಿ ಪಂಚಾಯಿತಿ ಮೇಲ್ದೆರ್ಜೆಗೆ: ಸಚಿವ ಎಂಟಿಬಿ ನಾಗರಾಜ್

    ಹೊಸಕೋಟೆ: ಮುಂದಿನ ದಿನಗಳಲ್ಲಿ ಕುಂಬಳಹಳ್ಳಿ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿಯನ್ನಾಗಿ ಉನ್ನತೀಕರಿಸಲು ಶ್ರಮಿಸಲಾಗುವುದು ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.


    ಕಸಬಾ ಹೋಬಳಿಯ ಕುಂಬಳಹಳ್ಳಿ ಗ್ರಾಪಂ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಪಂಚಾಯಿತಿಯಲ್ಲಿ 23 ಸದಸ್ಯರಿದ್ದು, ತಾಲೂಕಿನಲ್ಲಿ ಮೂರನೇ ಅತಿ ಹೆಚ್ಚು ಸದಸ್ಯರಿರುವ ಪಂಚಾಯಿತಿಯಾಗಿದೆ. ಈ ಪಂಚಾಯತಿಗೆ ಆಸ್ತಿ ತೆರಿಗೆ ಮತ್ತು ನೀರಿನ ತೆರಿಗೆ ಬಿಟ್ಟರೆ ಬೇರೆ ಯಾವುದೇ ಆದಾಯದ ಮೂಲಗಳಿಲ್ಲ. ಕೇವಲ ನರೇಗಾ ಯೋಜನೆಯ ಹಣದಿಂದಲೇ ಅಭಿವೃದ್ಧಿ ಮಾಡಬೇಕಾಗಿರುವುದರಿಂದ ಪಟ್ಟಣ ಪಂಚಾಯಿತಿಯಾದರೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನಗಳು ಬರುತ್ತದೆ ಎಂದರು.


    ಕೇಂದ್ರ ಸರ್ಕಾರದ ಜಲ್ ಜೀವನ್ ಮಿಷನ್ ಅಡಿಯಲ್ಲಿ ತಾಲೂಕಿಗೆ 240 ಕೋಟಿ ರೂ.ಮಂಜೂರಾಗಿದ್ದು ಕುಂಬಳಹಳ್ಳಿ ಪಂಚಾಯತಿಗೆ 3.5 ಕೋಟಿ ಹಣವನ್ನು ಕುಡಿಯುವ ನೀರಿಗಾಗಿ ಮೀಸಲಿಡಲಾಗಿದೆ ಎಂದರು.

    ಶಾಸಕರ ಅನುದಾನದಲ್ಲಿ ಸಭಾಂಗಣ: 40 ಲಕ್ಷ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ನರೆಗಾ ಹಣ ಬಳಕೆ ಮಾಡಲಾಗಿದೆ ಎಂದು ಶಾಸಕ ಶರತ್‌ಬಚ್ಚೇಗೌಡ ಹೇಳಿದರು. ಕಟ್ಟಡದಲ್ಲಿ ಪಂಚಾಯತಿ ಸಭೆ ನಡೆಸಲು ಸಭಾಂಗಣ ಅವಶ್ಯಕತೆಯಿದೆ ಎಂದು ಸದಸ್ಯರು ಗಮನಕ್ಕೆ ತಂದಿದ್ದು, ಅದಕ್ಕೆ ಶಾಸಕರ ಅನುದಾನದಲ್ಲಿ ಕಟ್ಟಡದ ಮೇಲ್ಬಾಗದಲ್ಲಿ ಸಭೆಗೆ ಅನುಕೂಲವಾಗುವ ಸಭಾಂಗಣ ನಿರ್ಮಿಸಿಕೊಡುವುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts