More

    ತಾಲೂಕಿನಲ್ಲಿ ಗೂಂಡಾಗಿರಿಗೆ ನಾವು ಬಗ್ಗುವುದಿಲ್ಲ

    ಮಾಜಿ ಸಚಿವ ಎಂಟಿಬಿ ನಾಗರಾಜ್ ಗುಡುಗು

    ಡಿ.ಶೆಟ್ಟಿಹಳ್ಳಿಗೆ ಬಿಜೆಪಿ ಮುಖಂಡರೊಂದಿಗೆ ಭೇಟಿ

    ವಿಜಯವಾಣಿ ಸುದ್ದಿಜಾಲ ನಂದಗುಡಿ
    ಹೊಸಕೋಟೆ ತಾಲೂಕಿನಲ್ಲಿ 40 ವರ್ಷ ಗೂಂಡಾಗಿರಿ ನಡೆಸಿದ್ದವರು ಮತ್ತೆ ಅದೇ ವರ್ತನೆ ಆರಂಭಿಸಿದ್ದಾರೆ. ಇವರ ಗೂಂಡಾಗಿರಿಗೆ ನಾವು ಬಗ್ಗುವುದಿಲ್ಲ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಗುಡುಗಿದರು.
    ಹೊಸಕೋಟೆ ತಾಲೂಕು ನಂದಗುಡಿ ಹೋಬಳಿ ಡಿ.ಶೆಟ್ಟಹಳ್ಳಿಯಲ್ಲಿ ಇತ್ತೀಚೆಗೆ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಕೃಷ್ಣಪ್ಪ ಅವರ ಮನೆಗೆ ಭೇಟಿ ನೀಡಿ ಮಾತನಾಡಿದರು.
    ಈ ಹಿಂದೆ ಹೊಸಕೋಟೆಯನ್ನು ಮಿನಿ ಬಿಹಾರವನ್ನಾಗಿ ಮಾಡಿದ್ದರು. ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ಇದೆಲ್ಲವನ್ನು ನಿಯಂತ್ರಣಕ್ಕೆ ತಂದು ಕ್ಷೇತ್ರದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದೆ. ಆದರೆ ಈಗ ಆಯ್ಕೆಯಾಗಿರುವ ಶಾಸಕರು ಹಾಗೂ ಅವರ ಹಿಂಬಾಲಕರು ಮತ್ತೆ ಮಿನಿಬಿಹಾರ ಮಾಡಲು ಹೊರಟಿದ್ದಾರೆ. ಇವರ ಗೂಂಡಾಗಿರಿ ನೋಡಿಕೊಂಡು ಬಿಜೆಪಿ ಕಾರ್ಯಕರ್ತರು ಕೈ ಕಟ್ಟಿ ಕೂರುವುದಿಲ್ಲ. ಇಂಥ ದುರ್ಘಟನೆಗಳು ಮರುಕಳಿಸಿದರೆ ತಾಲೂಕು ಮಟ್ಟದಿಂದ ರಾಜ್ಯಮಟ್ಟದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಅಧಿಕಾರಕ್ಕೆ ಕಿತ್ತಾಟ ಚುನಾವಣೆ ಲಿತಾಂಶ ಬಂದ ದಿನವೇ ತಾಲೂಕಿನಲ್ಲಿ ಹತ್ಯೆಯಾಗಿದ್ದು, ಇಬ್ಬರಿಗೆ ಮಾರಣಾಂತಿಕ ಹಲ್ಲೆಯಾಗಿದೆ. ಜನಪ್ರತಿನಿಧಿ ಹೇಗಿರುತ್ತಾನೋ ಅವರ ಕಾರ್ಯಕರ್ತರು ಹಾಗೇ ಇರುತ್ತಾರೆ ಎಂಬುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿ ಎಂದು ಎಂಟಿಬಿ ನಾಗರಾಜ್ ಆರೋಪಿಸಿದರು. ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಕಾಂಗ್ರೆಸ್‌ನವರು ಕಿತ್ತಾಡುತ್ತಿದ್ದಾರೆ. ಇದರ ನಡುವೆ ರಾಜ್ಯದ ಆಗುಹೋಗುಗಳನ್ನು ಮರೆತುಬಿಟ್ಟಿದ್ದಾರೆ. ಇವರ ಕಿತ್ತಾಟದಿಂದ ಜನಸಾಮಾನ್ಯರ ಕಷ್ಟ ಕೇಳುವವರೇ ಇಲ್ಲವಾಗಿದೆ. ತಾಲೂಕಿನಲ್ಲಿ ಜನರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಮಾಜಿ ಸಚಿವ, ಬಿಜೆಪಿ ನಾಯಕ ಕೆ. ಎಸ್. ಈಶ್ವರಪ್ಪ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಗೂಂಡಾ ಸಂಸ್ಕೃತಿಯನ್ನು ಆರಂಭಿಸಿದೆ, ಇದಕ್ಕೆ ಸಾಕ್ಷಿ ಎಂಬಂತೆ ವಿಜಯೋತ್ಸವದ ಹೆಸರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹತ್ಯೆಯನ್ನೇ ಮಾಡಿದ್ದಾರೆ. ಇಬ್ಬರಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಇಂಥ ದೌರ್ಜನ್ಯಗಳನ್ನು ನಡೆಸುವುದು ಆ ಪಕ್ಷದ ಜಾಯಮಾನವಾಗಿದೆ ಎಂದರು.

    6 ಲಕ್ಷ ರೂ.ನೆರವು ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಗೆ ಬಿಜೆಪಿ ಮುಖಂಡರ ಈಶ್ವರಪ್ಪ, ಶಾಸಕ ಅಶ್ವತ್ಥನಾರಾಯಣ, ಬೈರತಿ ಬಸವರಾಜು, ನಾರಾಯಣಸ್ವಾಮಿ ಹಾಗೂ ಎಂಟಿಬಿ ನಾಗರಾಜ್ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದರು. ಬಳಿಕ ಬಾಬು ಅವರ ಡಿ.ಶೆಟ್ಟಿಹಳ್ಳಿಯ ಸ್ವಗೃಹಕ್ಕೆ ಭೇಟಿ ನೀಡಿ, ಮೃತ ಕೃಷ್ಣಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿ, ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಯಿತು. ಪಕ್ಷದ ವತಿಯಿಂದ 5 ಲಕ್ಷ ರೂ.ಜತೆಗೆ ಎಂಟಿಬಿ ನಾಗರಾಜ್ ವಯಕ್ತಿಕವಾಗಿ 1 ಲಕ್ಷ ರೂ.ಆರ್ಥಿಕ ನೆರವು ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts