More

    ಚೆನ್ನೈನಲ್ಲೇ ಕಡೇ ಐಪಿಎಲ್ ಪಂದ್ಯವಾಡುವೆ ಎಂದ ಸಿಎಸ್‌ಕೆ ನಾಯಕ ಎಂಎಸ್ ಧೋನಿ

    ಚೆನ್ನೈ: ಚೆನ್ನೈ ಸೂಪರ್ ಸಿಂಗ್ಸ್ ತಂಡ 4ನೇ ಬಾರಿ ಪ್ರಶಸ್ತಿ ಜಯಿಸಿದ ಬೆನ್ನಲ್ಲೇ ಎಂಎಸ್ ಧೋನಿ ಕೂಡ ಐಪಿಎಲ್‌ನಿಂದ ನಿವೃತ್ತಿ ಹೊಂದಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಧೋನಿ ತಮ್ಮ ನಿವೃತ್ತಿ ನಿರ್ಧಾರದ ಬಗ್ಗೆ ಎಲ್ಲೂ ಗುಟ್ಟುಬಿಟ್ಟುಕೊಟ್ಟಿಲ್ಲ. ಚೆನ್ನೈ ನೆಲದಲ್ಲೇ ಕಡೇ ಐಪಿಎಲ್ ಪಂದ್ಯವಾಡುವುದಾಗಿ ಘೋಷಿಸಿದ್ದಾರೆ. ಅದು ಮುಂದಿನ ವರ್ಷಕ್ಕೂ ಇನ್ನು ಐದು ವರ್ಷಕ್ಕೊ ತಿಳಿದಿಲ್ಲ ಎಂದಷ್ಟೇ ಹೇಳಿದ್ದಾರೆ. ತಮ್ಮ ನಿವೃತ್ತಿ ನಿರ್ಧಾರದ ಕುರಿತು ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೊಂಡಿರುವ ಧೋನಿ, ಇನ್ನು ಕೆಲ ದಿನಗಳ ಕಾಲ ಸಿಎಸ್‌ಕೆ ಜೆರ್ಸಿ ತೊಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

    ನನ್ನ ಕ್ರಿಕೆಟ್ ಜೀವನಕ್ಕೆ ಯೋಜನೆ ಸಿದ್ಧಪಡಿಸಿಕೊಂಡಿದ್ದೇನೆ. ತವರಿನಲ್ಲಿ ಕಡೇ ಪಂದ್ಯವನ್ನು ರಾಂಚಿಯಲ್ಲಿ ಆಡಬೇಕೆಂದು ಬಯಸಿದ್ದೆ, ಅದೇ ರೀತಿ ನನ್ನ ತವರಿನಲ್ಲೇ ಕಡೇ ಏಕದಿನ ಪಂದ್ಯವಾಡಿದೆ. ಅದೇ ಮಾದರಿಯಲ್ಲಿ ಕಡೇ ಐಪಿಎಲ್ ಪಂದ್ಯವನ್ನು ಚೆನ್ನೈನಲ್ಲಿ ಆಡಬೇಕೆಂದು ಬಯಸಿರುವೆ. ಇದು ಮುಂದಿನ ವರ್ಷವೇ ಆಗಿರಬಹುದು. ಅಥವಾ 5 ವರ್ಷವೇ ಆಗಬಹುದು ಎಂದು ಧೋನಿ ತಿಳಿಸಿದರು. ಸಿಎಸ್‌ಕೆ ತಂಡ ಐಪಿಎಲ್ ವಿಜೇತ ಸಮಾರಂಭದಲ್ಲಿ ಧೋನಿ ಮಾತನಾಡಿದರು.

    2022ರಲ್ಲಿ ಭಾರತದಲ್ಲೇ 15ನೇ ಆವೃತ್ತಿಯ ಐಪಿಎಲ್ ಟೂರ್ನಿ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಖಚಿತಪಡಿಸಿದ್ದಾರೆ. ಮತ್ತೆರಡು ತಂಡಗಳ ಸೇರ್ಪಡೆಯಿಂದ ಲೀಗ್ ಮತ್ತಷ್ಟು ರೋಚಕವಾಗಿರಲಿದೆ. ಶೀಘ್ರವೇ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಎಲ್ಲ ತಂಡಗಳು ಹೊಸ ತಂಡಗಳಾಗಿ ರೂಪುಗೊಳ್ಳಲಿವೆ ಎಂದು ತಿಳಿಸಿದ್ದಾರೆ. ಐಪಿಎಲ್ ಚಾಂಪಿಯನ್ ಸಿಎಸ್‌ಕೆ ತಂಡಕ್ಕೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ್ದ ಜಯ್ ಷಾ ಈ ವಿಷಯ ತಿಳಿಸಿದ್ದಾರೆ. ಸಮಾರಂಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಮಾಲೀಕ ಎನ್.ಶ್ರೀನಿವಾಸನ್, ದಿಗ್ಗಜ ಕಪಿಲ್ ದೇವ್, ಬಿಸಿಸಿಐ ಕಾರ್ಯದರ್ಶಿ ಜಯ್ ಷಾ, ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts