More

    ಮೃತ್ತಿಕೆ ಸಂಗ್ರಹ ಅಭಿಯಾನ ರಥಕ್ಕೆ ಬೀಳ್ಕೊಡುಗೆ

    ಶಿವಮೊಗ್ಗ: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಎದುರಿನ ಉದ್ಯಾನಕ್ಕೆ ಪವಿತ್ರ ಮೃತ್ತಿಕೆ ಸಂಗ್ರಹಿಸುವ ಅಭಿಯಾನದ ಅಂಗವಾಗಿ ಜಿಲ್ಲೆಯಾದ್ಯಂತ ಸಂಚರಿಸಿದ ರಥಕ್ಕೆ ಶನಿವಾರ ಜಿಲ್ಲಾಡಳಿತ ಭವನ ಆವರಣದಲ್ಲಿ ಬೀಳ್ಕೊಡಲಾಯಿತು.
    ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ನಾಡಪ್ರಭು ಕೆಂಪೇಗೌಡರ ಭಾವಚಿತ್ರ ಹಾಗೂ ಜಿಲ್ಲೆಯಾದ್ಯಂತ ಸಂಚರಿಸಿ ಮೃತ್ತಿಕೆ(ಮಣ್ಣು) ಸಂಗ್ರಹಿಸಿ ಬಂದ ವಾಹನಕ್ಕೆ ಪುಷ್ಪ ಅರ್ಪಿಸಿದರು. ಮಹಿಳೆಯರು ಪೂರ್ಣ ಕುಂಭದೊಂದಿಗೆ ಬೀಳ್ಕೊಟ್ಟರು. ಇದೇ ವೇಳೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಸಂಗ್ರಹಿಸಲಾದ ಮೃತ್ತಿಕೆಯ ಪ್ರದರ್ಶಿಸಲಾಯಿತು.
    ಡಿಸಿ ಡಾ. ಆರ್.ಸೆಲ್ವಮಣಿ ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕು, ನಗರ ಪ್ರದೇಶ, ಗ್ರಾಪಂಗಳಲ್ಲಿ ನಿಗದಿಪಡಿಸಿದ ಮಾರ್ಗನಕ್ಷೆ ಮತ್ತು ವೇಳಾಪಟ್ಟಿಗೆ ಅನುಗುಣವಾಗಿ ಸಂಚರಿಸಿ ಮೃತ್ತಿಕೆ ಸಂಗ್ರಹಿಸಿದ ವಾಹನವು ಜಿಲ್ಲೆಯಿಂದ ಬೆಂಗಳೂರಿಗೆ ನಿರ್ಗಮಿಸಲಿದೆ ಎಂದರು.
    ಜಿಲ್ಲೆಯಾದ್ಯಂತ ಗ್ರಾಪಂ, ತಾಲೂಕು ಪಂಚಾಯಿತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೀಗೆ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪವಿತ್ರ ಮಣ್ಣು ಸಂಗ್ರಹ ಮಾಡಿದ್ದು, ಜಿಪಂನಿಂದ ಆ ಮೃತ್ತಿಕೆಯನ್ನು ಪ್ರದರ್ಶನಕ್ಕಿಡಲಾಯಿತು ಎಂದರು.
    ಪಾಲಿಕೆ ಸದಸ್ಯೆ ಸುವರ್ಣಾ ಶಂಕರ್, ಜಿಪಂ ಸಿಇಒ ಎನ್.ಡಿ.ಪ್ರಕಾಶ್, ಎಎಸ್ಪಿ ವಿಕ್ರಂ ಆಮಟೆ, ಎಡಿಸಿ ಡಾ. ನಾಗೇಂದ್ರ ಎಫ್ ಹೊನ್ನಳ್ಳಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಇತರೆ ಅಧಿಕಾರಿಗಳು, ವಿದ್ಯಾರ್ಥಿಗಳು, ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts