More

    ಸಾಮರಸ್ಯ, ಸಹಬಾಳ್ವೆಗೆ ಪ್ರೇರಣೆ ನೀಡಿದವರು ವಿದ್ಯಾಸಾಗರ ಶ್ರೀಗಳು

    ರಿಪ್ಪನ್‌ಪೇಟೆ: ರಾಷ್ಟçಸಂತ ಆಚಾರ್ಯ ಶ್ರೀ 108 ವಿದ್ಯಾಸಾಗರ ಮುನಿ ಅವರು 77ನೇ ವಯಸ್ಸಿನಲ್ಲಿ ಸಲ್ಲೇಖನ ವ್ರತದ ಬಳಿಕ ಸಮಾಽ ಮರಣ ಹೊಂದಿದರು. ಅವರ ಅಗಲಿಕೆಯು ಜೈನ ಧರ್ಮದವರಿಗಲ್ಲದೆ, ದೇಶದ ಎಲ್ಲ ಧರ್ಮದವರಿಗೂ ದುಃಖವನ್ನುಂಟು ಮಾಡಿದೆ ಎಂದು ಹೊಂಬುಜ ಜೈನಮಠದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.
    ಹೊಂಬುಜ ಜೈನಮಠದಲ್ಲಿ ಏರ್ಪಡಿಸಿದ್ದ ವಿನಯಾಂಜಲಿ ಸಭೆಯಲ್ಲಿ ಆಶೀರ್ವಚನ ನೀಡಿ, ಕರ್ನಾಟಕದಲ್ಲಿ ಜನಿಸಿದ ಆಚಾರ್ಯ ಶ್ರೀಗಳು ಉತ್ತರ ಭಾರತದ ನೂರಾರು ಜಿನಾಲಯಗಳ ಪಂಚ ಕಲ್ಯಾಣ ನೆರವೇರಿಸಿದ್ದನ್ನು ನೆನಪಿಸಿದರು.
    ವಿದ್ಯಾಸಾಗರ ಶ್ರೀಗಳು ಪ್ರಾಕೃತ, ಸಂಸ್ಕೃತ, ಹಿಂದಿ, ಮರಾಠಿ, ಕನ್ನಡ, ಇಂಗ್ಲೀಷ್ ಮುಂತಾದ ಹತ್ತಕ್ಕೂ ಹೆಚ್ಚು ಭಾಷಾ ಪಾಂಡಿತ್ಯ ಹೊಂದಿದ್ದರು. 100ಕ್ಕೂ ಹೆಚ್ಚು ಜೈನ ಧರ್ಮ ತತ್ವ ಸಂಸ್ಕಾರ, ಸಂಸ್ಕೃತಿಗಳ ಕೃತಿ ರಚಿಸಿದ್ದಾರೆ. ಶಿಷ್ಯರಿಗೆ ದೀಕ್ಷಾ ಗುರುಗಳಾಗಿ ಉನ್ನತ ಆದರ್ಶ ತೋರಿದ್ದಾರೆ. ಸತತ 60 ವರ್ಷಗಳ ಕಾಲ ಉತ್ತರ ಭಾರತದಲ್ಲಿ ಪ್ರಭಾವೀ ಪ್ರವಚನದ ಮೂಲಕ ಸಮಾಜದ ಸಾಮರಸ್ಯ, ಸಹಬಾಳ್ವೆಗೆ ಪ್ರೇರಣೆ ನೀಡಿದ್ದರು. ಅವರು ಸಮ್ಯಕ್ತ÷್ವ ಪ್ರಾಪ್ತಿ ಮಾಡಿಕೊಂಡ ಶ್ರೇಷ್ಠ ಮುನಿಗಳಾಗಿದ್ದರು. ಪ್ರಾತಃ ಸ್ಮರಣೀಯರಾಗಿ ದೇಹತ್ಯಾಗವಾದರೂ ನಾವೆಲ್ಲರೂ ಅವರ ಸನ್ಮಾರ್ಗ ಪಥದಲ್ಲಿ ಸಾಗೋಣ ಎಂದು ತಿಳಿಸಿದರು.’
    ಹೊಂಬುಜ ಶ್ರೀಗಳು ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಽಯಲ್ಲಿ ಪ್ರಾರ್ಥಿಸಿ ವಿನಯಾಂಜಲಿ ಸಮರ್ಪಿಸಿದರು. ಶ್ರಾವಕ-ಶ್ರಾವಿಕೆಯರು ಪುಷ್ಪಗಳನ್ನಿರಿಸಿ ಗೌರವ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts