More

    ಮೇ 23ರಂದು ಮಾರುಕಟ್ಟೆಗೆ ಕಾಲಿಡಲಿದೆ ಮೋಟೋ ಎಡ್ಜ್‌ 40 ಸ್ಮಾರ್ಟ್‌ಫೋನ್‌

    ದೆಹಲಿ: ಮೊಟೊರೊಲಾ ಕಂಪನಿಯು 2023ರ ತನ್ನ ಮೊದಲ ಫೋನ್​ನ್ನು ಮೇ 23ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಬಜೆಟ್ ಮತ್ತು ಮಧ್ಯಮ-ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ ನಂತರ ಮತ್ತೊಂದು ಪೋನ್​ನ್ನು ಬಿಡುಗಡೆ ಮಾಡಲು ಸಿದ್ಧವಾಗಿದ್ದು, ಮೊಟೊರೊಲಾ ಎಡ್ಜ್ 40 ಶೀಘ್ರವೇ ಭಾರತೀಯರ ಕೈಸೇರಲಿದೆ.

    ಇದನ್ನೂ ಓದಿ: ಬಹುನಿರೀಕ್ಷಿತ ‘ಚಾಟ್​ಲಾಕ್’ ಫೀಚರ್​​ನ್ನು ಪರಿಚಯಿಸಿದ ವ್ಯಾಟ್ಸ್ಆ್ಯಪ್

    ಈ ಮೊಬೈಲ್​ಗಳನ್ನು ಫ್ಲಿಪ್‌ಕಾರ್ಟ್‌ನ ಮೂಲಕ ಗ್ರಾಹಕರು ಖರೀದಿಸಬಹುದಾಗಿದೆ. ಗ್ರಾಹಕರಿಗೆ ಮೂರು ಬಣ್ಣದಲ್ಲಿ ಲಭ್ಯವಿದ್ದು, ಕಪ್ಪು, ನೀಲಿ ಮತ್ತು ಹಸಿರು ಬಣ್ಣದಲ್ಲಿ ದೊರೆಯುತ್ತದೆ. ಮೊಟೊರೊಲಾ ಎಡ್ಜ್ 40 ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನೊಂದಿಗೆ 6.5-ಇಂಚಿನ ಡಿಸ್​ಪ್ಲೇಯನ್ನು ಹೊಂದಿದೆ ಎಂದು ಮೊಟೊರೊಲಾ ಸ್ಪಷ್ಟಪಡಿಸಿದೆ. ಅಲ್ಲದೇ, 8GB RAM ಹಾಗೂ 256GB ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ.

    ಜತೆಗೆ ಮಿಡಿಯಾ ಟೆಕ್​ 8020 soc ಪ್ರೊಸೆಸರ್​ ಬೆಂಬಲಿತ ಈ ಪೋನ್​ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, ಡಾಲ್ಬಿ ಅಟ್ಮಾಸ್ ಸೌಂಡ್‌ನೊಂದಿಗೆ ಡ್ಯುಯಲ್ ಸ್ಪೀಕರ್ ಸೆಟಪ್ ಮತ್ತು 32-ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸೆನ್ಸಾರ್ ಹೊಂದಿದೆ. ಇದು 68W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4,400mAh ಬ್ಯಾಟರಿಯನ್ನು ಹೊಂದಿದೆ ಎಂದು ಹೇಳಲಾಗಿದೆ. ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಈ ಫೋನ್​ ಬೆಲೆಯನ್ನು ಇನ್ನು ಅಧಿಕೃತವಾಗಿ ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಿಲ್ಲ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts