More

    ಒಂದಾದ ತಾಯಿ-ಮಗ: ಗಣಿನಗರಿಯಲ್ಲಿ ಹೃದಯ ಸ್ಪರ್ಶಿ ಘಟನೆ

    ಬಳ್ಳಾರಿ: ಹಡೆದವ್ವಳಿಂದ ದೂರವಾಗಿದ್ದ ಬಾಲಕನೊಬ್ಬ ಕೊನೆಗೂ ತಾಯಿ ಮಡಿಲು ಸೇರಿದ್ದು, ನಗರದ ಗಾಂಧಿನಗರ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಶುಕ್ರವಾರ ಹೃದಯ ಸ್ಪರ್ಶಿ ಘಟನೆಗೆ ಸಾಕ್ಷಿಯಾಯಿತು.

    ಎಂಟು ವರ್ಷದ ಬಾಲಕನನ್ನು ಹೆತ್ತ ತಾಯಿಯಿಂದ ಗಂಡನ ಮನೆಯವರು ದೂರ ಮಾಡಿದ್ದಲ್ಲದೆ, ಆತನನ್ನು ನಾನಾ ಕೆಲಸಗಳಿಗೆ ಬಳಸುತ್ತಿದ್ದರು. ಜೀವಂತವಿದ್ದರೂ ಮಗ ದೂರಾಗಿರುವ ದುಃಖದಲ್ಲಿ ಸುಜಾತಾ ಮುದಗಲ್, ದಿನನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರು. ಅತಿಯಾದ ಕುಡಿತದಿಂದ ಕೆಲ ತಿಂಗಳ ಹಿಂದೆ ಪತಿಯೂ ಮೃತಪಟ್ಟಿದ್ದ. ಇತ್ತ ಮಗನನ್ನು ಸಂಬಂಧಿಕರು ಕರೆದೊಯ್ದು ನಾನಾ ಕೆಟ್ಟ ಕೆಲಸಗಳನ್ನು ಮಾಡಿಸುತ್ತಿದ್ದಾರೆ ಎಂದು ಬಾಲಕನ ತಾಯಿ ಆರೋಪಿಸಿದ್ದರು. ಈ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದ್ದು, ತಾಯಿ-ಮಗ ಒಂದಾಗಿದ್ದಾರೆ. ಈ ಕುರಿತಾಗಿ ಏ.10ರಂದು ‘ತಾಯಿ-ಮಗನ ದೂರ ಮಾಡಿದ ಸಂಬಂಧಿಗಳು’ ಶೀರ್ಷಿಕೆಯಡಿ ವಿಜಯವಾಣಿ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಮಹಿಳಾ-ಮಕ್ಕಳ ಅಭಿವೃದ್ಧಿ ಅಧಿಕಾರಿಗಳು, ತಾಯಿ-ಮಗನನ್ನು ಒಂದು ಮಾಡುವ ಜತೆಗೆ ಮಹಿಳೆಗೆ ಆಕೆಯ ಅತ್ತೆಯ ಮನೆಯಲ್ಲಿ ಆಶ್ರಯ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಪ್ರಕರಣ ಸಾಕಷ್ಟು ಜಟಿಲವಾಗಿತ್ತು. ಸುಜಾತಾ ಸಂಬಂಧಿಕರು ಪ್ರಭಾವಿಗಳಾಗಿದ್ದರಿಂದ ಮಗನನ್ನು ತಾಯಿಯಿಂದ ದೂರ ಮಾಡಿದ್ದರು. ಬಾಲಕನಿಗೆ ಕಿರುಕುಳವೂ ನೀಡುತ್ತಿದ್ದರು. ಈ ಘಟನೆ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಪ್ರಾರಂಭದಲ್ಲಿ ಮಹಿಳೆಗೆ ನ್ಯಾಯ ದೊರಕಿರಲಿಲ್ಲ. ಸಂಬಂಧಿಕರು ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಮಹಿಳೆಗೆ ಅನ್ಯಾಯ ಮಾಡಲು ಹೊರಟಿದ್ದರು. ಕೊನೆಗೆ ಹರಸಾಹಸ ಪಟ್ಟ ಅಧಿಕಾರಿಗಳು, ಮಹಿಳೆಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಮಹಿಳೆ, ತನ್ನ ಅತ್ತೆಯ ಮನೆಯಲ್ಲಿದ್ದು, ಮೂರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts