More

    ಹೆತ್ತ ಮಕ್ಕಳನ್ನೇ ಸೀಮೆಎಣ್ಣೆ ಹಾಕಿ ಸುಟ್ಟ ತಾಯಿ; ಒಬ್ಬ ಮಗಳ ಸಾವು, ಇನ್ನೊಬ್ಬಳ ಸ್ಥಿತಿ ಚಿಂತಾಜನಕ

    ಮುಳಬಾಗಿಲು: ಕೌಟುಂಬಿಕ ಕಲಹದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡ ತಾಯಿ ತನ್ನ ಇಬ್ಬರು ಕಂದಮ್ಮಗಳನ್ನು ಸೀಮೆಎಣ್ಣೆ ಹಾಕಿ ಸುಟ್ಟು ರಾಕ್ಷಸಿ ಪ್ರವೃತ್ತಿ ಮೆರೆದ ಹೃದಯವಿದ್ರಾವಕ ಘಟನೆ ಮುಳಬಾಗಿಲು ನಗರದ ಅಂಜನಾದ್ರಿ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ. ಟನೆಯಲ್ಲಿ ಅಕ್ಷಯಾ (7) ನರಳಾಡಿ ಪ್ರಾಣ ಬಿಟ್ಟರೆ, ಇನ್ನೋರ್ವ ಪುತ್ರಿ ಉದಯಶ್ರೀ (6) ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.


    ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರಾಮಸಮುದ್ರಂ ಮಂಡಲಂ ಸಮೀಪದ ಬೂಸಾನಿ ಕುರುಪ್ಪಲಿಯ ಜ್ಯೋತಿ (26) ರಾಕ್ಷಸಿ ಪ್ರವೃತ್ತಿ ಮೆರೆದ ತಾಯಿ.

    ಘಟನೆ ಏನು: ಸಾಂಸಾರಿಕ ಕಲಹದಿಂದ ಮುಳಬಾಗಿಲು ಗಡಿಯ ಆಂಧ್ರದ ಬೂಸಾನಿ ಕುರುಪ್ಪಲಿಯಿಂದ ಮುಳಬಾಗಿಲಿಗೆ ತಮ್ಮಪುತ್ರಿಯರೊಂದಿಗೆ ಬಸ್​ ಪ್ರಯಾಣ ಬೆಳೆಸಿ ರಾತ್ರಿ ವೇಳೆಗೆ ಅಂಜನಾದ್ರಿ ಬೆಟ್ಟಕ್ಕೆ ಮಹಿಳೆ ಬಂದಿದ್ದಳು.

    5 ಲೀಟರ್​ ಸೀಮೆಎಣ್ಣೆ ಹಾಗೂ ಚಾಪೆ, ಬೆಡ್​ಶೀಟಿನೊಂದಿಗೆ ತೆರಳಿ ಬೆಟ್ಟದಲ್ಲಿ ಅಕ್ಷಯಾ ಹಾಗೂ ಉದಯಶ್ರೀಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಳು. ಟನೆಯಿಂದ ಅಕ್ಷಯಾ ಸ್ಥಳದಲ್ಲೇ ಮೃತಪಟ್ಟಿದ್ದು ಉದಯಶ್ರೀ ಸುಟ್ಟಗಾಯಗಳಿಂದ ತೀವ್ರವಾಗಿ ಅಸ್ವಸ್ಥಗೊಂಡಳು.

    ಈ ಸಂದರ್ಭ ಗಾಬರಿಗೊಳಗಾದ ತಾಯಿ ಮಕ್ಕಳನ್ನು ರಸುವ ಪ್ರಯತ್ನ ಮಾಡದೆ ಬೆಂಕಿ ನಂದಿದ ಬಳಿಕ ಬಂಡೆ ಮೇಲೆ ಇಬ್ಬರನ್ನೂ ಮಲಗಿಸಿ ಚಾಪೆ ಹಾಕಿ ಹೊದಿಸಿ ರಾತ್ರಿ ಮಕ್ಕಳೊಂದಿಗೇ ಕಳೆದಳು.

    ಬೆಳಗ್ಗೆ ಅಂಜನಾದ್ರಿ ಬೆಟ್ಟಕ್ಕೆ ವಾಯುವಿಹಾರಕ್ಕೆ ತೆರಳಿದ್ದವರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ನಗರಠಾಣೆ ಪಿಎಸ್​ಐ ಬಿ.ಮಂಜುನಾಥ್​ ಮತ್ತು ಸಿಬ್ಬಂದಿ ಧಾವಿಸಿ ಮಕ್ಕಳನ್ನು ಪರಿಶೀಲಿಸಿದಾಗ ಒಂದು ಮಗು ಸ್ಥಳದಲ್ಲೇ ಮೃತಪಟ್ಟಿದ್ದು ಉಸಿರಾಡುತ್ತಿದ್ದ ಮತ್ತೊಂದು ಮಗುವನ್ನು ಕೈಗೆತ್ತಿಕೊಂಡು ಆಸ್ಪತ್ರೆಗೆ ಸಾಗಿಸಿದರು.

    ಕಷ್ಟದ ಜೀವನಕ್ಕೆ ನೊಂದಿದ್ದ ಜ್ಯೋತಿ: ಆಂಧ್ರದ ಬೂಸಾನಿ ಕುರುಪ್ಪಲ್ಲಿಯ ಜ್ಯೋತಿ ಇದೇ ಗ್ರಾಮದ ತಿರುಮಲೇಶನನ್ನು 9 ವರ್ಷಗಳ ಹಿಂದೆ ತವರು ಮನೆಯ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದಳು. ದಂಪತಿ ಮಧ್ಯೆ ಸಾಂಸಾರಿಕ ಕಲಹ ಏರ್ಪಟ್ಟಿತ್ತು. ಇಬ್ಬರು ಹೆಣ್ಣುಮಕ್ಕಳಿಗೆ ಜನ್ಮ ನೀಡಿ ಕಷ್ಟದ ಜೀವನ ಸಾಗಿಸುತ್ತಿದ್ದಳು.

    ಕಲಹ ಅತಿರೇಕಕ್ಕೆ ಹೋದಾಗ ಮನೆ ತೊರೆದು ಮಕ್ಕಳೊಂದಿಗೆ ಹೊರಬಂದು ಈ ಕೃತ್ಯ ಮಾಡಿದ್ದಾಳೆ. ಮಗುವಿನ ಕೊಲೆ, ಮತ್ತೊಂದು ಮಗುವಿನ ಕೊಲೆ ಯತ್ನ ಆರೋಪಿಯಾಗಿ ಈಗ ಪೊಲೀಸರ ವಶದಲ್ಲಿದ್ದಾಳೆ.


    ಉದಯಶ್ರೀ ಯನ್ನು ಕೋಲಾರದ ಆರ್​.ಎಲ್​ ಜಾಲಪ್ಪ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಜ್ಯೋತಿ ಗಂಡ ತಿರುಮಲೇಶ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತು ತಾನೂ ಸತ್ತರೆ ಮಕ್ಕಳ ಬದುಕು ಏನಾಗುತ್ತದೆ ಎಂದು ಮೊದಲು ಮಕ್ಕಳನ್ನು ಸಾಯಿಸಿ ಬಳಿಕ ತಾನೂ ಸಾಯಲು ಮುಂದಾದ ತಾಯಿಗೆ ಸಾವು ಎಷ್ಟು ಕಠಿಣ ಎಂಬ ಅರಿವು ಆಗುತ್ತಿದ್ದಂತೆ ಸುಟ್ಟ ಮಕ್ಕಳೊಂದಿಗೆ ರಾತ್ರಿ ಕಳೆದಿದ್ದಾರೆ.

    ಆರೋಪಿ ಜ್ಯೋತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಬೇಕಾಗಿದೆ. ಬಳಿಕ ಘಟನೆಯ ವಿವರ ಲಭ್ಯವಾಗಲಿದೆ.

    ಬಿ.ಮಂಜುನಾಥ್​ ಪಿಎಸ್ಐ ಮುಳಬಾಗಿಲು ನಗರಠಾಣೆ


    ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾದ ದಂಪತಿ ನಡುವಿನ ಕಲಹದಿಂದಾಗಿ ಏನೂ ಅರಿಯದ ಮಕ್ಕಳನ್ನು ಸೀಮೆಎಣ್ಣೆ ಹಾಕಿ ಸುಟ್ಟು ಹಾಕಿರುವ ರಾಕ್ಷಸಿ ತಾಯಿಗೆ ತಕ್ಕ ಶಿಕ್ಷೆಯಾಗಬೇಕು. ಈಕೆಯ ಗಂಡನಿಗೂ ಶಿಕ್ಷೆ ವಿಧಿಸಬೇಕು.

    ನಾರಾಯಣಸ್ವಾಮಿ, ಪಳ್ಳಿಗರ ಪಾಳ್ಯ ನಿವಾಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts