More

    ಹೊಸ ಸಕ್ಕರೆ ಕಾರ್ಖಾನೆಗೆ 50ಕ್ಕೂ ಹೆಚ್ಚು ಅರ್ಜಿ

    ಹುಬ್ಬಳ್ಳಿ: ಐವತ್ತಕ್ಕೂ ಹೆಚ್ಚು ಹೊಸ ಸಕ್ಕರೆ ಕಾರ್ಖಾನೆಗಳಿಗೆ ಅರ್ಜಿ ಬಂದಿವೆ ಎಂದು ಕೈಮಗ್ಗ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದ್ದಾರೆ.
    ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಿದ್ದ ಶೇ. 99ರಷ್ಟು ಬಾಕಿ ಹಣವನ್ನು ಈಗಾಗಲೇ ನೀಡಿವೆ. ನಾನು ಸಚಿವನಾದ ನಂತರ ಇದುವರೆಗೆ 19,634 ಕೋಟಿ ರೂ. ಬಾಕಿ ಹಣವನ್ನು ರೈತರಿಗೆ ಪಾವತಿಸಲಾಗಿದೆ. ಇನ್ನೂ ಸುಮಾರು 100 ಕೋಟಿ ರೂ. ಬಾಕಿ ಹಣ ನೀಡುವುದಷ್ಟೇ ಇದೆ ಎಂದರು.
    ಮೈ ಶುಗರ್, ಪಾಂಡವಪುರ, ಶ್ರೀರಾಮ, ರನ್ನ ಸಕ್ಕರೆ ಕಾರ್ಖಾನೆಗಳಿಗೆ ಪುನಃಶ್ಚೇತನ ನೀಡಲಾಗಿದೆ. ಬೀದರನ ಬಿಎಸ್​ಎಸ್​ಕೆ ಕಾರ್ಖಾನೆಗೂ ಶೀಘ್ರ ಪುನಃಶ್ಚೇತನ ನೀಡಲಾಗುವುದು ಎಂದು ಹೇಳಿದರು.
    ಗೋವಿನಜೋಳ, ಅಕ್ಕಿ, ಭತ್ತ, ಗೋದಿಯಿಂದಲೂ ಇಥೆನಾಲ್ ತಯಾರಿಸಬಹುದು. ಇದರಿಂದ ರೈತರ ಬೆಳೆಗಳಿಗೆ ಹೆಚ್ಚು ಬೇಡಿಕೆ ಬರಲಿದೆ ಎಂದು ತಿಳಿಸಿದರು. ಈಗಾಗಲೇ ಇಥೆೆನಾಲ್ ಸಮಿತಿ ರಚಿಸಿದ್ದು, ಸಮಿತಿಯಲ್ಲಿ ತಂತ್ರಜ್ಞರು, ರೈತ ಮುಖಂಡರು ಇದ್ದಾರೆ. ಸಮಿತಿ ಬೇರೆ ದೇಶಗಳಿಗೆ ತೆರಳಿ ಅಧ್ಯಯನ ನಡೆಸಲಿದೆ. ಹೊಸ ಸಂಶೋಧನೆಗಳನ್ನು ಇಥೆನಾಲ್ ಉತ್ಪಾದನೆಗೆ ಬಳಸಲಾಗುವುದು ಎಂದು ಹೇಳಿದರು. ಕಲಘಟಗಿಯಲ್ಲಿ 2 ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಅರ್ಜಿಗಳು ಬಂದಿದ್ದವು. ತಾಂತ್ರಿಕ ಕಾರಣಗಳಿಂದ ಅರ್ಜಿಗಳು ತಿರಸ್ಕರಿಸಲ್ಪಟ್ಟಿವೆ. ಮುಂದಿನ ದಿನಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ ಎರಡ್ಮೂರು ಸಕ್ಕರೆ ಕಾರ್ಖಾನೆಗಳು ಬರುವ ಸಾಧ್ಯತೆ ಇದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts