More

    ಕರೊನಾಘಾತ : ಗಂಗಾನದಿಯಲ್ಲಿ ಹರಿದುಬಂದವು 40ಕ್ಕೂ ಹೆಚ್ಚು ಹೆಣಗಳು !

    ಪಟ್ನಾ : ಊದಿಕೊಂಡಿರುವ ಮತ್ತು ಕೊಳೆಯುತ್ತಿರುವ ದೇಹಗಳು ನೀರಿನಲ್ಲಿ ತೇಲಿಕೊಂಡು ಬಂದು ಇಂದು ಬೆಳಿಗ್ಗೆ ಬಿಹಾರದ ಬಕ್ಸಾರ್​​ ಪ್ರಾಂತ್ಯದ ಜನರಿಗೆ ಭಾರತದ ಕೋವಿಡ್ ಬಿಕ್ಕಟ್ಟಿನ ಪ್ರಮಾಣ ಎಂತಹುದು ಎಂದು ತೋರಿಸಿವೆ. ಬಿಹಾರ ಮತ್ತು ಉತ್ತರಪ್ರದೇಶದ ಗಡಿಭಾಗದಲ್ಲಿರುವ ಚೌಸಾ ಪಟ್ಟಣದಲ್ಲಿ ಗಂಗಾನದಿಯ ತೀರಕ್ಕೆ ಈ ರೀತಿಯಾಗಿ 40ಕ್ಕೂ ಹೆಚ್ಚು ಶವಗಳು ಬಂದು ಸೇರಿವೆ.

    ಈ ಶವಗಳು ಉತ್ತರಪ್ರದೇಶದಿಂದ ನದಿಯಲ್ಲಿ ಹರಿದುಬಂದಿವೆ. ಶವಸಂಸ್ಕಾರ ಮಾಡಲು ಅಥವಾ ಹೂಳಲು ಸ್ಥಳಾವಕಾಶ ಸಿಗದ ಕರೊನಾ ರೋಗಿಗಳ ಕುಟುಂಬಸ್ಥರು ಶವವನ್ನು ನೀರಿಗೆ ಹಾಕಿದ್ದಾರೆ ಎಂದು ಸ್ಥಳೀಯ ಆಡಳಿತ ಅಭಿಪ್ರಾಯಪಟ್ಟಿದೆ. “ಇಂದು ಸುಮಾರು 40 ರಿಂದ 45 ಶವಗಳು ತೇಲಿ ಬಂದಿವೆ” ಎಂದು ಚೌಸದ ಮಹದೇವ ಘಾಟ್​ನಲ್ಲಿ ನಿಂತ ಜಿಲ್ಲಾ ಅಧಿಕಾರಿ ಅಶೋಕ್​ ಕುಮಾರ್​ ಹೇಳಿದರು.

    ಇದನ್ನೂ ಓದಿ: ಅಸ್ಸಾಂನ 15ನೇ ಸಿಎಂ ಆದ ಹಿಮಂತ ಬಿಸ್ವ ಸರ್ಮ

    “ದೇಹಗಳ ಸ್ಥಿತಿ ನೋಡಿದರೆ ಅವರು ನಾಲ್ಕೈದು ದಿನಗಳಿಂದ ನೀರಿನಲ್ಲಿದ್ದ ಹಾಗಿವೆ. ನಾವು ಅವನ್ನು ವಿಲೇವಾರಿ ಮಾಡುತ್ತಿದ್ದೇವೆ. ಬಹ್ರೈಚ್​ ಅಥವಾ ವಾರಾಣಸಿ ಅಥವಾ ಅಲಹಾಬಾದ್ – ಹೀಗೆ ಉತ್ತರಪ್ರದೇಶದ ಯಾವ ಊರಿನಿಂದ ಇವು ಬಂದಿವೆ ಎಂಬುದನ್ನು ತನಿಖೆ ನಡೆಸಬೇಕಾಗಿದೆ. ದೇಹಗಳು ಇಲ್ಲಿನವಲ್ಲ, ಏಕೆಂದರೆ ನಮ್ಮಲ್ಲಿ ಶವವನ್ನು ನೀರಿಗೆ ಎಸೆಯುವ ಸಂಪ್ರದಾಯ ಇಲ್ಲ” ಎಂದು ಮತ್ತೊಬ್ಬ ಅಧಿಕಾರಿ ಕೆ.ಕೆ.ಉಪಾಧ್ಯಾಯ ಹೇಳಿದ್ದಾರೆ.

    ಚೌಸ ಪಟ್ಟಣ ಮತ್ತು ಸುತ್ತಮುತ್ತಲ ಗ್ರಾಮಸ್ಥರಲ್ಲಿ ಇದು ಆತಂಕ ಮೂಡಿಸಿದೆ. ಈ ದೇಹಗಳಿಂದಾಗಿ ಮತ್ತು ನದಿ ನೀರಿನಿಂದಾಗಿ ಕರೊನಾ ಸೋಂಕು ಅಥವಾ ಮತ್ತಾವುದಾದರೂ ಖಾಯಿಲೆ ಹರಸಬಹುದೆಂಬ ಭಯ ಉಂಟಾಗಿದೆ. ಜಿಲ್ಲಾ ಆಡಳಿತವು ಈ ದೇಹಗಳನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

    ಶನಿವಾರದಂದು ಹಮೀರಪುರ ಪಟ್ಟಣದಲ್ಲಿ ಯಮುನಾ ನದಿಯಲ್ಲಿ ಅರ್ಧಸುಟ್ಟ ಶವಗಳು ಕಾಣಿಸಿಕೊಂಡಿದ್ದವು. ಸರ್ಕಾರಿ ಎಣಿಕೆಯಲ್ಲಿ ತೋರಿಸಲಾಗದ ಹೆಚ್ಚಿನ ಸಂಖ್ಯೆಯ ಕರೊನಾ ಸಾವುಗಳಿಗೆ ಈ ಶವಗಳು ಪುರಾವೆಯಾಗಿವೆ ಎಂದು ಕಾಂಗ್ರೆಸ್​ ಆರೋಪಿಸಿದೆ. ಕಳೆದ ವಾರ ದೇಶದಲ್ಲಿ ಪ್ರತಿನಿತ್ಯ 3 ಲಕ್ಷ ಕರೊನಾ ಪ್ರಕರಣಗಳು ದಾಖಲಾಗಿದ್ದು, 4,000 ಸಾವುಗಳು ವರದಿಯಾಗಿದ್ದವು ಎನ್ನಲಾಗಿದೆ. (ಏಜೆನ್ಸೀಸ್)

    ರೆಮ್‌ಡಿಸಿವಿರ್ ಕಾಳಸಂತೆ : ಬಿಬಿಎಂಪಿ ನೌಕರ ಸೇರಿ ನಾಲ್ವರ ಬಂಧನ

    ಲಸಿಕೆ ವಿಷಯದಲ್ಲಿ ನ್ಯಾಯಾಂಗ ಮಧ್ಯಪ್ರವೇಶಿಸುವುದು ಬೇಡ ಎಂದ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts