More

    ಹೊಸ ವರ್ಷಾಚರಣೆ ನಡುವೆ ಕೋಲ್ಕತ ಪೊಲೀಸರಿಂದ ಬಂಧನಕ್ಕೊಳಗಾದವರ ಸಂಖ್ಯೆ ಕೇಳಿದರೆ ಬೆಚ್ಚಿ ಬೀಳ್ತೀರಾ…

    ಕೋಲ್ಕತ: ಹೊಸ ವರ್ಷ ಸಂಭ್ರಮಾಚರಣೆ ನಡುವೆಯೇ ಕೋಲ್ಕತ ನಗರದ ವಿವಿಧ ಭಾಗಗಳಲ್ಲಿ ಸುಮಾರು 3,678 ಮಂದಿಯನ್ನು ವಿವಿಧ ಅಪರಾಧಗಳಲ್ಲಿ ತೊಡಗಿದ ಆರೋಪದ ಮೇಲೆ ಕೋಲ್ಕತ ಪೊಲೀಸರು ಬಂಧಿಸಿರುವುದಾಗಿ ಹಿರಿಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

    ಒಟ್ಟು 3,678 ಬಂಧಿತರಲ್ಲಿ 148 ಮಂದಿ ವಿರುದ್ಧ ಜಾಮೀನು ರಹಿತ, 531 ಡ್ರಂಕ್​ ಆ್ಯಂಡ್​ ಡ್ರೈವ್​ ಹಾಗೂ ವೇಗದ ಚಾಲನೆ, 654 ತ್ರಿಬಲ್​ ರೈಡಿಂಗ್​ ಮತ್ತು 1289 ಹೆಲ್ಮೆಟ್​ ಧರಿಸದ ಪ್ರಕರಣಗಳನ್ನು ದಾಖಲಿಸಲಾಗಿದೆ.

    ಮುಂಜಾಗ್ರತ ಕ್ರಮವಾಗಿ 50 ಮಂದಿಯನ್ನು ಮತ್ತು ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ 831 ಮಂದಿಯನ್ನು ಬಂಧಿಸಲಾಗಿದೆ. ಅಕ್ರಮ ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಆರೋಪ ಮೇಲೆ ಓರ್ವನನ್ನು ಹಾಗೂ ರೌಡಿಸಂ ಆಧಾರದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

    ಹೊಸ ವರ್ಷ ಹಿಂದಿನ ದಿನವಾದ ಮಂಗಳವಾರ ರಾತ್ರಿ ನಡೆದ ಗಲಭೆಯಲ್ಲಿ ಸುಮಾರು 18 ವಾಹನಗಳನ್ನು ನಿಯಮ ಉಲ್ಲಂಘನೆ ಆರೋಪದಲ್ಲಿ ವಶಕ್ಕೆ ಪಡೆಯಲಾಗಿದೆ. ನಾಪತ್ತೆಯಾಗಿದ್ದ 14 ಮೊಬೈಲ್​ ಫೋನ್​ಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

    ಇದರೊಟ್ಟಿಗೆ 2.34,68 ಲೀಟರ್​ ಮದ್ಯ ಮತ್ತು 2.33 ಕೆ.ಜಿ ಗಾಂಜಾ ಹಾಗೂ 2.5 ಕೆ.ಜಿ ಸಿಡಿಮದ್ದುಗಳನ್ನು ವಶಕ್ಕೆ ಪಡೆಯಲಾಗಿದೆ. ಹೊಸ ವರ್ಷದಂದು ತೊಂದರೆ ನೀಡಿದ ಮತ್ತಷ್ಟು ಮಂದಿಯನ್ನು ಬಂಧಿಸಬೇಕಾಗಿದ್ದು, ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

    ಕ್ರಿಸ್​ಮಸ್​ನಿಂದ ಹೊಸ ವರ್ಷಾಚರಣೆ ವರೆಗೂ ನಗರದಲ್ಲಿ ಸುಮಾರು 5 ಸಾವಿರ ಪೊಲೀಸರನ್ನು ಮಹಿಳಾ ಸುರಕ್ಷಾ ದೃಷ್ಟಿಯಿಂದ ನಿಯೋಜಿಸಲಾಗಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts