More

    ವಾಡಿಕೆಗಿಂತ ಮುಂಚೆಯೇ ರಾಜ್ಯಕ್ಕೆ ಮುಂಗಾರು ಆಗಮನ !

    ಬೆಂಗಳೂರು: ಈ ಬಾರಿ ಮುಂಗಾರು ಮಾರುತಗಳು ರಾಜ್ಯಕ್ಕೆ ವಾಡಿಕೆಗಿಂತ ಮುಂಚೆಯೇ ಪ್ರವೇಶಿಸಲಿವೆ. ಮೇ 31 ರಂದು ಕೇರಳಕ್ಕೆ ಆಗಮಿಸಲಿದ್ದು, ನಂತರ ಮಾರುತಗಳು ಪ್ರಬಲವಾದರೆ ಬಹುತೇಕ ಅವತ್ತಿನ ದಿನವೇ ಅಥವಾ ಜೂ.1 ರಂದು ಕರ್ನಾಟಕ ಪ್ರವೇಶಿಸಲಿವೆ. ಅಂದಿನ ವಾತಾವರಣ ಬದಲಾವಣೆಯಾದಲ್ಲಿ ಮಾತ್ರ, ಒಂದೆರೆಡು ದಿನ ತಡವಾಗಿ ಆಗಮಿಸಲಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಬಾರಿ ಜೂನ್​ 4 ರಂದು ಮುಂಗಾರು ಪ್ರವೇಶಿಸಿತ್ತು.

    ಮಳೆ ಪ್ರಮಾಣ : ಈ ಬಾರಿ ಮುಂಗಾರು ಮಳೆ ರಾಜ್ಯದಲ್ಲಿ ಆಶಾದಾಯಕವಾದರೂ ಕೆಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಚಿತ್ರದುರ್ಗದಲ್ಲಿ ಈ ಬಾರಿ ವಾಡಿಕ್ಕೆಕ್ಕಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಮಳೆ ಬೀಳಲಿದೆ.

    ಇದನ್ನೂ ಓದಿ: ಕೇರಳ ಲಾಕ್​ಡೌನ್ ವಿಸ್ತರಣೆ ; ನಾಲ್ಕು ಜಿಲ್ಲೆಗಳಲ್ಲಿ ಟ್ರಿಪಲ್ ಲಾಕ್​ಡೌನ್

    ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಉತ್ತರ ಒಳನಾಡಿನ ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಕೊಪ್ಪಳ, ಹಾವೇರಿ, ದಾವಣಗೆರೆ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬೀಳಲಿದೆ.

    ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಬಳ್ಳಾರಿಯಲ್ಲಿ ವಾಡಿಕೆಯಷ್ಟೆ ಮಳೆಯಾಗಲಿದೆ ಎಂದು ಹವಾಮಾನ ತಜ್ಞ ಡಾ.ಶ್ರೀನಿವಾಸ ರೆಡ್ಡಿ ವಿಜಯವಾಣಿಗೆ ತಿಳಿಸಿದ್ದಾರೆ.

    ರಾಷ್ಟ್ರ ರಾಜಧಾನಿಯಲ್ಲಿ ಇಳಿಯುತ್ತಿದೆ ಸೋಂಕಿನ ಪ್ರಮಾಣ

    ಯುವ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಶ್ರೀನಿವಾಸ್​ ವಿಚಾರಣೆ ನಡೆಸಿದ ದೆಹಲಿ ಪೊಲೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts