More

    ಕೇರಳಕ್ಕೆ ಪ್ರವೇಶಿಸಿದ ಮುಂಗಾರು, ಕರ್ನಾಟಕಕ್ಕೆ ಯಾವಾಗ?

    ಬೆಂಗಳೂರು: ಈ ಬಾರಿ ನೈಋತ್ಯ ಮುಂಗಾರು ಮಾರುತಗಳು ವಾಡಿಕೆಗಿಂತ ಮುಂಚೆಯೇ ಅಂದರೆ ಭಾನುವಾರ ಕೇರಳಕ್ಕೆ ಪ್ರವೇಶಿಸಿವೆ. ಜೂ.1ರಂದು ಭಾರತಕ್ಕೆ ಆಗಮಿಸಬೇಕಿತ್ತು. ಆದರೆ, ಈ ಬಾರಿ 3 ದಿನ ಮುನ್ನವೇ ಅಂದರೆ ಮೇ 29ರಂದು ಕೇರಳದ ಕರಾವಳಿಗೆ ಮಾರುತಗಳು ಅಪ್ಪಳಿಸಿವೆ.

    ಇನ್ನು ಮುಂಗಾರು ಕರ್ನಾಟಕಕ್ಕೆ ಪ್ರವೇಶಿಸುವ ಸಂಬಂಧ ಈ ರೀತಿ ಅಂದಾಜಿಸಲಾಗಿದೆ. ಮಾರುತಗಳು ಪ್ರಬಲವಾದರೆ ಒಂದರೆಡು ದಿನಗಳಲ್ಲಿ ರಾಜ್ಯಕ್ಕೆ ಆಗಮಿಸುವ ನಿರೀಕ್ಷೆ ಇದೆ. ದುರ್ಬಲವಾದರೆ ತುಸು ವಿಳಂಬವಾಗಲಿದೆ ಎಂದು ಹೇಳಲಾಗಿದೆ.

    ಕಳೆದ 24 ಗಂಟೆಯಲ್ಲಿ ಕೇರಳದ 14 ಮಳೆಯ ಮೇಲ್ವಿಚರಣಾ ಕೇಂದ್ರಗಳ ಪೈಕಿ 10 ಕೇಂದ್ರಗಳಲ್ಲಿ 2.5 ಮಿಮೀ ಮಳೆ ಬಿದ್ದಿರುವುದು ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಖಚಿತಪಡಿಸಿದೆ. ಈ ಹಿನ್ನೆಲೆಯಲ್ಲಿ ಕೇರಳ, ದಕ್ಷಿಣ ತಮಿಳುನಾಡು ಮತ್ತು ಲಕ್ಷದೀಪ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಲಿದೆ.

    2013ರ ಜೂ.1ರಂದು, 2014ರ ಜೂ 6ರಂದು, 2015ರ ಜೂ 5ರಂದು, 2016ರ ಜೂ 8ರಂದು, 2017ರ ಮೇ 30ರಂದು, 2018ರ ಮೇ 29ರಂದು, 2019ರ ಜೂ 8ರಂದು, 2020ರ ಜೂ 1 ರಂದು, 2021ರ ಜೂ 3ರಂದು ಹಾಗೂ 2022ರ ಮೇ 29ರಂದು ಕೇರಳಕ್ಕೆ ನೈಋತ್ಯ ಮುಂಗಾರು ಮಾರುತಗಳು ಆಗಮಿಸಿವೆ.

    ಉತ್ತಮ ವರ್ಷಧಾರೆ: ಭಾರತದಲ್ಲಿ ಈ ಬಾರಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ವಾಡಿಕೆಯಂತೆ ಮುಂಗಾರು ಮಳೆ ಬೀಳಲಿದೆ. ಶೇ.99 ಮಳೆಯಾಗಲಿದೆ ಎಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಸ್ಕೈಮೆಟ್ ಸಹ ಶೇ.98 ಮಳೆಯಾಗಲಿದೆ ಎಂದು ಹೇಳಿದೆ. ಈ ಬಾರಿ ಬೇಸಿಗೆಯಲ್ಲಿ ವಾಡಿಕೆಗಿಂತ ಕಡಿಮೆ ಉಷ್ಣಾಂಶ ದಾಖಲಾದ ಹಿನ್ನೆಲೆಯಲ್ಲಿ ವಾಡಿಕೆಯಷ್ಟೇ ಮಳೆಯಾಗುವುದಕ್ಕೆ ಕಾರಣವಾಗಿದೆ. ಈ ಬಾರಿ ಮುಂಗಾರು ಮಾರುತಗಳು ಪ್ರವೇಶಿಸಿದ ಬಳಿಕ ಕರ್ನಾಟಕದಲ್ಲಿಯೂ ಉತ್ತಮ ವರ್ಷಧಾರೆಯಾಗಲಿದೆಎಂದು ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಹೇಳಿದ್ದಾರೆ.

    ಆಧಾರ್ ಕಾರ್ಡ್​​ ಫೋಟೋ ಹಂಚಿಕೊಳ್ಳಬಾರದಂತೆ, ನಿಜನಾ?: ಆಧಾರ್​ ಪ್ರಾಧಿಕಾರದಿಂದ ಹೊರಬಿತ್ತು ಮತ್ತೊಂದು ಪತ್ರಿಕಾ ಹೇಳಿಕೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts