More

    ಬೀರೂರಲ್ಲಿ ಬಾಧಿಸುತ್ತಿದೆ ಮಂಗನ ಬಾವು ಸೋಂಕು

    ಬೀರೂರು: ಬೀರೂರು ವ್ಯಾಪ್ತಿಯಲ್ಲಿ ಮಂಗನ ಬಾವು (ಗದ್ದಬಾವು) ಹೆಚ್ಚಾಗಿ ಹರಡುತ್ತಿದ್ದು, ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸೋಂಕು ವ್ಯಾಪಾಕವಾಗಿ ಹರಡುತ್ತಿದೆ. ಎಲ್ಲೆಡೆ ಆತಂಕ ಸೃಷ್ಟಿಯಾಗಿದೆ.

    ಮಂಗನ ಬಾವು ಕಾಯಿಲೆಗೆ ಇಂಗ್ಲಿಷ್‌ನಲ್ಲಿ ಮಮ್ಸ್ ಎಂದು, ಸ್ಥಳೀಯವಾಗಿ ಗದ್ದಮ್ಮ ಎನ್ನುತ್ತಾರೆ. ಈ ಸೋಂಕು ಡಿಸೆಂಬರ್‌ನಲ್ಲಿ ಹೆಚ್ಚಾಗಿ ಪ್ರತಿದಿನ 30-50 ಮಕ್ಕಳಲ್ಲಿ ಕಾಣಿಸಿಕೊಂಡಿತ್ತು. ಜನವರಿ ನಂತರದಲ್ಲಿ ಇಳಿಮುಖಗೊಂಡಿತ್ತು. ಆದರೆ ಇದೀಗ ನಿತ್ಯ 2-3 ಪ್ರಕರಣಗಳು ದಾಖಲಾಗುತ್ತಿವೆ. ಈ ವೈರಸ್ ಗಂಟಲಿನಲ್ಲಿರುವ ಪ್ಯಾರೋಟೀಟ್ ಗ್ರಂಥಿಗಳಿಗೆ ಆಕ್ರಮಿಸಿಕೊಳ್ಳುವ ಕಾರಣ ಗಂಟಲಲ್ಲಿ ನೋವು, ಬಳಲಿಕೆ, ಜ್ವರ, ವಾಂತಿ ಹಾಗೂ ತಲೆನೋವು ಆರಂಭವಾಗುತ್ತದೆ. 4-5 ದಿನಗಳವರೆಗೂ ಬಾಧಿಸುವುದಲ್ಲದೆ ವಾರದವರೆಗೂ ದೇಹದ ಶಕ್ತಿಯನ್ನೆ ಕುಂದಿಸಿ ಜನರು ಬಳಲಿ ಬೆಂಡಾಗುವಂತೆ ಮಾಡುತ್ತಿದೆ.
    ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಅರುಣ್ ಪ್ರತಿಕ್ರಿಯಿಸಿ, ಮಂಗನಬಾವು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗಕ್ಕೆ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಲಸಿಕೆಯೂ ಇಲ್ಲ. ಬದಲಾಗಿ 9ರಿಂದ 15 ತಿಂಗಳೊಳಗಿನ ಮಕ್ಕಳಿಗೆ ನೀಡುವ ರೋಗ ನಿರೋಧಕ ಲಸಿಕೆಯನ್ನು ತಪ್ಪದೇ ಹಾಕಿಸಬೇಕು. ಇದರಿಂದ ಮಂಗನಬಾವು ಹರಡುವು ಸಾಧ್ಯತೆ ಇರುವುದಿಲ್ಲ ಎಂದಿದ್ದಾರೆ.
    ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಕೆಂಚೇಗೌಡ ಪತ್ರಿಕೆಗೆ ಮಾಹಿತಿ ನೀಡಿ, ಮಮ್ಸ್ ರೋಗಕ್ಕೆ ಯಾವುದೇ ನಿರ್ದಿಷ್ಟವಾದ ಲಸಿಕೆಗಳಿಲ್ಲ. ವಾರದವರೆಗೂ ಇದ್ದು ದೇಹದ ಶಕ್ತಿಯನ್ನು ಕುಗ್ಗಿಸಿ ಅದೇ ಹೊರಟು ಹೋಗುತ್ತದೆ. ಜ್ವರ, ಸುಸ್ತುಗಳಿದ್ದರೆ ಅದಕ್ಕೆ ಚಿಕಿತ್ಸೆ ಪಡೆಯಬಹುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts