More

    ಕಾರ್ಟೂನ್ ಉದ್ಯಾನಕ್ಕೆ ಕಾಸಿನ ಕೊರತೆ

    ಯು.ಎಸ್. ಪಾಟೀಲ ದಾಂಡೇಲಿ

    ಇಲ್ಲಿಯ ದಂಡಕಾರಣ್ಯದಲ್ಲಿ ನಿರ್ವಣವಾದ ವ್ಯಂಗ್ಯಚಿತ್ರಗಳನ್ನೇ ಹೊಂದಿರುವ ಇಕೋ ಪಾರ್ಕ್ ದೇಶದ ಮೊದಲ ಕಾರ್ಟೂನ್ ಪಾರ್ಕ್ ಆಗಿ ಗುರುತಿಸಲ್ಪಟ್ಟಿದೆ. ಹಳಿಯಾಳ ಡಿಎಫ್​ಒ ನೇತೃತ್ವದಲ್ಲಿ ಸ್ಥಳೀಯ ಇಕೋ ಪಾರ್ಕ್ ಸಮಿತಿಯ ಸಹಕಾರದಿಂದ ಆರಂಭವಾದ ಉದ್ಯಾನ ಇದೀಗ ಕುಂಟುತ್ತ ಸಾಗಿದೆ.

    ಆದಾಯ ಕಡಿಮೆ: 2017ರ ಏಪ್ರಿಲ್ 15ರಂದು ಆರಂಭವಾದ ಇಕೋ ಪಾರ್ಕ್​ನ ಆದಾಯಕ್ಕೆ ಈಗ ಹೊಡೆತ ಬಿದ್ದಿದೆ. ಪ್ರವೇಶ ಶುಲ್ಕವಾಗಿ ಹಿರಿಯರಿಗೆ 20 ರೂ. ಹಾಗೂ ಮಕ್ಕಳಿಗೆ 10 ರೂ. ನಿಗದಿಪಡಿಸಲಾಗಿದೆ. ಒಂದು ವೇಳೆ ಶಾಲೆ ಮಕ್ಕಳು ತಂಡೋಪತಂಡವಾಗಿ ಬಂದರೆ ಶುಲ್ಕದಲ್ಲಿ ಅವರಿಗೆ ರಿಯಾಯಿತಿ ನೀಡಲಾಗುತ್ತಿದೆ. ಇಲ್ಲಿ 10 ಜನರು ಕಾರ್ಯನಿರ್ವಹಿಸುತ್ತಿದ್ದು, ಬರುವ ಆದಾಯ ಸಿಬ್ಬಂದಿ ಸಂಬಳಕ್ಕೆ ಸಾಕಾಗುತ್ತಿಲ್ಲ. ತಿಂಗಳಿಗೆ 60 ಸಾವಿರ ರೂ. ಆದಾಯವಿದ್ದರೆ, ಸಿಬ್ಬಂದಿ ಸಂಬಳವೇ 90 ಸಾವಿರ ರೂ. ಆಗುತ್ತಿದೆ. ಇನ್ನು ನಿರ್ವಹಣೆ ವೆಚ್ಚ ಹೇಗೆಂಬ ಪ್ರಶ್ನೆ ಮೂಡುವಂತಾಗಿದೆ.

    ಆಗಬೇಕಾದ ಕೆಲಸ: ಬೆಳಗಿನ ಜಾವ ಮತ್ತು ಸಂಜೆ ವಾಯು ವಿಹಾರಕ್ಕೆ ಹೆಚ್ಚಿನ ಜನ ಬರುತ್ತಾರೆ. ಇಲ್ಲಿಯ ಮತ್ಸ್ಯಾಲಯ ಬಂದ್ ಆಗಿದೆ. ಚಿಕ್ಕ ರೈಲನ್ನು ಮಕ್ಕಳಿಗಾಗಿ ಆರಂಭಿಸಬೇಕು. ಜಿಪ್ ಲೈನ್, ಹಿರಿಯರಿಗಾಗಿಯೂ ಕೆಲ ಆಟದ ಯೋಜನೆ ಆರಂಭಿಸಬೇಕು. ಅಲ್ಲದೆ, ಒಂದು ಮ್ಯೂಜಿಕಲ್ ಕಾರಂಜಿ ಮತ್ತು ಪ್ರತಿ ದಿನ ಸಂಜೆ ಪ್ರಾಣಿ, ಪಕ್ಷಿ, ವನ್ಯ ಜೀವಿ ಸಂರಕ್ಷಣೆ ಕುರಿತು ಡಾಕ್ಯೂಮೆಂಟರಿ ಚಿತ್ರಗಳ ಪ್ರದರ್ಶನವಾಗಬೇಕಾಗಿದೆ. ವಯಸ್ಕರಿಗೆ ಮೂರು ಗಾಲಿಯ ವಾಹನ, ಪಾರ್ಕ್​ನಲ್ಲಿ ಸುತ್ತಾಡಲು ಸಹಾಯಕರ ನೇಮಕ ಮಾಡಬೇಕಾಗಿದೆ. ಚಿಟ್ಟೆ ಕೇಂದ್ರ, ಪ್ರವಾಸಿಗರ ವಾಹನಗಳಿಗೆ ಉತ್ತಮ ರ್ಪಾಂಗ್ ವ್ಯವಸ್ಥೆ ಬೇಕಾಗಿದೆ.

    ಪಾರ್ಕ್​ನಲ್ಲಿ ಏನೇನಿವೆ?: ಈ ಪಾರ್ಕ್​ನಲ್ಲಿ ಒಟ್ಟು 100 ಕಾರ್ಟೂನ್ ಮಾಡೆಲ್​ಗಳಿವೆ. ಅವಗಳಲ್ಲಿ ಒಗ್ಗಟ್ಟಿನ ಮಂತ್ರ ಬಿಂಬಿಸುವ ಇರುವೆಗಳ ಸಾಲು, ಚಾರ್ಲಿ ಚಾಪ್ಲಿನ್, ಚೋಟಾ ಭೀಮ್ ಮೋಟು ಪತ್ಲು, ಜಂಗಲ್ ಬುಕ್, ಟಾಮ್ ಆಂಡ್ ಜರಿ, ಅವೆಂಜರ್ಸ್ ಕಾರ್ಟೂನ್​ಗಳು ಹೆಚ್ಚು ಜನಪ್ರಿಯವಾಗಿವೆ. ಚಿಕ್ಕ ಮಕ್ಕಳಷ್ಟೇ ಅಲ್ಲ ದೊಡ್ಡವರು ಕೂಡ ಈ ಗೊಂಬೆಗಳನ್ನು ನೋಡಿ ಅಕರ್ಷಿತರಾಗುತ್ತಾರೆ. ಆಟಕ್ಕಾಗಿ ಜೋಕಾಲಿ, ಜಾರು ಬಂಡೆ, ಬಹು ಆಟಿಕೆಗಳು ಸಾರ್ವಜನಿಕರಿಗೆ ಆನಂದ ನೀಡುತ್ತಿವೆ. 2,000ಕ್ಕೂ ಹೆಚ್ಚು ವಿವಿಧ ಜಾತಿಯ ನೂರಾರು ವರ್ಷ ಹಳೆಯ 35 ಮರಗಳು ಇಲ್ಲಿವೆ. ಇವುಗಳು ಅರಣ್ಯ ವಿಭಾಗದ ತರಬೇತಿ ಕೇಂದ್ರಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಪಯೋಗವಾಗುತ್ತಿವೆ.

    ದಾಂಡೇಲಿ ಅರಣ್ಯದಲ್ಲಿನ ಕಾರ್ಟೂನ್ ಇಕೋ ಪಾರ್ಕ್ ದೇಶದ ಮೊದಲ ಉದ್ಯಾನವಾಗಿದೆ. ಪಾರ್ಕ್ ಅಭಿವೃದ್ಧಿಗೆ ಹೊಸ ಯೋಜನೆ ಸಿದ್ಧಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಪಾರ್ಕ್​ನ ನಿರ್ವಹಣೆಗಾಗಿ ಹೆಚ್ಚು ಆಕರ್ಷಕ ಕ್ರೀಡೆ ಹಾಗೂ ಇತರೆ ಚಟುವಟಿಕೆಗಳ ಅಭಿವೃದ್ಧಿಗೆ ಚಿಂತನೆ ನಡೆಸಲಾಗುವುದು. ಸರ್ಕಾರದ ಒಪ್ಪಿಗೆಯ ಮೇರೆಗೆ ಮುಂದಿನ ದಿನಗಳಲಿ ಪಾರ್ಕ್​ಗೆ ಹೊಸ ರೂಪ ಕೊಡುವ ಉದ್ದೇಶವಿದೆ.
    | ಎಚ್.ಸಿ. ಬಾಲಚಂದ್ರ ಡಿಎಫ್​ಒ ಅರಣ್ಯ ಇಲಾಖೆ ಹಳಿಯಾಳ ವಿಭಾಗ

    ದಾಂಡೇಲಿ ಅರಣ್ಯದಲ್ಲಿನ ಇಕೋ ಪಾರ್ಕ್ ವಿಶಾಲ ಪ್ರದೇಶದಲ್ಲಿದೆ. ಗಿಡ-ಮರಗಳ ಸಂಪತ್ತಿನ ಜತೆಗೆ ಪ್ರವಾಸಿಗರನ್ನು ಆಕರ್ಷಿಸಲು ಸಾಹಸಮಯ ಕ್ರೀಡೆಗಳನ್ನು ಆರಂಭಿಸಬೇಕು. ಮಕ್ಕಳಿಗಾಗಿ ನೀರಿನ ಪೌಂಡ್ ನಿರ್ಮಾಣ ಮಾಡಿ ಬೋಟಿಂಗ್ ವ್ಯವಸ್ಥೆಗೆ ಅನುಕೂಲ ಕಲ್ಪಿಸಿಕೊಡಬೇಕು. ಇಕೋ ಪಾರ್ಕ್ ಸಮಿತಿ ಸದಸ್ಯರು ಉದ್ಯಾನ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆಯಿಂದ ಪ್ರಾಯೋಜಕತ್ವ ಪಡೆಯುವ ಮತ್ತು ದಾನಿಗಳನ್ನು ಸಂರ್ಪಸಲು ಮುಂದಾಗಬೇಕು.

    | ಕೀರ್ತಿ ಗಾಂವಕರ್ ಇಕೋ ಪಾರ್ಕ್, ಹಾರ್ನ್​ಬಿಲ್ ಸಮಿತಿ ಸದಸ್ಯರು, ದಾಂಡೇಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts