More

    ಮೌಲ್ಯವರ್ಧನೆಯಿಂದ ಆದಾಯ ದ್ವಿಗುಣ

    ಮೌಲ್ಯವರ್ಧನೆಯಿಂದ ಆದಾಯ ದ್ವಿಗುಣಒಂದು ಗಾಣ ವರ್ಷಕ್ಕೆ 25 ಲಕ್ಷ ರೂ. ಲಾಭ- ಇದು ಶೇಂಗಾ ಮೌಲ್ಯವರ್ಧನೆಯ ಸಾಮರ್ಥ್ಯ, ರೈತರು ಕೇವಲ ರೈತರಾಗದೆ ರೈತೋದ್ಯಮಿಯಾದಾಗ ಮಾತ್ರ ಹೆಚ್ಚು ಆದಾಯ ಗಳಿಸುವುದಕ್ಕೆ ಸಾಧ್ಯ. ಪ್ರತಿಯೊಬ್ಬ ರೈತರು ತಾವು ಮಾಡುವ ಕೃಷಿಯಲ್ಲಿ ಹೆಚ್ಚು ಆದಾಯ ಗಳಿಸಬೇಕು ಎಂದು ಪರಿಶ್ರಮ ಪಡುತ್ತಾರೆ. ಅದರಲ್ಲಿಯೂ ಹಲವು ರೈತರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಬೆಳೆಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವುದಕ್ಕೆ ಮುಂದಾಗುತ್ತಾರೆ. ಇದರಿಂದ ಅವರು ತಮ್ಮ ಆದಾಯವನ್ನು ದ್ವಿಗುಣ ಮಾಡಿಕೊಳ್ಳುತ್ತಾರೆ. ಅಂತಹ ಬೆಳೆಗಳಲ್ಲಿ ಶೇಂಗಾ ಕೂಡ ಒಂದು.

    ಶೇಂಗಾ ಬೆಳೆಯಿಂದ ಸುಲಭವಾಗಿ ಮೌಲ್ಯವರ್ಧನೆ ಸಾಧ್ಯ!: ಪ್ರತಿಯೊಂದು ಬೆಳೆಗಳಿಂದಲೂ ರೈತರು ಮೌಲ್ಯವರ್ಧನೆ ಮಾಡಿ ಆದಾಯ ಗಳಿಸುವುದಕ್ಕೆ ಅವಕಾಶ ಹೆಚ್ಚಿದೆ. ಅದರಲ್ಲಿ ಶೇಂಗಾ/ ನೆಲಗಡಲೆ ಬಹಳ ಸುಲಭ. ಶೇಂಗಾ ಎಣ್ಣೆಗೆ ಹೆಚ್ಚು ಬೇಡಿಕೆ ಇರುವುದರಿಂದ ರೈತರು ಶೇಂಗಾ ಮಾರಾಟ ಮಾಡುವ ಬದಲಿಗೆ ಶೇಂಗಾ ಎಣ್ಣೆ ಮಾರಾಟ ಮಾಡಿ ನೇರವಾಗಿ ಆದಾಯ ಹೆಚ್ಚಿಸಿಕೊಳ್ಳಬಹುದು. ಸಾಮಾನ್ಯವಾಗಿ ಶೇಂಗಾ ನಾಟಿ ಮಾಡಿ 4 ತಿಂಗಳಿಗೆ ಸಂಪೂರ್ಣ ಕಟಾವಿಗೆ ಬರುವುದರಿಂದ ವರ್ಷಕ್ಕೆ 2 ಬಾರಿ ಇಳುವರಿ ಪಡೆಯಬಹುದು, ಕೆಲವೊಂದು ಪ್ರದೇಶದಲ್ಲಿ 3 ಇಳುವರಿ ಪಡೆಯುತ್ತಾರೆ. ಅದು ರೈತರ ಅನುಕೂಲಕ್ಕೆ ತಕ್ಕಂತೆ ಇರುತ್ತೆ. ನಾಟಿಗೂ ಮೊದಲು ಭೂಮಿ ಸಿದ್ದತೆ ಮಾಡಿಕೊಂಡು ಬಳಿಕ ಉತ್ತಮ ಗುಣಮಟ್ಟದ ಬೀಜಗಳನ್ನು ಬಿತ್ತನೆ ಮಾಡಬೇಕು. ಹೂವು ಗಿಡದಿಂದ ಉದುರಿದ ಬಳಿಕ ಶೇಂಗಾ ಕೀಳಬೇಕಾಗುತ್ತೆ. ಬಳಿಕ ಅದನ್ನು ಶೇಖರಣೆ ಮಾಡಬೇಕು.

    ಶೇಂಗಾ ಕೃಷಿಯಲ್ಲಿ ಗಮನಿಸಬೇಕಾದ ಅಂಶ: ಪ್ರತಿಯೊಂದು ಪ್ರದೇಶದಲ್ಲಿಯೂ ಶೇಂಗಾ ಕೃಷಿ ಮಾಡುತ್ತಿದ್ದರೂ ಕೂಡ ಹೆಚ್ಚು ಇಳುವರಿ ಪಡೆಯಬೇಕು ಅಂದರೆ, ಅದಕ್ಕೆ ಸೂಕ್ತವಾದ ಪ್ರದೇಶದಲ್ಲಿ ಬೆಳೆಯುವುದು ಉತ್ತಮ, ಇದು ರೈತರು ಸಮಸ್ಯೆಗೆ ಸಿಲುಕುವುದನ್ನು ತಡೆಯುತ್ತೆ. ಇದಕ್ಕೆ ಹೆಚ್ಚು ಬಿಸಿಲು ಇರುವ ಬಯಲು ಸೀಮೆ, ಅರೆ ಮಲೆನಾಡು, ಮತ್ತು ಕಲ್ಲು ಮಿಶ್ರಿತ ಕೆಂಪು ಮಣ್ಣು ಉತ್ತಮವಾಗಿರುತ್ತೆ.

    ಶೇಂಗಾ ಮೌಲ್ಯವರ್ಧನೆ: ಶೇಂಗಾ ಮೌಲ್ಯವರ್ಧನೆ ಬಹಳ ಸುಲಭ, ಯಾಕೆಂದರೆ, ಶೇಂಗಾ ಬೈ ಪ್ರಾಡಕ್ಟ್ ಗಳು, ಎಣ್ಣೆ, ಹಿಂಡಿ ಮತ್ತು ಇನ್ನಿತರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇಷ್ಟೇ ಅಲ್ಲದೆ, ದಿನದಿಂದ ದಿನಕ್ಕೆ ಇದರ ಮಾರುಕಟ್ಟೆ ವಿಸ್ತಾರವಾಗುತ್ತಿದೆ. ಈ ಕಾರಣ ಶೇಂಗಾ ಮೌಲ್ಯವರ್ಧನೆಯಲ್ಲಿ ಹೆಚ್ಚಿನ ಆದಾಯ ಗ್ಯಾರಂಟಿ. ಶೇಂಗಾ ಎಣ್ಣೆ ತಯಾರಿಸಲು ಒಂದು ಗಾಣ ಅವಶ್ಯಕ, ಗಾಣದ ಸೆಟ್​ಅಪ್ ಮಾಡಿಕೊಂಡು ತಾವೇ ಬೆಳೆದ ಶೆಂಗಾವನ್ನು ರೈತರು ಎಣ್ಣೆಯಾಗಿ ಪರಿವರ್ತನೆ ಮಾಡಬಹುದು. ಇಲ್ಲಿ ಅಗತ್ಯವಾಗಿರುವುದು, ಗಾಣ, ಸೂಕ್ತವಾದ ಸ್ಥಳ, ವಿದ್ಯುತ್, ರಸ್ತೆ ಸಂಪರ್ಕ ಅಷ್ಟೇ. ಇದನ್ನು ಹಳ್ಳಿ ಮತ್ತು ನಗರ ಪ್ರದೇಶ ಎರಡು ಕಡೆಯಲ್ಲಿಯೂ ಮಾಡಬಹುದು. ಸೂಕ್ತ ತರಬೇತಿ ಪಡೆದುಕೊಂಡು ಗುಣಮಟ್ಟದ ಎಣ್ಣೆ ಉತ್ಪಾದನೆ ಮಾಡಿದರೆ ಬೇಡಿಕೆ ಎಂದೂ ಕಡಿಮೆಯಾಗುವುದಿಲ್ಲ.

    ಔಟ್​ಲೆಟ್ ಮೂಲಕ ಮಾರಾಟ: ರೈತರು ತಮ್ಮ ಉತ್ಪನ್ನಗಳನ್ನು ತಮ್ಮದೇ ಔಟ್​ಲೆಟ್ ತೆರೆದು, ಒಂದು ಬ್ರಾ್ಯಂಡ್ ಹೆಸರಿನಲ್ಲಿ ಮಾರಾಟ ಮಾಡಿದರೆ ಹೆಚ್ಚು ಆದಾಯ ಗಳಿಸಬಹುದು. ಗ್ರಾಹಕರ ಜೊತೆ ಉತ್ತಮ ಒಡನಾಟ ಹೊಂದಬಹುದು. ಔಟ್​ಲೆಟ್ ಸಾಧ್ಯವಾದಷ್ಟು ನ್ಯಾಚುರಲ್ ರೀತಿಯಲ್ಲಿಯೇ ಮಾಡಬೇಕು, ಅಲ್ಲದೆ ಜನದಟ್ಟಣೆ ಇರುವ ಹಾಗೂ ಜನರಿಗೆ ಬಹಳ ಸ್ವಷ್ಟವಾಗಿ ಕಾಣುವ ಸ್ಥಳದಲ್ಲಿ ಔಟ್​ಲೆಟ್ ಮಾಡಿ. ಉತ್ಪನ್ನಗಳು ಕಾಣುವಂತೆ ಮಾಡುವುದು ಬಹಳ ಮುಖ್ಯ. ಸಾಮಾನ್ಯವಾಗಿ ಔಟ್​ಲೆಟ್ ಮಾಡುವುದಕ್ಕೆ 5ರಿಂದ 10 ಲಕ್ಷ ರೂ. ಖರ್ಚು ಬರುತ್ತೆ. ಫ್ರೀಡಂ ಆಪ್​ನಲ್ಲಿ ಇರುವಂತಹ ನಮ್ಮ ಮಾರ್ಗದರ್ಶಕರು ಹೀಗೆ ಶೇಂಗಾ ಕೃಷಿ, ಶೇಂಗಾ ಮೌಲ್ಯವರ್ಧನೆ ಮತ್ತು ತಮ್ಮದೇ ಔಟ್​ಲೆಟ್​ನಲ್ಲಿ ಮಾರಾಟ ಮಾಡಿ ಕೇವಲ 1 ಗಾಣದಲ್ಲಿ ವರ್ಷಕ್ಕೆ -ಠಿ;25 ಲಕ್ಷದಷ್ಟು ಲಾಭ ಗಳಿಸುತ್ತಿದ್ದಾರೆ.

    1 ಗಾಣ ವರ್ಷಕ್ಕೆ 25 ಲಕ್ಷ ರೂ. ಲಾಭದ ಲೆಕ್ಕಾಚಾರ: ಅಡುಗೆ ಎಣ್ಣೆ ಮಾರುಕಟ್ಟೆ ನೋಡುವುದಾದರೆ ಇಲ್ಲಿ ಶೇಂಗಾ ಎಣ್ಣೆಯದೇ ಮೇಲುಗೈ, ಅದರಲ್ಲಿಯೂ ಸಾವಯವ ಶೇಂಗಾ ಎಣ್ಣೆ ಅಂದ್ರೆ ಗ್ರಾಹಕರು ಮುಗಿ ಬೀಳುತ್ತಾರೆ. ಇದನ್ನು ಗಮನಿಸಿದರೆ, ಗಾಣದ ಎಣ್ಣೆಗೆ ಎಷ್ಟು ದೊಡ್ಡ ಮಾರುಕಟ್ಟೆ ಇದೆ ಎಂದು. ಒಂದು ಗಾಣ ಮಾಡಿಕೊಂಡರೆ ದಿನಕ್ಕೆ 7 ಬ್ಯಾಚ್​ನಲ್ಲಿ ಎಣ್ಣೆ ಉತ್ಪಾದನೆ ಮಾಡಬಹುದು, ಪ್ರತಿ ಬ್ಯಾಚ್​ಗೆ 12 ಕೆ.ಜಿ. ಶೇಂಗಾ ಬೀಜದಂತೆ ದಿನಕ್ಕೆ 84 ಕೆ.ಜಿ. ಬೇಕಾಗುತ್ತೆ, ಅದರಲ್ಲಿ ಪ್ರತಿ ಬ್ಯಾಚ್​ಗೆ 4 ಲೀಟರ್​ನಂತೆ 7 ಬ್ಯಾಚ್​ನಿಂದ 28 ಲೀಟರ್ ಎಣ್ಣೆ ಉತ್ಪಾದನೆ ಮಾಡಬಹುದು. ಸಾವಯವ ಶೇಂಗಾ ಎಣ್ಣೆ ಮಾರುಕಟ್ಟೆ ಬೆಲೆ ಲೀಟರ್​ಗೆ 490 ರೂ. ಈ ದರಕ್ಕೆ ಈ ಕೋರ್ಸ್​ನ ಮಾರ್ಗದರ್ಶಕರು ಮಾರಾಟ ಮಾಡುತ್ತಿರುವುದು. ಅದರಂತೆ ದಿನಕ್ಕೆ 28 ಲೀಟರ್​ಗೆ 13,750 ರೂ. ಆದಾಯ ಬರುತ್ತೆ, ಇದರ ಜೊತೆಗೆ ದಿನಕ್ಕೆ 84 ಕೆ.ಜಿ. ಶೇಂಗಾ ಬೀಜದಿಂದ 40 ಕೆ.ಜಿ.ಯಷ್ಟು ಹಿಂಡಿ ದೊರೆಯುತ್ತೆ. ಹಿಂಡಿಗೆ ಮಾರುಕಟ್ಟೆ ದರ ಕೆ.ಜಿ.ಗೆ 40 ರೂ. ಅದರಂತೆ 1,600 ರೂ. ಆದಾಯ ಬರುತ್ತದೆ. ಒಟ್ಟು ದಿನದ ಆದಾಯ 15,350 ರೂ. ಇದರಲ್ಲಿ ಕೆ.ಜಿ. ಶೇಂಗಾ ಬೀಜದ ಬೆಲೆ ಸರಾಸರಿ 70 ರೂ.ನಂತೆ 5,850 ರೂ. ಖರ್ಚು ಬರುತ್ತದೆ. ಏನಿಲ್ಲವೆಂದರೂ, ದಿನಕ್ಕೆ 9 ಸಾವಿರ ಲಾಭ ದೊರೆಯುತ್ತದೆ. ಅದೇ ವರ್ಷಕ್ಕೆ ಎಷ್ಟು ಆದಾಯ ಬರುತ್ತದೆ ಎಂಬುದನ್ನು ನೀವೇ ಲೆಕ್ಕ ಹಾಕಿ. ಅದರಲ್ಲಿ ನೀವು ಕಾರ್ವಿುಕರು, ವಿದ್ಯುತ್, ಸಾಗಾಣೆ ಸೇರಿ ಪ್ರತಿಯೊಂದು ಖರ್ಚು ಕಳೆದರೂ, ಕನಿಷ್ಠ 25 ಲಕ್ಷ ರೂ. ಲಾಭ ಪಡೆಯಬಹುದು.

    ಉದ್ಯೋಗಾವಕಾಶ: ಮನೆಯಿಂದಲೇ ಉದ್ಯೋಗ ಮಾಡಬಯಸುವವರಿಗೆ f್ಟಛಿಛಟಞ ಚಟಟನಲ್ಲಿ ಸುವರ್ಣ ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳು ಈ ನಂಬರಿಗೆ ಮಿಸ್ಡ್ ಕಾಲ್ ಮಾಡಿ- 02262116777

    ಕೋರ್ಸ್​ನಲ್ಲಿ ಏನೇನಿದೆ?

    • ಕೋರ್ಸ್, ಮಾರ್ಗದರ್ಶಕರ ಪರಿಚಯ
    • ಶೇಂಗಾ ತಳಿ ಆಯ್ಕೆ
    • ಕಟಾವು ಮತ್ತು ಶೇಖರಣೆ
    • ಎಣ್ಣೆ ಗಾಣ ಸೆಟ್-ಅಪ್ ಮತ್ತು ಪರವಾನಗಿ
    • ಎಣ್ಣೆ ಉತ್ಪಾದನೆ ಪ್ರಾಕ್ಟಿಕಲ್
    • ಪ್ಯಾಕಿಂಗ್ ಮತ್ತು ಬೆಲೆ ನಿಗದಿ, ಸಬ್ಸಿಡಿ
    • ಔಟ್​ಲೇಟ್ ಸೆಟ್-ಅಪ್
    • ಯುನಿಟ್ ಎಕನಾಮಿಕ್ಸ್

    ffreedom appನಲ್ಲಿ ಶೇಂಗಾ ಕೃಷಿ ಮತ್ತು ಮೌಲ್ಯವರ್ಧನೆ ಕೋರ್ಸ್: ಪ್ರತಿಯೊಬ್ಬ ಆರ್ಥಿಕ ಸ್ವಾತಂತ್ರ್ಯ ಕಂಡುಕೊಳ್ಳಬೇಕು ಎಂದು ffreedom app ಈ ಕೋರ್ಸ್ ಸಿದ್ಧಪಡಿಸಿದೆ. ತಾವೇ ಶೇಂಗಾ ಬೆಳೆದು ಮೌಲ್ಯವರ್ಧನೆ ಮಾಡಿ ತಮ್ಮದೇ ಔಟ್​ಲೆಟ್​ನಲ್ಲಿ ಮಾರಾಟ ಮಾಡುತ್ತಿರುವ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲೂಕಿನ ಲಿಂಗದೇವರಹಳ್ಳಿಯ ಶರಣ್ಯ ಮತ್ತು ಅಶ್ವಥ್ ಅವರು ಮಾರ್ಗದರ್ಶನ ನೀಡುತ್ತಾರೆ. ನೀವು ಈಗಲೇ ffreedom app ಡೌನ್​ಲೋಡ್ ಮಾಡಿ. ಜೊತೆಗೆ ಕೃಷಿ, ಬಿಸಿನೆಸ್, ಹಣಕಾಸಿಗೆ ಸಂಬಂಧಿಸಿದ್ದಂತೆ 900ಕ್ಕೂ ಹೆಚ್ಚು ಕೋರ್ಸ್​ಗಳನ್ನು ವೀಕ್ಷಿಸಬಹುದು.

    ಮೌಲ್ಯವರ್ಧನೆಯಿಂದ ಆದಾಯ ದ್ವಿಗುಣ

    ದೇಶದಲ್ಲಿ ಟ್ರೆಂಡಿಂಗ್​ನಲ್ಲಿದೆ ‘ಹಾರ್ಟ್ ಅಟ್ಯಾಕ್’; ಅದರ ಬಗ್ಗೆಯೇ ಮಾತಾಡುತ್ತಿದ್ದಾರೆ ಹಲವರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts