More

    VIDEO| ಸಾಕು ನಾಯಿ-ಚಿರತೆ ನಡುವೆ ರೋಚಕ ಕಾಳಗ: ಕಾದಾಟಕ್ಕೆ ಟ್ವಿಸ್ಟ್​ ಕೊಟ್ಟ ಕಾರಿನ ಶಬ್ದ!

    ನವದೆಹಲಿ: ಕರೊನಾ ಲಾಕ್​ಡೌನ್​ ಸಮಯಲ್ಲಿದ ದಿಟ್ಟ ಸಾಕು ನಾಯಿಯೊಂದು ತನ್ನ ಮೇಲೆ ದಾಳಿ ಮಾಡಿದ ಚಿರತೆ ಜತೆಯ ಕಾದಾಡಿದ ರೋಚಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಚಿರತೆಯ ದಾಳಿ ಗುಜರಾತ್​ನ ಉನಾ ನಗರದಲ್ಲಿ ನಡೆದಿದೆ. ಲಾಕ್​ಡೌನ್​ನಿಂದಾಗಿ ನಗರದಲ್ಲಿ ಜನರ ಉಪಸ್ಥಿತಿ ಕಡಿಮೆ ಇರುವುದನ್ನೇ ಲಾಭವಾಗಿ ತೆಗದುಕೊಂಡ ಚಿರತೆ ಮಹೇಶ್​ ಬಮಾನಿಯಾ ಅವರಿಗೆ ಸೇರಿದ ಬಂಗಲೆಗೆ ಭೇಟಿ ಕೊಟ್ಟು ನಾಯಿಯ ಮೇಲೆ ದಾಳಿ ಮಾಡಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.

    36 ಸೆಕೆಂಡಿನ ವಿಡಿಯೋದಲ್ಲಿ ಬಂಗಲೆ ಮುಂಭಾದ ಗೇಟ್​ ಏರಿ ಒಳಬರುವ ಚಿರತೆ ಆವರಣದಲ್ಲಿ ಮಲಗಿದ್ದ ನಾಯಿಯ ಮೇಲೆ ದಾಳಿ ಮಾಡುತ್ತದೆ. ಕುತ್ತಿಗೆಗೆ ಬಾಯಿ ಹಾಕಿ ಉಸಿರುಗಟ್ಟಿಸಿ ಸಾಯಿಸಲು ಯತ್ನಿಸುತ್ತದೆ. ಈ ವೇಳೆ ನಾಯಿಯು ಸಹ ಹೋರಾಡುತ್ತದೆ. ಹೀಗೆ 15 ನಿಮಿಷ ಪ್ರಾಣಿಗಳ ನಡುವಿನ ಕಾದಾಟ ನಡೆಯುತ್ತದೆ. ಕೊನೆಯಲ್ಲಿ ಮನೆಯ ಮುಂದೆ ಕಾರೊಂದು ಹಾದುಹೋಗುವ ಸದ್ದು ಕೇಳಿ ಚಿರತೆ ಅಲ್ಲಿಂದ ಪರಾರಿಯಾಗುತ್ತದೆ.

    ಇದೇ ಮೊದಲ ಬಾರಿಗೆ ನನ್ನ ಮನೆಗೆ ಶ್ವಾನವೊಂದು ಭೇಟಿ ನೀಡಿದ್ದು ನನ್ನ ಅರಿವಿಗೆ ಬಂದಿದೆ ಎಂದು ತಿಳಿಸಿದ ಮಾಲೀಕ ಬಮಾನಿಯಾ, ಬಳಿಕ ಚಿರತೆಯ ದಾಳಿ ಕುರಿತು ಅರಣ್ಯ ಇಲಾಖೆಗೆ ಹೆಚ್ಚರಿಸಿದ್ದಾಗಿ ತಿಳಿಸಿದ್ದಾರೆ. ಒಂದು ವೇಳೆ ದಾಳಿ ಸಮಯದಲ್ಲಿ ಕಾರು ಹಾದುಹೋಗದಿದ್ದರೆ, ನಾಯಿ ಪ್ರಾಣ ಪಕ್ಷಿ ಹಾರಿಹೋಗುತ್ತಿತ್ತು. (ಏಜೆನ್ಸೀಸ್​)

    VIDEO| ಕರೊನಾ ತವರು ಚೀನಾದಲ್ಲಿ ಮನಕಲಕುವ ಘಟನೆ: ಒಂದೇ ಸ್ಥಳದಲ್ಲಿ ಸುತ್ತುತ್ತಿರುವ ಬೆಂಗಾಲ್​ ಟೈಗರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts