More

    ಕಾಮಗಾರಿ ವಿಳಂಬದಿಂದ ಸಮಸ್ಯೆ

    ಮೊಳಕಾಲ್ಮೂರು: ಪಟ್ಟಣ ಹಾಗೂ ಕೋನಸಾಗರ ರಸ್ತೆ ಮಧ್ಯೆ ಹಾದು ಹೋಗಿರುವ ರೈಲ್ವೆ ಕೆಳಸೇತುವೆ ಕಾಮಗಾರಿ ವಿಳಂಬದಿಂದ ವಾಹನ ಸವಾರರು ಹೈರಾಣಾಗಿದ್ದಾರೆ.

    ಕಾಮಗಾರಿ ಕಾರಣಕ್ಕೆ ಕಳೆದ ನಾಲ್ಕೈದು ತಿಂಗಳಿಂದ ಕೆಳಸೇತುವೆಯಲ್ಲಿನ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಇದರಿಂದ ಬಸ್, ಆಟೋಗಳು ಐದಾರು ಕಿಮೀ ಸುತ್ತಿ ಬಳಸಿ ಬರಬೇಕು. ಬೈಕ್ ಸವಾರರ ಪಾಡು ಹೇಳತೀರದು. ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ತ್ವರಿತವಾಗಿ ಕಾಮಗಾರಿ ಪೂರೈಸಬೇಕೆಂದು ವಾಹನ ಚಾಲಕರು, ನಾಗರಿಕರು ಆಗ್ರಹಿಸಿದ್ದಾರೆ.

    ಗುತ್ತಿಗೆದಾರರು ಪ್ರಬಲ ಸಿಡಿಮದ್ದು ಬಳಸಿ ಕಲ್ಲುಗಳನ್ನು ತೆಗೆಯುತ್ತಿದ್ದು ಅದರ ರಭಸಕ್ಕೆ ಹತ್ತಿರದ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಇದರಿಂದ ನಮಗೆ ಆತಂಕ ಉಂಟಾಗಿದೆ. ಈ ಕುರಿತು ತಹಸೀಲ್ದಾರ್ ಮತ್ತು ರೈಲ್ವೆ ಇಂಜಿನಿಯರ್ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಾದ ವೀರೇಂದ್ರ, ಶಾಂತಣ್ಣ ಇತರರು ಆಗ್ರಹಿಸಿದ್ದಾರೆ.

    ಕೆಳಸೇತುವೆ ಕಾಮಗಾರಿಯಲ್ಲಿ ಸಿಡಿಮದ್ದು ಬಳಸದೆ ಜೆಸಿಬಿಯಿಂದ ಕಲ್ಲು ಬಂಡೆ ತೆರವುಗೊಳಿಸಬೇಕೆಂದು ಗುತ್ತಿಗೆದಾರರಿಗೆ ಸೂಚನೆ ಕೊಡಲಾಗಿದೆ. ಆದರೂ ಸಿಡಿಮದ್ದು ಬಳಸುತ್ತಿದ್ದಾರೆ ಎಂದು ಸ್ಥಳೀಯರು ಕಾಮಗಾರಿಯನ್ನು ತಡೆದಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಪೂರ್ತಿ ಕೆಲಸ ಮುಗಿಯಲು ಇನ್ನು ಒಂದೂವರೆ ತಿಂಗಳ ಕಾಲಾವಕಾಶ ಬೇಕು.
    > ಜಗದೀಶ್, ಸಹಾಯಕ ಇಂಜಿನಿಯರ್ ರೈಲ್ವೆ ಇಲಾಖೆ ಚಿತ್ರದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts