More

  ಅಹಿಂಸಾ ಸಂದೇಶ ಪಾಲನೆ ಅಗತ್ಯ

  ಮೊಳಕಾಲ್ಮೂರು: ತಾಲೂಕಿನಾದ್ಯಂತ ಭಾನುವಾರ ಸಂಭ್ರಮ, ಸಡಗರದಿಂದ ಗಣರಾಜ್ಯೋತ್ಸವ ಆಚರಿಸಲಾಯಿತು.

  ತಾಲೂಕು ಕಚೇರಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ್ ಎಂ.ಬಸವರಾಜ್, ಮಹಾತ್ಮ ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಅಹಿಂಸಾತ್ಮಕ ಸಂದೇಶಗಳು ಹಾಗೂ ಸಂವಿಧಾನದ ಮೂಲ ಆಶಯ ಪರಿಪಾಲಿಸುವ ಮೂಲಕ ಗಣತಂತ್ರ ವ್ಯವಸ್ಥೆಯನ್ನು ಬಲಗೊಳಿಸಬೇಕು ಎಂದರು.

  ಜಿಪಂ ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಮುಂಡರಗಿ ನಾಗರಾಜ್ ಮಾತನಾಡಿದರು. ತಾಪಂ ಅಧ್ಯಕ್ಷೆ ಜಿ.ಬೋರಮ್ಮ ಅಧ್ಯಕ್ಷತೆ ವಹಿಸಿದ್ದರು. ಇಒ ಪ್ರಕಾಶ್, ಬಿಇಒ ಎಂ.ಸೋಮಶೇಖರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಡಿ.ಚಿದಾನಂದಪ್ಪ, ಉಪ ಪ್ರಾಚಾರ್ಯ ಎಸ್.ಸುರೇಂದ್ರನಾಥ್, ಪಪಂ ಮುಖ್ಯಾಧಿಕಾರಿ ಎಚ್.ಕಾಂತರಾಜ್, ವಿವಿಧ ಇಲಾಖೆಗಳ ಅಧಿಕಾರಿಗಳಾದ ಟಿ.ಗುರುಮೂರ್ತಿ, ಡಿ.ಶೇಖರ್, ಪಿ.ಲೋಕೇಶ್, ಸವಿತಾ, ಓಂಕಾರಪ್ಪ, ಓಬಣ್ಣ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts