More

    ಗಡಿ ಭಾಗದ ಪೊಲೀಸರಲ್ಲಿ ಬೇಕು ಸಮನ್ವಯತೆ

    ಮೊಳಕಾಲ್ಮೂರು: ಆಂಧ್ರ-ಕರ್ನಾಟಕ ಉಭಯ ರಾಜ್ಯಗಳ ಗಡಿ ಭಾಗದಲ್ಲಿ ಅಪರಾಧ ತಡೆಗೆ, ಪ್ರಕರಣ ಭೇದಿಸಲು ಪೊಲೀಸರಲ್ಲಿ ಪರಸ್ಪರ ಸಮನ್ವಯತೆ ಅಗತ್ಯವಾಗಿದೆ ಎಂದು ಚಳ್ಳಕೆರೆ ವಲಯ ಡಿವೈಎಸ್‌ಪಿ ಎಚ್.ಬಿ.ರಮೇಶಕುಮಾರ್ ಸಲಹೆ, ಸೂಚನೆ ನೀಡಿದರು.

    ಪಟ್ಟಣದ ತಾಪಂ ಸಭಾಂಗಣದಲ್ಲಿ ಚಿತ್ರದುರ್ಗ ಜಿಲ್ಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಗಡಿ ಅಪರಾಧ ಪ್ರಕರಣಗಳ ಪತ್ತೆ ಕುರಿತಂತೆ ಏರ್ಪಡಿಸಿದ್ದ ಜಂಟಿ ಸಭೆಯಲ್ಲಿ ಮಾತನಾಡಿದರು.

    ಗಡಿ ಭಾಗಗಳಲ್ಲಿ ಕಿಡಿಗೇಡಿಗಳ ಸಮಾಜ ಘಾತುಕ, ಘೋರ ಅಪರಾಧಗಳನ್ನ ಪತ್ತೆ ಹಚ್ಚಲು ಪೊಲೀಸ್ ಅಧಿಕಾರಿಗಳಲ್ಲಿ ಸಮನ್ವಯತೆ ಬೇಕು. ಗಡಿಯಂಚಿನ ರಾಬರಿ, ಡಕಾಯಿತಿ, ಕೊಲೆ ಹಾಗು ನಾಪತ್ತೆಯಂತಹ ಪ್ರಕರಣಗಳಲ್ಲಿ ಭಾಗಿಯಾದ ಕಿಡಿಗೇಡಿಗಳ ಹೆಡೆಮುರಿ ಕಟ್ಟಲು ಸ್ಥಳೀಯ ಪೊಲೀಸ್ ಅಧಿಕಾರಿಗಳ ಸಾಥ್ ಸಹ ಅಗತ್ಯವಾಗಿರುತ್ತದೆ ಎಂದರು.

    ಇಲಾಖೆಗೆ ಮುಜುಗರ:

    ಪಕ್ವ ಜಾಲದ ಕೊರತೆಯಿಂದ ಕೆಲ ಅಪರಾಧ ಪ್ರಕರಣಗಳು ನಡೆದು ಐದಾರು ವರ್ಷ ಕಳೆದರೂ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಇದು ಇಲಾಖೆಗೂ ಮುಜುಗರ ತರಿಸುವಂತಹ ಸಂಗತಿ. ಇದಕ್ಕೆ ಆಸ್ಪದ ಕೊಡದೆ ಪೊಲೀಸರು ಹದ್ದಿನ ಕಣ್ಣಿಟ್ಟು ಕರ್ತವ್ಯ ನಿಷ್ಠೆ ಮೆರೆಯಬೇಕು ಎಂದು ಸೂಚಿಸಿದರು.

    ಮಧುಗಿರಿ ವಲಯದ ಡಿವೈಎಸ್‌ಪಿ ರಾಮಕೃಷ್ಣ ಮಾತನಾಡಿ, ಗಡಿಯಂಚಿನ ಗ್ರಾಮಗಳಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ಕೊಡದೆ ಶಾಂತಿ ಕಾಪಾಡುವುದು ಪೊಲೀಸ್ ಇಲಾಖೆ ಕರ್ತವ್ಯ. ಅಪರಾಧ ಕೃತ್ಯಗಳು ಘಟಿಸಿದಾಗ ಭೇದಿಸಿ ನೊಂದರಿಗೆ ನ್ಯಾಯ ಕೊಡಿಸುವ ಪ್ರವೃತ್ತಿ ನಮ್ಮದಾಗಬೇಕು ಎಂದು ಹೇಳಿದರು.

    ಆಂಧ್ರ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಬಳ್ಳಾರಿ ಜಿಲ್ಲೆ ಪೊಲೀಸ್ ಅಧಿಕಾರಿಗಳಾದ ಎನ್.ಸತೀಶ್, ಜಿ.ಪಾಂಡುರಂಗಪ್ಪ, ಗಾದಿಲಿಂಗಪ್ಪ, ಎಚ್.ಮಾರುತಿ, ಸತೀಶ್ ನಾಯ್ಕ, ಶಿವರಾಜ್, ಹಾಲೇಶಪ್ಪ, ಶ್ರೀನಿವಾಸಲು, ಸಿ.ನವೀನ್, ಪ್ರೇಮ್‌ಕುಮಾರ್, ರವೀಶ್, ರಾಘವೇಂದ್ರ, ಸಿದ್ದರಾಮೇಶ್ವರ, ಡಿ.ಸಿ.ಸ್ವಾತಿ, ನಾಗರತ್ನ, ಲಕ್ಷ್ಮೀಕಾಂತರಡ್ಡಿ, ತಿಪ್ಪೇಸ್ವಾಮಿ, ಬಿ.ಪರುಶುರಾಮುಡು ಹಾಗೂ ಪೊಲೀಸರು ಇದ್ದರು.

    ಸಮಾಜದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ಕೊಡದೆ ಶಾಂತಿ-ಸೌರ್ಹಾದತೆಗೆ ಆದ್ಯತೆ ಕೊಡಬೇಕು. ಚಾಣಾಕ್ಷತನದಿಂದ ಪೊಲೀಸ್ ಬುದ್ಧಿ ಉಪಯೋಗಿಸಿ ಕಾಣೆ, ಕಳವು, ಅಪರಾಧ ಪ್ರಕರಣಗಳನ್ನ ಪತ್ತೆ ಹಚ್ಚುವ ಆತ್ಮಸ್ಥೈರ್ಯ ತೋರಿ ವೃತ್ತಿ ಧರ್ಮದ ಸಾರ್ಥಕತೆ ಮೆರೆಯಬೇಕು.
    ಕನ್ನಿಕಾ ಸಗ್ರಿವಾಲ್, ದಾವಣಗೆರೆ ವಲಯದ ಐಪಿಎಸ್ ಅಧಿಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts