More

    ಅ.1ಕ್ಕೆ “ಮೋಹನದಾಸ’ – ಇದು ಗಾಂಧಿಯ ಬಾಲ್ಯದ ಕಥೆ

    ಬೆಂಗಳೂರು: ಕಳೆದ ವರ್ಷದ ಗಾಂಧಿ ಜಯಂತಿಯ ಸಂದರ್ಭದಲ್ಲೇ “ಮೋಹನದಾಸ’ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪಿ. ಶೇಷಾದ್ರಿ ಪ್ರಯತ್ನಿಸಿದ್ದರು. ಅದು ಸಾಧ್ಯವಾಗಿರಲಿಲ್ಲ. ಈ ವರ್ಷ ಅದು ಸಾಧ್ಯವಾಗುತ್ತಿದೆ. ಗಾಂಧಿ ಜಯಂತಿಯ ಮುನ್ನಾ ದಿನ, ಅಂದರೆ ಅ.1ರಂದು “ಮೋಹನದಾಸ’ ಚಿತ್ರ ಬಿಡುಗಡೆಯಾಗುತ್ತಿದೆ.

    “ಮೋಹನದಾಸ’ ಚಿತ್ರದ ಬಗ್ಗೆ ಮಾತನಾಡುವ ಪಿ. ಶೇಷಾದ್ರಿ, “ಗಾಂಧಿ ಅವರ ಕುರಿತು ಭಾರತೀಯ ಚಿತ್ರರಂಗದಲ್ಲಿ ಎರಡು ಪ್ರಮುಖ ಚಿತ್ರಗಳು ಬಂದಿವೆ. ಒಂದು ರಿಚರ್ಡ್​ ಅಟೆನ್​ಬರೋ ನಿರ್ದೇಶನದ “ಗಾಂಧಿ’. ಇನ್ನೊಂದು ಶ್ಯಾಮ್​ ಬೆನೆಗಲ್​ ಅವರ “ದಿ ಮೇಕಿಂಗ್​ ಆ್​ ಮಹಾತ್ಮ’. ನಮ್ಮ ಈ ಚಿತ್ರ ಯಾಕೆ ವಿಭಿನ್ನವಾಗುತ್ತದೆ ಎಂದರೆ, ಇದು ಮಹಾತ್ಮರ ಕುರಿತಾದ ಚಿತ್ರವಲ್ಲ. ಅವರ ಬಾಲ್ಯದ ಕುರಿತಾದ ಚಿತ್ರ. 7ರಿಂದ 14 ವರ್ಷಗಳ ಜೀವನದ ಕುರಿತಾದ ಚಿತ್ರ. ಈ ಏಳು ವರ್ಷಗಳು ಅವರಿಗೆ ಏನು ಕಲಿಸಿತು ಎಂಬುದನ್ನು ಹೇಳುವ ಪ್ರಯತ್ನ ಮಾಡಿದ್ದೇವೆ. ಬೋಳವಾರು ಮೊಹಮ್ಮದ್​ ಕುಂಯಿ ಅವರ “ಪಾಪು ಗಾಂಧಿ, ಬಾಪು ಗಾಂಧಿ ಆದ ಕಥೆ’ ಎಂಬ ಕಾದಂಬರಿಯಿಂದ ಆಧರಿಸಿದೆ’ ಎನ್ನುತ್ತಾರೆ ಶೇಷಾದ್ರಿ.

    “ನಾನು ಈ ಚಿತ್ರ ಮಾಡಿ 2 ವರ್ಷ 3 ತಿಂಗಳಾಗಿವೆ. ಎರಡು ವರ್ಷಗಳ ಹಿಂದೆ ಎರಡು ಪ್ರದರ್ಶನ ಆಯೋಜಿಸುವುದಕ್ಕೆ ಸಾಧ್ಯವಾಯಿತು. ಈ ಎರಡೂ ಪ್ರದರ್ಶನಗಳಿಂದ ಎಂಟು ಸಾವಿರ ಮಕ್ಕಳು ಚಿತ್ರವನ್ನು ನೋಡಿದ್ದಾರೆ. ಈ ಚಿತ್ರವನ್ನು ಇನ್ನಷ್ಟು ಮಕ್ಕಳಿಗೆ ತಲುಪಿಸಬೇಕು ಎಂಬುದು ನನ್ನ ಆಸೆ. ಕನಿಷ್ಠ ನೂರು ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವ ಆಸೆ ಇದ್ದು, ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ’ ಎನ್ನುತ್ತಾರೆ.

    “ಮೋಹನದಾಸ’ ಚಿತ್ರದಲ್ಲಿ ಗಾಂಧಿಯ ಬಾಲ್ಯದ ಪಾತ್ರವನ್ನು ಸ್ಟಾರ್ಟ್ ಅಪ್ ಸಲಹೆಗಾರ ರವಿಶಂಕರ್ ಮತ್ತು ನಟಿ ದೀಪಾ ರವಿಶಂಕರ್ ಪುತ್ರ ಪರಂಸ್ವಾಮಿ ಮತ್ತು ಸಮರ್ಥ್​ ಹೊಂಬಾಳ್​ ನಿರ್ವಹಿಸಿದ್ದಾರೆ. ಮಿಕ್ಕಂತೆ ಅನಂತ್​ ಮಹದೇವನ್​, ಶ್ರುತಿ, ದತ್ತಣ್ಣ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಜಿ.ಎಸ್​. ಭಾಸ್ಕರ್​ ಅವರ ಛಾಯಾಗ್ರಹಣ ಮತ್ತು ಪ್ರವಿಣ್​ ಗೋಡ್ಖಿಂಡಿ ಸಂಗೀತ ಸಂಯೋಜಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts