More

    ದೇಶದ ಪರಿಸ್ಥಿತಿಗೆ ನಾಗರಿಕರೇ ಜವಾಬ್ದಾರರು, ಬ್ರಿಟಿಷರನ್ನು ಇನ್ನಷ್ಟು ದೂಷಿಸಲು ಸಾಧ್ಯವಿಲ್ಲ: ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​

    ನಾಗಪುರ: ನಮ್ಮ ದೇಶ ಈಗ ಹೇಗಿದೆ ಎನ್ನುವುದಕ್ಕೆ ನಮ್ಮ ದೇಶದ ಜನರೇ ಜವಾಬ್ದಾರರು, ಅದನ್ನು ಹೊರೆತು ಇನ್ನೂ ನಾವು ಬ್ರಿಟಿಷರನ್ನೇ ದೂರಲು ಸಾಧ್ಯವಿಲ್ಲ ಎಂದು ಆರ್​ಎಸ್​ಎಸ್​ನ ಮುಖ್ಯಸ್ಥ ಮೋಹನ್​ ಭಾಗವತ್​ ಹೇಳಿದ್ದಾರೆ.

    ಗುರುವಾರದಂದು ನಾಗಪುರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಅವರು, “ಡಾ.ಬಿ.ಆರ್​.ಅಂಬೇಡ್ಕರ್​ ಅವರು ಸಂವಿಧಾನವನ್ನು ಪ್ರಸ್ತುತ ಪಡಿಸುವಾಗ ಈ ದೇಶದ ಸದ್ಯದ ಪರಿಸ್ಥಿತಿಗೆ ನಾವುಗಳೇ ಕಾರಣ. ದೇಶದಲ್ಲಿ ಏನೇ ನಡೆದರೂ ಅದಕ್ಕೆ ನಾವು ಬ್ರಿಟಿಷರನ್ನು ದೂಷಿಸುವಂತಿಲ್ಲ ಎಂದು ಎರಡು ಬಾರಿ ಹೇಳಿದ್ದರು. ನಾವು ಇನ್ನು ಮುಂದೆ ಎಚ್ಚರಿಕೆಯಿಂದ ಮತ್ತು ಜಾಗರೂಕತೆಯಿಂದ ನಡೆದುಕೊಳ್ಳಬೇಕು ಎಂದು ನುಡಿದಿದ್ದರು” ಎಂದು ತಿಳಿಸಿದ್ದಾರೆ.

    ದೇಶದಲ್ಲಿ ಯಾವುದೇ ತುರ್ತು ಪರಿಸ್ಥಿತಿ ಬಂದರೂ ಮತ್ತು ಭಾರತ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿಯೇ ಉಳಿದುಕೊಂಡಿರುವುದಕ್ಕೆ ಬ್ರಿಟಿಷರ ಆಳ್ವಿಕೆಯೇ ಕಾರಣ ಎಂದು ಅನೇಕ ರಾಜಕೀಯ ಪಕ್ಷಗಳು ಮತ್ತು ಮುಖಂಡರುಗಳು ಹೇಳಿಕೆ ನೀಡುತ್ತಾ ಬಂದಿರುವ ಹಿನ್ನೆಲೆ ಅವರು ಈ ಮಾತನ್ನು ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts