More

    ಮದ್ಯದ ಲೋಗೋ ಇರುವ ಜೆರ್ಸಿ ತೊಡುವುದಿಲ್ಲ ಎಂದ ಮೋಯೀನ್ ಅಲಿ

    ಮುಂಬೈ: ಇಂಗ್ಲೆಂಡಿನ ಕ್ರಿಕೆಟ್ ಆಲ್​ರೌಂಡರ್ ಮೋಯೀನ್ ಅಲಿ ತಮ್ಮ ಐಪಿಎಲ್​ ಜೆರ್ಸಿಯಿಂದ ಮದ್ಯದ ಬ್ರಾಂಡ್​ನ ಲೋಗೋ ತೆಗೆಯಬೇಕೆಂದು ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್​ಕೆ) ಆಡಳಿತವನ್ನು ಮನವಿ ಮಾಡಿದ್ದಾರೆ.

    ಸಿಎಸ್​ಕೆ ತಂಡದ ಪರವಾಗಿ ಆಟ ಆಡುಲಿರುವ ಅಲಿ, ಪ್ರಾಯೋಜಕರಲ್ಲಿ ಒಬ್ಬರಾದ ಎಸ್​ಎನ್​ಜೆ ಡಿಸ್ಟಿಲರೀಸ್​ನ ಎಸ್​ಎನ್​ಜೆ 10000 ಚಿಹ್ನೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಸ್ಲಾಂ ಧರ್ಮವನ್ನು ಪಾಲಿಸುವ ಅಲಿ, ತಮ್ಮ ನಂಬಿಕೆಯಲ್ಲಿ ಮದ್ಯ ಸೇವಿಸುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ತಾವು ಅದರ ಲೋಗೋ ಇರುವ ಜೆರ್ಸಿ ತೊಡಲಾಗುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಮೂಕ ಪ್ರಾಣಿಗಳನ್ನು ಬಿಡುವವರು ಮನೆಯ ಹೆಂಡತಿ, ಮಕ್ಕಳನ್ನು ಬಿಟ್ಟ ಹಾಗೆ !

    ಅಲಿ ಅವರ ಈ ಬೇಡಿಕೆಗೆ ಮನ್ನಣೆ ಇತ್ತಿರುವ ಸಿಎಸ್​ಕೆ ಆಡಳಿತವು, ನಿರ್ದಿಷ್ಟ ಲೋಗೋವನ್ನು ಅವರ ಜೆರ್ಸಿಯಿಂದ ತೆಗೆಯಲು ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.

    ಫೆಬ್ರವರಿಯಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ 33 ವರ್ಷ ವಯಸ್ಸಿನ ಮೋಯೀನ್ ಅಲಿ ಅವರನ್ನು ಸಿಎಸ್​​ಕೆ, 7 ಕೋಟಿ ರೂಪಾಯಿ ಬಿಡ್ ಮಾಡಿ ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು. ಈ ಮುನ್ನ ಐಪಿಎಲ್​ನ ಮೂರು ಸೀಸನ್​ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಅಲಿ ಆಟವಾಡಿದ್ದಾರೆ. (ಏಜೆನ್ಸೀಸ್)

    ಕರೊನಾದಿಂದಾಗಿ ಮುಂಬೈನ ಐಪಿಎಲ್​ ಪಂದ್ಯಗಳನ್ನು ಬೇರೆಡೆ ನಡೆಸಲಾಗುತ್ತಾ ? ಇಲ್ಲಿದೆ ಉತ್ತರ…

    ಐಸಿಸ್ ಸೇರಲು ಹೊರಟಿದ್ದ ಅಮೆರಿಕನ್ ದಂಪತಿ ! ಮಾರ್ಗದಲ್ಲೇ ಬಂಧನ

    VIDEO | ವರದಿಗಾರ್ತಿಯ ಮೈಕ್​ ಕಸಿದು ಓಡಿದ ನಾಯಿ! ಎಲ್ಲವೂ ಲೈವ್ ಟೆಲಿಕಾಸ್ಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts