More

    ‘ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ ಅಪಮಾನ’ – ವಿಪಕ್ಷಗಳ ನಡೆಗೆ ಮೋದಿ ಅಸಮಾಧಾನ

    ನವದೆಹಲಿ : ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲು ಅಡ್ಡಿಪಡಿಸುತ್ತಿರುವ ವಿರೋಧಪಕ್ಷಗಳ ವೈಖರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗದ್ದಲದ ವಿರೋಧದಿಂದಾಗಿ ಸಂಸತ್ತಿನ ಕಲಾಪಗಳು ಪದೇ ಪದೇ ಮುಂದೂಡಲ್ಪಡುತ್ತಿರುವುದು “ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ ಮತ್ತು ಜನತೆಗೆ ಮಾಡುತ್ತಿರುವ ಅವಮಾನ” ಎಂದು ಹೇಳಿದ್ದಾರೆ.

    ಇಂದು ದೆಹಲಿಯಲ್ಲಿ ನಡೆದ ಬಿಜೆಪಿ ಸಂಸದರ ಸಭೆಯಲ್ಲಿ ಮಾತನಾಡಿದ ಮೋದಿ, “ಎರಡೂ ಸದನಗಳಲ್ಲಿ ವಿರೋಧಪಕ್ಷಗಳ ನಡವಳಿಕೆಗಳಿಂದ ಸಂಸತ್ತನ್ನು ಅವಮಾನಿಸಲಾಗುತ್ತಿದೆ. ಪೇಪರನ್ನು ಕಸಿದು ಹರಿದುಹಾಕಿದ ವ್ಯಕ್ತಿಗೆ ಆ ಬಗ್ಗೆ ಪಶ್ಚಾತ್ತಾಪವೇ ಇಲ್ಲ” ಎಂದರು. ಐಟಿ ಸಚಿವ ಅಶ್ವಿನಿ ವೈಷ್ಣವ್​ ಅವರ ಪೆಗಾಸಸ್ ಕುರಿತ ಕಾಗದಪತ್ರವನ್ನು ಹರಿದುಹಾಕಿದ್ದ ಟಿಎಂಸಿ ಸಂಸದ ಸಂತನು ಸೇನ್​ರ ಬಗೆಗೆ ಮೋದಿ ಉಲ್ಲೇಖಿಸಿದರು.

    ಇದನ್ನೂ ಓದಿ: ಸಂಸತ್ತಿನಲ್ಲಿ ಸರಾಸರಿ 7 ನಿಮಿಷಗಳ ಚರ್ಚೆಯೊಂದಿಗೆ 12 ಮಸೂದೆಗಳ ಅಂಗೀಕಾರ!

    ಮತ್ತೊಬ್ಬ ಟಿಎಂಸಿ ಸಂಸದ ಡೆರೆಕ್​ ಒಬ್ರೇನ್​ರ ಟ್ವೀಟ್​ನತ್ತ ಗಮನ ಸೆಳೆದ ಮೋದಿ, ಮಸೂದೆಗಳ ಅಂಗೀಕಾರದ ಬಗ್ಗೆ ಹಿರಿಯ ಸಂಸದರೊಬ್ಬರು ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂದರು. ಕಳೆದ ವಾರ ಕೂಡ ಅಧಿವೇಶನದಲ್ಲಿ ಏನೂ ಕೆಲಸ ಮಾಡಲಾಗದ ರೀತಿಯಲ್ಲಿ ಬಿಕ್ಕಟ್ಟು ಸೃಷ್ಟಿಸಿರುವುದಾಗಿ ಕಾಂಗ್ರೆಸ್​ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದರು. (ಏಜೆನ್ಸೀಸ್)

    ದಾಖಲೆ ಮುರಿದು ಚಿನ್ನ ಗೆದ್ದ ನಾರ್ವೇ ಕ್ರೀಡಾಪಟು; ಅಂಗಿ ಹರಿದು ಸಂಭ್ರಮಿಸಿದ!

    ಮಾಜಿ ಸಿಎಂ ಬಿಎಸ್​ವೈ ಟೀಮ್‌ನ ಹತ್ತು ಜನರು ಹುದ್ದೆಯಿಂದ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts