More

    ಕುಡ್ಲದಲ್ಲಿ ಮೋದಿ ಕನಸು ಸಾಕಾರ

    ಮಂಗಳೂರು: ನಗರದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿವೆ. 2024-25ರ ವೇಳೆಗೆ ಮಂಗಳೂರಿನ ಚಿತ್ರಣವೇ ಸಂಪೂರ್ಣ ಬದಲಾಗಿ ಸ್ಮಾರ್ಟ್ ನಗರ ನಿರ್ಮಾಣವಾಗಲಿದೆ. ಆ ಮೂಲಕ ನರೇಂದ್ರ ಮೋದಿಯವರ ಕಸನು, ಕಲ್ಪನೆ ಸಾಕಾರಗೊಳ್ಳಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

    ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾದ ಮಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ನಗರದಲ್ಲಿ ಕೈಗೊಳ್ಳಲಾಗುವ 90 ಕೋಟಿ ರೂ. ವೆಚ್ಚದ ಎರಡು ಕಾಮಗಾರಿಯ ಶಿಲಾನ್ಯಾಸ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಅಮೃತ್ ಯೋಜನೆ, ಸ್ಮಾರ್ಟ್ ಸಿಟಿ, 792 ಕೋಟಿ ರೂ.ಮೊತ್ತದ ಜಲಸಿರಿ ಯೋಜನೆ, ಗ್ಯಾಸ್ ಪೈಪ್‌ಲೈನ್, ಎಡಿಬಿ ಯೋಜನೆಯಡಿ ಒಳಚರಂಡಿ ಕಾಮಗಾರಿ ಅನುಷ್ಠಾನಗೊಳ್ಳುತ್ತಿದ್ದು, ರಾಜ್ಯದ ಇತರ ನಗರಗಳಿಗೆ ಹೋಲಿಸಿದರೆ ಅತಿ ಹೆಚ್ಚಿನ ಅನುದಾನ ಮಂಗಳೂರಿಗೆ ಬಂದಿದೆ. ಅದರ ಶೇ.100ರಷ್ಟು ಯಶಸ್ವಿ ಅನುಷ್ಠಾನದ ಮೂಲಕ ಅಭಿವೃದ್ಧಿಗೆ ಪೂರಕವಾಗಿ ಬದಲಾವಣೆ ಮಾಡಲಾಗುತ್ತಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಮೇಯರ್ ಪ್ರೇಮಾನಂದ ಶೆಟ್ಟಿ, ಯಡಿಯೂರಪ್ಪ ಅವರ ಮೊದಲ ಅವಧಿಯ ಸರ್ಕಾರ ಇದ್ದಾಗ ನಗರಕ್ಕೆ 100 ಕೋಟಿ ರೂ. ನಗರೋತ್ಥಾನ ಅನುದಾನ ಲಭಿಸುವ ಮೂಲಕ ನಗರದ ಅಭಿವೃದ್ಧಿಗೆ ಚಾಲನೆ ಸಿಕ್ಕಿತ್ತು. ಸ್ಮಾರ್ಟ್ ಸಿಟಿ ಯೋಜನೆಯಡಿ ಮತ್ತೆ ಅಭಿವೃದ್ಧಿ ಪರ್ವ ಆರಂಭವಾಗಿದ್ದು, ಜನರ ಸಹಭಾಗಿತ್ವದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
    ಕನ್ಸಲ್ಟೆಂಟ್ ಆರ್ಕಿಟೆಕ್ಟ್ ನೆಲ್ಸನ್ ಪಾಸ್ ಮತ್ತು ಕುಮಾರಚಂದ್ರ ಯೋಜನೆ ಕುರಿತಂತೆ ಮಾಹಿತಿ ನೀಡಿದರು.

    ಪಾಲಿಕೆ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಪಾಲಿಕೆ ಸದಸ್ಯರಾದ ಪೂರ್ಣಿಮಾ, ಲೋಹಿತ್ ಅಮೀನ್, ದಿವಾಕರ್, ಲೋಕೇಶ್ ಬೊಳ್ಳಾಜೆ, ಸಂದೀಪ್ ಗರೋಡಿ, ಆಯುಕ್ತ ಅಕ್ಷಿ ಶ್ರೀಧರ್, ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ಸ್ಮಾರ್ಟ್ ಸಿಟಿ ಮ್ಯಾನೇಜರ್ ಅರುಣ್‌ಪ್ರಭಾ ಉಪಸ್ಥಿತರಿದ್ದರು.

    ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಸ್ವಾಗತಿಸಿದರು. ಮನೋಹರ್ ಪ್ರಸಾದ್ ನಿರೂಪಿಸಿದರು.

    ಯೋಜನೆ ಪ್ರಗತಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಒಟ್ಟು 1659 ಕೋಟಿ ರೂ. ಮೊತ್ತದ ಕಾಮಗಾರಿ ನಡೆಯಲಿದ್ದು, 44.79 ಕೋಟಿ ರೂ. ಮೊತ್ತದ ವಿವಿಧ ಯೋಜನೆ ಪೂರ್ಣಗೊಂಡಿವೆ. 66.4 ಕೋಟಿ ರೂ. ಮೊತ್ತದ ಯೋಜನೆ ಪ್ರಗತಿಯಲ್ಲಿದೆ. 34.50 ಕೋಟಿ ರೂ. ಮೊತ್ತದ ಕಾಮಗಾರಿ ಟೆಂಡರ್ ಹಂತದಲ್ಲಿದ್ದು, 188 ಕಾಮಗಾರಿ ಡಿಪಿಆರ್ ಹಂತದಲ್ಲಿದೆ.

    ಕಾಮಗಾರಿ ವೇಗವಾಗಿ ಪ್ರಗತಿಯಾಗುತ್ತಿರುವ ಸಂದರ್ಭದಲ್ಲೇ ಪರೋಕ್ಷವಾಗಿ ಅದನ್ನು ಕುಂಠಿತಗೊಳಿಸುವ ಪ್ರಯತ್ನವೂ ನಡೆಯುತ್ತಿದೆ. ಮಾರುಕಟ್ಟೆ ನಿರ್ಮಾಣ ವಿಚಾರ ಕೋರ್ಟ್ ಅಂಗಳದಲ್ಲಿದ್ದು, ಶೀಘ್ರ ಇತ್ಯರ್ಥಗೊಳಿಸಲಾಗುವುದು. ಸ್ಮಾರ್ಟ್‌ಸಿಟಿ ಎರಡನೇ ಹಂತದಲ್ಲಿಯೂ ಮಂಗಳೂರು ಆಯ್ಕೆಯಾಗುವ ನಿಟ್ಟಿನಲ್ಲಿಯೂ ಪ್ರಯತ್ನಗಳು ನಡೆಯುತ್ತಿದೆ.

    ವೇದವ್ಯಾಸ ಕಾಮತ್, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts