ಮೈಸೂರಿನಲ್ಲಿ ಏ.30 ರಂದು ಮೋದಿ ರೋಡ್ ಶೋ

2
Narendra Modi

ಮೈಸೂರಿನಲ್ಲಿ ಏ.30 ರಂದು ಪ್ರಧಾನಿ ನರೇಂದರ ಮೋದಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚಿಸಲು ಏ.30 ರಂದು ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ ಎಂದು ಶಾಸಕ ಎಸ್.ಎ. ರಾಮದಾಸ್ ಹೇಳಿದರು.

ಒಂದು ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ

ರೋಡ್ ಶೋನಲ್ಲಿ ಒಂದು ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ನವದೆಹಲಿಯಿಂದ ನೇರವಾಗಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮೋದಿ ನಂತರ ಒವಲ್ ಮೈದಾನಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಲಿದ್ದಾರೆ. ಮೈಸೂರಿನ ಪಾರಂಪರಿಕ ವಸ್ತುಗಳಾದ ವಿಳ್ಯದೆಲೆ, ಶ್ರೀಗಂಧದ ಕಡ್ಡಿ, ಮೈಸೂರು ಸಿಲ್ಕ್ ಬಟ್ಟೆ ಮುಂತಾದವುಗಳನ್ನು ನೀಡಿ ಅವರನ್ನು ಸ್ವಾಗತಿಸಲಾಗುವುದು. ನಾದಸ್ವರ ಸೇರಿದಂತೆ ಜಾನಪದ ಕಲಾತಂಡಗಳು, ಪೂರ್ಣ ಕುಂಭ ಹೊತ್ತ ಮಹಿಳೆುಯರು ಸ್ವಾಗತ ನೀಡಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒವಲ್ ಮೈದಾನದ ಹೆಲಿಪ್ಯಾಡ್‌ನಿಂದ ಸಂಜೆ 5.30ಕ್ಕೆ ಕಾರಿನಲ್ಲಿ ಮೋದಿ ರೋಡ್ ಶೋ ಪ್ರಾರಂಭಿಸಲಿದ್ದಾರೆ. ರೋಡ್ ಶೋ ಮುಡಾ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಸಂಸ್ಕೃತ ಪಾಠ ಶಾಲೆ, ನಗರ ಬಸ್ ನಿಲ್ದಾಣ, ಕೆ.ಆರ್. ವೃತ್ತ, ನ್ಯೂ ಸಯ್ಯಜಿವರಾವ್ ರಸ್ತೆ, ಆಯುರ್ವೇದ ವೃತ್ತ, ಹಳೆಯ ಆರ್‌ಎಂಸಿ ರಸ್ತೆ, ಬಂಬೂಬಜಾರ್, ಹೈವೇ ವೃತ್ತ ಮೂಲಕ ಸಾಗಿ ಮಿಲೇನಿಯಂ ವೃತ್ತದಲ್ಲಿ ಅಂತ್ಯಗೊಳ್ಳಲಿದೆ ಎಂದರ.

ಸಾಂಪ್ರದಾಯಿಕ ಸ್ವಾಗತ

ಮೋದಿ ಹಾದು ಹೋಗುವ ರಸ್ತೆಯ ಇಕ್ಕಲೆಗಳಲ್ಲಿ ಪಾರಂಪರಿಕ ಉಡುಗೆ ತೊಟ್ಟ ಜನರು ಸ್ವಾಗತಿಸಲಿದ್ದಾರೆ. ಅಲ್ಲದೆ ರಸ್ತೆ ಇಕ್ಕೆಲಗಳಲ್ಲಿ ನರೇಂದ್ರ ಮೋದಿ ಸಾಗಿಬಂದ ಹಾದಿ, ಅವರ ಅಭಿವೃದ್ಧಿ ಕಾರ್ಯಗಳು, ಅವರು ನೀಡಿದ ಕೊಡುಗೆಗಳ ಭಿತ್ತಿ ಚಿತ್ರಗಳನ್ನು ಹಾಕಲಾಗು ವುದು. ಹಿರಿಯ ನಾಗರಿಕರಿಗೆ ಐದು ಸ್ಥಳಗಳಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. 5 ಕಿ.ಮೀ. ರೋಡ್ ಶೋ ನಡೆಸಲಿದ್ದಾರೆ. ಮಿಲೇನಿಯಂ ವೃತ್ತದಲ್ಲಿ ರೋಡ್ ಶೋ ಅಂತ್ಯಗೊಂಡ ನಂತರ ಬನ್ನಿಮಂಟಪ ಹೆಲಿಪ್ಯಾಡ್‌ನಿಂದ ಮಂಡಕಳ್ಳಿ ವಿವಾನ ನಿಲ್ದಾಣಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ನಂತರ ದೆಹಲಿಗೆ ತೆರಳಲ್ಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ, ಕೆ.ಆರ್. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ.ಎಸ್. ಶ್ರೀವತ್ಸ, ಬಿಜೆಪಿ ಮೈಸೂರು ವಿಭಾಗೀಯ ಪ್ರಭಾರಿ ಮೈ.ವಿ.ರವಿಶಂಕರ್, ಮುಡಾ ಅಧ್ಯಕ್ಷ ಯಶಸ್ವಿ ಸೋಮಶೇಖರ್, ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಬಿಜೆಪಿ ಜಿಲ್ಲಾ ಸಹ ವಕ್ತಾರ ಡಾ. ಕೆ ವಸಂತ್ ಕುಮಾರ್, ನಗರ ವಕ್ತಾರ ಎಂ.ಎ. ಮೋಹನ್ ಹಾಗೂ ಇತರರು ಇದ್ದರು.