More

    ಪರ-ವಿರೋಧ ಅಭಿಪ್ರಾಯ ಬಿಟ್ಟು ಮೋದಿ ಚುನಾಯಿಸಿ

    ಹುಬ್ಬಳ್ಳಿ : ಭಾರತ ಹಾಗೂ ಹಿಂದುಗಳ ಸುರಕ್ಷತೆಗೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಅಗತ್ಯವಿದೆ. ಹೀಗಾಗಿ, ಪರ- ವಿರೋಧ ಅಭಿಪ್ರಾಯಗಳನ್ನೆಲ್ಲ ಪಕ್ಕಕ್ಕೆ ಇಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಹೇಳಿದರು.

    ಶ್ರೀರಾಮ ಸೇನೆ ವತಿಯಿಂದ ಹಳೇ ಹುಬ್ಬಳ್ಳಿ ವೃತ್ತದಲ್ಲಿ ಬುಧವಾರ ಆಯೋಜಿಸಿದ್ದ ‘ಮೋದಿ ಗೆಲ್ಲಿಸಿ, ಭಾರತ ಉಳಿಸಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಚುನಾವಣೆ ಸಂದರ್ಭದಲ್ಲಿ ಕುಕ್ಕರ್, ಸೀರೆಯಂತಹ ಆಮೀಷಗಳಿಗೆ ಮನಸೋತು ಮತಗಳನ್ನು ಚಲಾಯಿಸಬಾರದು. ದೇಶಕ್ಕೆ ಯಾರು ಒಳಿತು ಮಾಡುತ್ತಾರೆ ಎಂಬುದನ್ನು ಅರಿತುಕೊಂಡು ಅಭ್ಯರ್ಥಿಗಳನ್ನು ಚುನಾಯಿಸಬೇಕು ಎಂದು ಸಲಹೆ ನೀಡಿದರು.

    ಕಾಂಗ್ರೆಸ್ ಪಕ್ಷ ಬ್ರಿಟೀಷರು ಹುಟ್ಟುಹಾಕಿರುವ ಸಂಸ್ಥೆಯಾಗಿದೆ. ದೇಶ ಸ್ವತಂತ್ರಗೊಂಡ ನಂತರ ಕಾಂಗ್ರೆಸ್ ಅನ್ನು ವಿಸರ್ಜಿಸುವಂತೆ ಮಹಾತ್ಮಾ ಗಾಂಧೀಜಿ ಹೇಳಿದ್ದರು. ಆದರೆ, ಅಂದಿನ ನಾಯಕರು ಪಕ್ಷ ವಿಸರ್ಜಿಸಲಿಲ್ಲ. ಅವರಿಗೆ ಕಾಂಗ್ರೆಸ್ ಬಿಟ್ಟರೆ ಬೇರೆ ಗತಿ ಇರಲಿಲ್ಲ. ಭ್ರಷ್ಟಾಚಾರದಿಂದ ದೇಶವನ್ನು ಹಾಳು ಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ದೇಶ ವಿಂಗಡಣೆಗೆ ಡಾ. ಬಿ.ಆರ್. ಅಂಬೇಡ್ಕರ ಒಪ್ಪಿರಲಿಲ್ಲ. ಪಾಕಿಸ್ತಾನದ ರಚನೆಯಾದರೆ ಪಾಕಿಸ್ತಾನದಲ್ಲಿ ಮುಸ್ಲಿಮರು ಹಾಗೂ ಭಾರತದಲ್ಲಿ ಹಿಂದುಗಳು ಇರಬೇಕು ಎಂದು ಅಂಬೇಡ್ಕರ ಹೇಳಿದ್ದರು. ಇತಿಹಾಸದಲ್ಲಿ ಈ ಬಗ್ಗೆ ದಾಖಲೆಗಳಿವೆ ಎಂದು ತಿಳಿಸಿದರು.

    ಶ್ರೀ ಸತ್ಯಪ್ರಭುದೇಂದ್ರ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಂದ್ರಶೇಖರ ಗೋಕಾಕ, ಮಂಜುನಾಥ ಕಾಟ್ಕರ, ಶ್ರೀಕಾಂತ ಜಿ., ವಿಜಯ ಸಾಲಿಮಠ, ಅಣ್ಣಪ್ಪ ದಿವಟಗಿ, ಲೋಕೇಶ ಗುಂಜಾಳ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts