More

    ರುಪೇ ಕಾರ್ಡ್​ ಫೇಸ್ 2 ಬಿಡುಗಡೆ ಮಾಡಿದ ಭಾರತ, ಭೂತಾನ್ ಪ್ರಧಾನಿಗಳು

    ನವದೆಹಲಿ : ಭೂತಾನ್​ ಪ್ರಜೆಗಳಿಗೆ ಭಾರತದ ರುಪೇ ನೆಟ್​ವರ್ಕ್​ ಬಳಸಿಕೊಳ್ಳಲು ಅನುವಾಗುವಂತಹ ರುಪೇ ಕಾರ್ಡ್​ ಫೇಸ್​ 2 ಅನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಭೂತಾನ್ ಪ್ರಧಾನಿ ಲೊಟೇ ಶೆರಿಂಗ್ ಅವರು ಶುಕ್ರವಾರ ಲೋಕಾರ್ಪಣೆ ಮಾಡಿದರು. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಪ್ರಧಾನಿ ಮೋದಿಯವರು ಭೂತಾನ್​ಗೆ ಭೇಟಿ ನೀಡಿದ ಸಂದರ್ಭದಲ್ಲಿ ರುಪೇ ಫೇಸ್​ ಒಂದರ ಲೋಕಾರ್ಪಣೆ ಆಗಿತ್ತು.

    ಉಭಯ ರಾಷ್ಟ್ರಗಳ ನಡುವೆ ಉತ್ತಮ ದ್ವಿಪಕ್ಷೀಯ ಸಂಬಂಧವಿದ್ದು, ಭೂತಾನ್​ನ ಉಪಗ್ರಹಗಳನ್ನು ಬಾಹ್ಯಾಕಾಶ ಕಕ್ಷೆಗೆ ಸೇರಿಸಲು ಇಸ್ರೋ ಸಿದ್ದತೆ ನಡೆಸಿದೆ. ಇದೇ ರೀತಿ ಮೂರನೇ ಅಂತಾರಾಷ್ಟ್ರೀಯ ಇಂಟರ್​ನೆಟ್ ಗೇಟ್​ವೇ ಸಂಬಂಧಿಸಿದ ಒಪ್ಪಂದವನ್ನು ಭೂತಾನ್ ಬಿಎಸ್​ಎನ್​ಎಲ್​ ಜತೆಗೆ ಮಾಡಿದೆ. ಕರೊನಾ ಸಂಕಷ್ಟದಲ್ಲೂ ಭೂತಾನ್​ಗೆ ಭಾರತ ಆಸರೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ಇದನ್ನೂ ಓದಿ: 2025ರವರೆಗೆ ಆರ್ಥಿಕ ಸಂಕಷ್ಟ – ಆಕ್ಸ್​ಫರ್ಡ್ ಇಕನಾಮಿಕ್ಸ್ ವರದಿಯಲ್ಲಿ ಉಲ್ಲೇಖ

    ಮೊದಲ ಹಂತದ ರುಪೇ ಕಾರ್ಡ್ ನಲ್ಲಿ ಭೂತಾನ್​ ಪ್ರಜೆಗಳು ಭಾರತಕ್ಕೆ ಬಂದಾಗ ಇಲ್ಲಿ ವಹಿವಾಟು ನಡೆಸುವುದಕ್ಕೆ ಅನುಕೂಲವಾಗುವಂತೆ ರೂಪಿಸಲಾಗಿತ್ತು. ಈಗ ಎರಡನೇ ಹಂತದ ರೂಪೇ ಕಾರ್ಡ್​ನಲ್ಲಿ ಅವರು ಭೂತಾನದ ಕಾರ್ಡ್​ ಮೂಲಕವೂ ರುಪೇ ನೆಟ್​ವರ್ಕ್​ನಲ್ಲಿ ವಹಿವಾಟು ನಡೆಸಬಹುದಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)

    ಚುನಾವಣಾ ಕಣಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ‘ಕೊರೊನಾ’ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts