More

    ಅಭ್ಯರ್ಥಿಗಳನ್ನು ದೂರವಿಟ್ಟು, ಕಾರ್ಯಕರ್ತರೊಂದಿಗೆ ಮೋದಿ ಚರ್ಚೆ

    ಕಲಬುರಗಿ: ರೋಡ್ ಶೋನಲ್ಲಿ ಭಾಗವಹಿಸಲು ಕಲಬುರಗಿಯ ಡಿಎಎಆರ್ ಪೊಲೀಸ್ ಮೈದಾನದ ಹೆಲಿಪ್ಯಾಡ್‌ನಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ನಿಂತಿದ್ದ ಬಿಜೆಪಿ ಕಾರ್ಯಕರ್ತರು, ಮುಖಂಡರೊಂದಿಗೆ ಸುಮಾರು 10 ನಿಮಿಷ ಚರ್ಚೆ ನಡೆಸಿ ಈ ಭಾಗದಲ್ಲಿ ಪಕ್ಷದ ಸ್ಥಿತಿಗತಿ, ಕೇಂದ್ರ, ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳ ಲಾಭದ ಕುರಿತು ಮಾಹಿತಿ ಪಡೆದರು. ಆದರೆ ಮೋದಿ ನಗರದಿಂದ ಬೇರೆಡೆ ಹೋಗುವವರೆಗೂ ಜಿಲ್ಲೆಯ ಯಾವೊಬ್ಬ ಬಿಜೆಪಿ ಅಭ್ಯರ್ಥಿಗಳನ್ನು ಸಮೀಪಕ್ಕೂ ಬಿಟ್ಟುಕೊಳ್ಳಲಿಲ್ಲ.

    ನಿಯಮದಂತೆ ಕಾರ್ಯಕರ್ತರು, ಮುಖಂಡರು ಸ್ವಾಗತಿಸಿ ನಮಸ್ಕರಿಸಿ ಹಿಂದೆ ನಿಲ್ಲಬೇಕು. ಆದರೆ ಪ್ರಧಾನಿ ಮೋದಿ ಸ್ವತಃ ಎಲ್ಲ ಕಾರ್ಯಕರ್ತರನ್ನು ಬಳಿ ಕರೆದು ವಿವಿಧ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು. ಈ ಭಾಗದಲ್ಲಿ ರೋಡ್ ಶೋದಿಂದ ಲಾಭವಾಗುತ್ತಾ ಎಂದು ಪ್ರಶ್ನಿಸಿದ್ದಕ್ಕೆ, ಕೇಂದ್ರ ಸರ್ಕಾರದ ಯೋಜನೆ, ನಿಲುವುಗಳನ್ನು ಜನ ಮೆಚ್ಚಿದ್ದಾರೆ. ನಿಮ್ಮನ್ನು ಹತ್ತಿರದಿಂದ ನೋಡಲು ಬಯಸಿದ್ದಾರೆ. ಇಂದು ನೀವು ಬಂದಿದ್ದರಿಂದ ಕಾರ್ಯಕರ್ತರಲ್ಲಿ ಸಹಜವೇ ಜೋಶ್ ಹೆಚ್ಚಲಿದೆ ಎಂದು ಮುಖಂಡರು ತಿಳಿಸಿದರು. ಈ ಭಾಗದಲ್ಲಿ ಎಷ್ಟು ಸೀಟ್ ಬರುತ್ತವೆ? ಪಕ್ಷದ ಸಂಘಟನೆ ಹೇಗೆ ನಡೆದಿದೆ? ಕೇಂದ್ರದ ಯಾವ ಯೋಜನೆ ಬಗ್ಗೆ ಜನರ ಒಲವಿದೆ ಎಂದು ಮೋದಿ ಕೇಳಿದಾಗ, ಮೆಗಾ ಟೆಕ್ಸ್ಟೈಲ್ ಪಾರ್ಕ್ ನಿರ್ಮಾಣವಾಗುತ್ತಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆ ರೈತರಿಗೆ ಭಾರಿ ಅನುಕೂಲ ಕಲ್ಪಿಸಿದೆ ಎಂದು ಮುಖಂಡರು ತಿಳಿಸಿದರು. ಮಹಿಳಾ ಮೋರ್ಚಾದವರೊಂದಿಗೂ ಮಾತನಾಡಿದ ಮೋದಿ, ಮಹಿಳೆಯರು ಯಾವ ಯೋಜನೆಗಳ ಬಗ್ಗೆ ಒಲವು ಹೊಂದಿದ್ದಾರೆ ಎಂದು ಕೇಳಿ ಮಾಹಿತಿ ಪಡೆದು ಕುಶಲೋಪರಿ ವಿಚಾರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts