More

    ಆಧುನಿಕ ಮಹಿಳಾ ಸಾಹಿತ್ಯ ಓದುವುದು ಅಗತ್ಯ

    ಸವಣೂರ: ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಂವೇದನೆಯನ್ನು ಮರು ಓದಿನ ಮುಖಾಂತರ ಮಾತ್ರ ಗುರುತಿಸಲು ಸಾಧ್ಯ ಎಂದು ವಿಮರ್ಶಕಿ ಎಂ.ಎಸ್. ಆಶಾದೇವಿ ತಿಳಿಸಿದರು.

    ಸಾಹಿತ್ಯ ಅಕಾಡೆಮಿ, ಕಾಲೇಜು ಐಕ್ಯೂಎಸಿ, ಕನ್ನಡ ವಿಭಾಗದ ಆಶ್ರಯದಲ್ಲಿ ಪಟ್ಟಣದ ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಆಧುನಿಕ ಕನ್ನಡ ಸಾಹಿತ್ಯ ಮಹಿಳಾ ಸಂವೇದನೆ ಒಂದು ದಿನದ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

    ರಾಷ್ಟ್ರಕವಿಗಳಾದಿಯಾಗಿ ಬಹಳಷ್ಟು ಕವಿಗಳು ತಮ್ಮ ಕಾವ್ಯ ರಚನೆಯಲ್ಲಿ ಸಹಜವಾಗಿ ಮಹಿಳಾ ಸಂವೇದನೆಯನ್ನು ಹತ್ತಿಕ್ಕುವ ಕಾರ್ಯಕ್ಕೆ ಹಲವಾರು ಉದಾಹರಣೆಗಳು ಇಂದಿಗೂ ಜ್ವಲಂತವಾಗಿವೆ. ಆದ್ದರಿಂದ, ಮಹಿಳೆಯರು ನಿರ್ಣಯದ ನಿಲುವಿಗೆ ದಾಟಿ ಬಂದಾಗ ಸಮಾಜದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿದೆ ಎಂದರು.

    ಪ್ರಾಚಾರ್ಯ ಗಂಗಾ ನಾಯ್ಕ ಎಲ್. ಅಧ್ಯಕ್ಷತೆ ವಹಿಸಿದ್ದರು.

    ಮೊದಲನೇ ಗೋಷ್ಠಿಯಲ್ಲಿ ನಿತ್ಯಾನಂದ ಬಿ. ಶೆಟ್ಟಿ ಅವರು ಸ್ತ್ರೀ ಸಂವೇದನೆಯ ಸ್ವರೂಪ, ತಾರಿಣಿ ಶುಭದಾಯಿನಿ ಅವರು ಸ್ತ್ರೀವಾದಿ ವಿಮರ್ಶೆಯ ನೆಲೆಗಳ ಕುರಿತು ಹಾಗೂ ದು. ಸರಸ್ವತಿ ಅವರು ಸಮಕಾಲೀನ ಮಹಿಳಾ ಚಳವಳಿ ಸ್ವರೂಪ ಮತ್ತು ಪ್ರಸ್ತುತತೆ ಕುರಿತು ಪ್ರಬಂಧ ಮಂಡಿಸಿದರು.

    ಎರಡನೇ ಗೋಷ್ಠಿಯಲ್ಲಿ ಎಂ.ಡಿ. ಒಕ್ಕುಂದ ಅವರು ಬೇಂದ್ರೆ ಕಾವ್ಯದಲ್ಲಿ ಮಹಿಳಾ ಪ್ರತಿನಿಧಿಕರಣ, ಸುಭಾಷ್ ರಾಜಮಾನೆ ಅವರು ಸಿಮೊನ್ ದ ಬೊವಾ ಮತ್ತು ಮಹಿಳಾ ಪ್ರಶ್ನೆಗಳ ಕುರಿತು ಹಾಗೂ ಗೋವಿಂದರಾಯ ಎಂ., ಲಲಿತಾ ಸಿದ್ದಬಸವಯ್ಯನವರ ಕಾವ್ಯದ ಸ್ತ್ರೀ ಸಂವೇದನೆಯ ಆಶಯಗಳ ಕುರಿತು ಪ್ರಬಂಧ ಮಂಡಿಸಿದರು.

    ಕವಿ ಸತೀಶ ಕುಲಕರ್ಣಿ ಸಮಾರೋಪ ನುಡಿದರು. ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು. ಪ್ರಾಧ್ಯಾಪಕರಾದ ಸುಭಾಸ ರಾಜಮಾನೆ ಹಾಗೂ ಚಂದ್ರಕಾಂತ ಶಿರಗುಂಪಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts