More

    ಮೂಡಿಗೆರೆಯಲ್ಲಿ ಸಾಧಾರಣ ಮಳೆ

    ಮೂಡಿಗೆರೆ: ಪಟ್ಟಣದಲ್ಲಿ ಶುಕ್ರವಾರ ಸಂಜೆ ಸಾಧಾರಣ ಮಳೆಯಾಯಿತು.

    ವಿಪರೀತವಾದ ಬಿಸಿಲು ಇದ್ದಂತೆ ಆರಂಭವಾದ ಮಳೆ ಸುಮಾರು 20 ನಿಮಿಷ ಸುರಿಯಿತು. ಜನ ಸಂಚಾರ ಮತ್ತು ವಾರದ ಸಂತೆ ಕೆಲ ಹೊತ್ತು ಸ್ತಬ್ಧಗೊಂಡಿತ್ತು. ಬಿಸಿಲ ಬೇಗೆಯಲ್ಲಿದ್ದ ಪಟ್ಟಣದಲ್ಲಿ ತಂಪಿನ ವಾತಾವರಣ ಉಂಟಾಯಿತು.
    ಪ್ರತಿ ವರ್ಷ ಜನವರಿ, ಫೆಬ್ರವರಿಯಲ್ಲಿ ಮೂರ್ನಾಲ್ಕು ಬಾರಿ ಮಳೆಯಾಗುತ್ತಿತ್ತು. ಈ ವರ್ಷ ಮಳೆಯಾಗದೆ ರಣಬಿಸಿಲಿಗೆ ಜನ ತತ್ತರಿಸಿದ್ದಾರೆ. ನದಿ, ಕೆರೆ, ಬಾವಿಗಳಲ್ಲಿ ನೀರು ಬತ್ತಿದೆ. ಗ್ರಾಪಂಗಳು ಹಳ್ಳಿಗಳಿಗೆ ಪ್ರತಿದಿನ ಕುಡಿಯುವ ನೀರು ಪೂರೈಕೆ ಮಾಡುತ್ತಿತ್ತು. ಈ ವರ್ಷ ಬರಗಾಲದಿಂದಾಗಿ ಎರಡು ಅಥವಾ ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಪಟ್ಟಣ ಪಂಚಾಯಿತಿಯಿಂದ ಬಡಾವಣೆಗಳಿಗೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿತ್ತು. ಈಗ 3 ಮತ್ತು 4 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಕುಡಿಯುವ ನೀರು ಪೂರೈಕೆ ಮಾಡುವ ಕಿತ್ತಲೆಗಂಡಿಯ ನೀರಿನ ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಬೀಜುವಳ್ಳಿಯ ಇನ್ನೊಂದು ಘಟಕ ಸ್ಥಗಿತಗೊಂಡಿದೆ. ಬೀಜುವಳ್ಳಿಯ ಸುಣ್ಣದಹಳ್ಳ ಬತ್ತಿ ಹೋಗಿದೆ.
    ಗುರುವಾರ ಪಪಂ ಜೆಸಿಬಿಯಿಂದ ಸುಣ್ಣದ ಹಳ್ಳದಲ್ಲಿ ಗುಂಡಿ ತೆಗೆದು ನೀರು ಸಂಗ್ರಹಿಸುತ್ತಿದೆ. ನದಿ, ಹಳ್ಳ, ಸರ್ಕಾರಿ ಕೆರೆ, ಬಾವಿ, ಕೊಳವೆಬಾವಿಯಿಂದ ಸ್ಪಿಂಕ್ಲರ್‌ಗೆ ನೀರು ಬಳಸದಂತೆ ಜಿಲ್ಲಾಡಳಿತ ನಿಷೇಧ ಹೇರಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಅಧಿಕಾರಿಗಳು ಚುನಾವಣೆ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts