More

    ರಸ್ತೆಯಲ್ಲಿ ಗುಂಡಿ ತೆಗೆದ ಹಿನ್ನೆಲೆಯಲ್ಲಿ ವಿಧಾನ ಪರಿಷತ್​ ಸದಸ್ಯೆ ತೇಜಸ್ವಿನಿ ರಮೇಶ್​ ವಿರುದ್ಧ ಠಾಣೆಗೆ ದೂರು

    ದೊಡ್ಡಬಳ್ಳಾಪುರ: ಶಾಲೆ ನಿರ್ಮಾಣಕ್ಕಾಗಿ ವಿಧಾನ ಪರಿಷತ್​ ಸದಸ್ಯೆ ತೇಜಸ್ವಿನಿ ರಮೇಶ್​ ಮನೆಗೆ ತಿರುಗಾಡಲು ಇದ್ದ ರಸ್ತೆಯನ್ನು ವಶಪಡಿಸಿಕೊಂಡು ಗುಂಡಿ ತೆಗೆದಿದ್ದಾರೆ ಎಂದು ಮೇಳೆಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್​. ನರಸಿಂಹಮೂರ್ತಿ ಎಂಬುವವರು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

    ದೊಡ್ಡರಾಯಪ್ಪನಹಳ್ಳಿಯ ಸರ್ವೆ ನಂ. 60/1ಎ ಜಾಗದಲ್ಲಿ ಸ್ವಂತ ಮನೆ ನಿರ್ಮಿಸಿಕೊಂಡಿದ್ದೇನೆ. ಮನೆಯ ಆವರಣದಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ನಮ್ಮ ಮನೆಯ ಪೂರ್ವ ದಿಕ್ಕಿಗೆ ಇರುವ ಗ್ರಾಮ ಠಾಣಾ ನಿವೇಶನದಲ್ಲಿ ವಿಧಾನ ಪರಿಷತ್​ ಸದಸ್ಯೆ ತೇಜಸ್ವಿನಿ ರಮೇಶ್​ ಅವರು ಶಾಲೆ ನಿರ್ಮಿಸುತ್ತಿದ್ದು ಇದಕ್ಕಾಗಿ ನನ್ನ ಮನೆಗೆ ಸಂಪರ್ಕ ಕಲ್ಪಿಸುತ್ತಿದ್ದ ರಸ್ತೆಯನ್ನು ವಶಪಡಿಸಿಕೊಂಡು ಗುಂಡಿ ತೆಗೆದಿದ್ದಾರೆ. ಶೌಚಾಲಯ ಕೂಡ ಬಿರುಕುಗೊಂಡಿದೆ. ಇದನ್ನು ಪ್ರಶ್ನಿಸಲು ಮುಂದಾದ ನನ್ನ ಮೇಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದವಿಗೂ ಗೌರವ ಕೊಡುಗೆ ನಿಂದಿಸಿದ್ದಾರೆ. ಹೀಗಾಗಿ ತಾವು ಸ್ಥಳ ಪರಿಶೀಲಿಸಿ ಹಾನಿ ತಪ್ಪಿಸಿ ತಿರುಗಾಡಲು ರಸ್ತೆ ತೆರವುಗೊಳಿಸಿ ನ್ಯಾಯ ಒದಗಿಸಬೇಕು ಎಂದು ಅವರು ದೂರು ನೀಡಿದ್ದಾರೆ.

    ವಿಧಾನ ಪರಿಷತ್​ ಸದಸ್ಯೆ ತೇಜಸ್ವಿನಿ ರಮೇಶ್​ ಅವರು ನರಸಿಂಹಮೂರ್ತಿ ಹಾಗೂ ಗ್ರಾಮಸ್ಥರನ್ನು ನೂಕಿದ ಘಟನೆ ವಿಡಿಯೋ ಚಿತ್ರೀಕರಣಗೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ದೊಡ್ಡರಾಯಪ್ಪನಹಳ್ಳಿ ತೇಜಸ್ವಿನಿ ರಮೇಶ್ ಅವರ ಹುಟ್ಟೂರು. ಕಳೆದ 6 ತಿಂಗಳಿಂದ ಗ್ರಾಮದಲ್ಲಿ ನೆಲೆಸಿದ್ದು, ಶಾಲೆಯೊಂದನ್ನ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts