More

    ಎಂಎಲ್ಸಿ ಭೋಜೇಗೌಡ ದುಬಾರಿ ಕಾರುಗಳ, 11.20 ಲಕ್ಷ ರೂ. ಬೆಲೆಯ ರೋಲೆಕ್ಸ್ ವಾಚ್ ಒಡೆಯ

    ಮೈಸೂರು: ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ 4.10 ಕೋಟಿ ರೂ. ಚರಾಸ್ತಿ ಹೊಂದಿದ್ದಾರೆ.


    ಇವರ ಪತ್ನಿ ಅಚಲಾ ಭೋಜೇಗೌಡ 1.02 ಕೋಟಿ ರೂ. ಮತ್ತು ಪುತ್ರ ನಿತೀಶ್‌ಗೌಡ 3.87 ಕೋಟಿ ರೂ. ಚರಾಸ್ತಿ ಹೊಂದಿದ್ದಾರೆ. ಭೋಜೇಗೌಡ ಚುನಾವಣಾ ಆಯೋಗಕ್ಕೆ ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣದಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.

    ಜತೆಗೆ, 13.01 ಕೋಟಿ ರೂ.ಬೆಲೆ ಬಾಳುವ ಸ್ವಯಾರ್ಜಿತ ಸ್ವತ್ತು, 1.34 ಕೋಟಿ ರೂ. ಬೆಲೆಯ ಪಿತ್ರಾರ್ಜಿತ ಸ್ವತ್ತು ಇದೆ. ಪತ್ನಿ ಹೆಸರಿನಲ್ಲಿ 8.50 ಕೋಟಿ ರೂ. ಮೊತ್ತದ ಸ್ವಯಾರ್ಜಿತ ಸ್ವತ್ತು ಇದೆ.


    ಭೋಜೇಗೌಡರ ಹೆಸರಿನಲ್ಲಿ 73 ಲಕ್ಷ ರೂ., ಇವರ ಪತ್ನಿ ಹೆಸರಿನಲ್ಲಿ 37 ಲಕ್ಷ ರೂ. ಹಾಗೂ ಪುತ್ರನ ಹೆಸರಿನಲ್ಲಿ 2.48 ಕೋಟಿ ರೂ. ಸಾಲ ಮಾಡಿದ್ದಾಗಿ ತಿಳಿಸಿದ್ದಾರೆ.

    2022-23ರಲ್ಲಿ 1.12 ಕೋಟಿ ರೂ., 2023-24ನೇ ಸಾಲಿನಲ್ಲಿ 99.09 ಲಕ್ಷ ರೂ. ತೆರಿಗೆ ಆದಾಯ ತೋರಿಸಿದ್ದಾರೆ. 2023-24ನೇ ಸಾಲಿನಲ್ಲಿ ಇವರ ಪತ್ನಿ 10.34 ಲಕ್ಷ ರೂ., ಪುತ್ರ 1.24 ಕೋಟಿ ರೂ. ಆದಾಯ ತೆರಿಗೆ ತೋರಿಸಿದ್ದಾರೆ.


    ವಕೀಲ ವೃತ್ತಿ ಮಾಡುತ್ತಿರುವ ಭೋಜೇಗೌಡ ದುಬಾರಿ ಕಾರುಗಳ ಮಾಲೀಕರಾಗಿದ್ದು, 25 ಲಕ್ಷ ರೂ. ಮೌಲ್ಯದ ಇನ್ನೋವಾ ಕಾರ್, 48 ಲಕ್ಷ ರೂ.ಬೆಲೆಯ ಬಿಎಂಡಬ್ಲುೃ ಕಾರ್, 71.34 ಲಕ್ಷ ರೂ.ಗಳ ಬೆನ್ಜ್ ಕಾರ್, 37.64 ಲಕ್ಷ ರೂ. ಬೆಲೆಯ ಇನ್ನೋವಾ ಐಕ್ರಾಸ್ ಕಾರ್ ಹೊಂದಿದ್ದಾರೆ. ಪತ್ನಿ ಬಳಿ 2.56 ಲಕ್ಷ ರೂ., 7.50 ಲಕ್ಷ ರೂ. ಮೌಲ್ಯದ ಎರಡು ಕಾರುಗಳಿವೆ.


    ಭೋಜೇಗೌಡರ ಬಳಿ 88.59 ಲಕ್ಷ ರೂ. ಬೆಲೆಬಾಳುವ 950 ಗ್ರಾಂ ಚಿನ್ನ, 1.30 ಲಕ್ಷ ರೂ. ಬೆಲೆಬಾಳುವ 2.5 ಕೆಜಿ ಬೆಳ್ಳಿ, 11.20 ಲಕ್ಷ ರೂ. ಬೆಲೆಯ ರೋಲೆಕ್ಸ್ ವಾಚ್ ಇದೆ.


    ಇವರ ಪತ್ನಿ ಬಳಿ 81.20 ಲಕ್ಷ ರೂ. ಬೆಲೆಬಾಳುವ 1,400 ಗ್ರಾಂ ಚಿನ್ನ, 1.25 ಲಕ್ಷ ರೂ. ಬೆಲೆಬಾಳುವ 2.5 ಕೆಜಿ ಬೆಳ್ಳಿ, ಮಗನ ಬಳಿ 4.50 ಲಕ್ಷ ರೂ. ಬೆಲೆಬಾಳುವ 100 ಗ್ರಾಂ ಚಿನ್ನಾಭರಣ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts