More

    ಗಣೇಶ್ ಕುಲಾಲರ ಕಾರ್ಯ ಶ್ಲಾಘನೀಯ, ಪೌರಸನ್ಮಾನ ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್ ಬಣ್ಣನೆ

    ಮಂಗಳೂರು: ಕೋವಿಡ್ ಸಂದರ್ಭ ಮೃತಪಟ್ಟವರ ಅಂತಿಮ ಸಂಸ್ಕಾರವನ್ನು ಹಿಂಜರಿಕೆ ಇಲ್ಲದೆ ನೆರವೇರಿಸಿದ ಗಣೇಶ್ ಕುಲಾಲ್ ಅವರ ಕಾರ್ಯ ದೇವರು ಮೆಚ್ಚುವಂಥದ್ದು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

    ಮಹಾನಗರ ಪಾಲಿಕೆಯ ಲೆಕ್ಕಪತ್ರ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ನೇಮಕಗೊಂಡ ದೇರೆಬೈಲ್ ನೈಋತ್ಯ ವಾರ್ಡ್‌ನ ಕಾರ್ಪೊರೇಟರ್ ಗಣೇಶ್ ಕುಲಾಲ್ ಅವರಿಗೆ ಉರ್ವ ನಾಗರಿಕ ಸಮಿತಿ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ವತಿಯಿಂದ ಇತ್ತೀಚೆಗೆ ಪೌರಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಉರ್ವ ಪಂಚಲಿಂಗೇಶ್ವರ ದೇವಸ್ಥಾನದ ತಂತ್ರಿ ರಮೇಶ್ ತಂತ್ರಿ ಆಶೀರ್ವಚನ ನೀಡಿದರು. ಮುಡಾ ಮಾಜಿ ಅಧ್ಯಕ್ಷ ಡಾ.ಬಿ.ಜಿ.ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಇಂಜಿನಿಯರ್ ಬಾಬಾ ಅಲಂಕಾರ್, ಉರ್ವ ಮಾರಿಯಮ್ಮ ದೇವಸ್ಥಾನ ಆಡಳಿತ ಮೊಕ್ತೇಸರ ಲಕ್ಷ್ಮಣ್ ಅಮೀನ್, ಧಾರ್ಮಿಕ ಮುಂದಾಳು ಗಣೇಶ್ ಪೊದುವಾಳ್, ಚಿಲಿಂಬಿ ಮಲರಾಯ ದೈವಸ್ಥಾನದ ಸುರೇಶ್ ರಾವ್, ಕೋರ್ದಬ್ಬು ದೈವಸ್ಥಾನ ಅಧ್ಯಕ್ಷ ಬಾಲಕೃಷ್ಣ ಗುರಿಕಾರ್, ನಾಗರಿಕ ಸಮಿತಿ ಅಧ್ಯಕ್ಷ ಮುರಳೀಧರ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

    ಉರ್ವ ನಾಗರಿಕರ ಸಮಿತಿ ಕಾರ್ಯದರ್ಶಿ ಮನೋಜ್ ಚಿಲಿಂಬಿ ಸ್ವಾಗತಿಸಿದರು. ಅರುಣ್ ಉರ್ವ ಸನ್ಮಾನ ಪತ್ರ ವಾಚಿಸಿದರು. ಸಾಯಿಕೃಷ್ಣ ವಂದಿಸಿದರು. ಚೇತನ್ ಶೆಟ್ಟಿ ಹಾಗೂ ಲೋಕೇಶ್ ರೈ ಕಾರ್ಯಕ್ರಮ ನಿರೂಪಿಸಿದರು.

    ನಿಸ್ವಾರ್ಥ ಸಮಾಜಸೇವಕ

    ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ನಿಸ್ವಾರ್ಥ ಸಮಾಜ ಸೇವಕ ಗಣೇಶ್ ಅವರ ಪ್ರಾಮಾಣಿಕ ವ್ಯಕ್ತಿತ್ವದಿಂದ ಸ್ಥಾಯಿ ಸಮಿತಿ ಅಧ್ಯಕ್ಷತೆಯ ಉನ್ನತ ಸ್ಥಾನ ಲಭಿಸಿದೆ ಎಂದರು. ಸಾಮಾಜಿಕ ಮುಂದಾಳು ಹನುಮಂತ ಕಾಮತ್ ಮಾತನಾಡಿ, ಗಣೇಶ್ ಕುಲಾಲ್ ನಿಷ್ಕಳಂಕ ಮನಸ್ಸಿನ, ಭ್ರಷ್ಟಾಚಾರ ರಹಿತ ಜನಪ್ರತಿನಿಧಿಯಾಗಿ ಮಹಾನಗರ ಪಾಲಿಕೆಯ ಎಲ್ಲ ಕಾರ್ಪೊರೇಟರ್‌ಗಳಿಗೆ ಮಾದರಿಯಾಗಿದ್ದಾರೆ ಎಂದರು. ಉರ್ವ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಭಾರತಿ ಮಾತನಾಡಿ, ಅನಾಥ ಮೃತದೇಹ ಸಂಸ್ಕಾರದಲ್ಲಿ ಪೊಲೀಸ್ ಇಲಾಖೆಯೊಂದಿಗೆ ನಿರಂತರ ಸಹಕರಿಸುವ ಗಣೇಶ್ ಕುಲಾಲ್ ಕಾರ್ಯ ಶ್ಲಾಘನೀಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts