ಬೇಲೂರು ಅಭಿವೃದ್ಧಿಪಡಿಸಲು ಶಾಸಕ ಪಾದಯಾತ್ರೆ

1 Min Read
ಬೇಲೂರು ಅಭಿವೃದ್ಧಿಪಡಿಸಲು ಶಾಸಕ ಪಾದಯಾತ್ರೆ
ಬೇಲೂರು ಪಟ್ಟಣವನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಶಾಸಕ ಸಿಮೆಂಟ್ ಮಂಜುನಾಥ್ ಅಧಿಕಾರಿಗಳು ಮತ್ತು ಮುಖಂಡರೊಂದಿಗೆ ಪಾದಯಾತ್ರೆ ನಡೆಸಿ ಪರಿಶೀಲಿಸಿದರು. ಹಳೇ ಆಲೂರು ರಮೇರ್ಶ, ನಾಗರಾಜ್ ಕ್ಯಾಂಟೀನ್, ಲೋಹಿತ್, ಗಣೇಶ್, ನಂಜುಂಡಪ್ಪ ಇತರರಿದ್ದರು.

ಆಲೂರು: ಸುಂದರ ಹಾಗೂ ಸ್ವಚ್ಛತೆ ಹೊಂದಿದ ಪಟ್ಟಣವನ್ನಾಗಿಸಲು ಶಾಸಕ ಸಿಮೆಂಟ್ ಮಂಜುನಾಥ್ ಪಟ್ಟಣ ಪಂಚಾಯಿತಿಯ ಮುಖ್ಯ ಇಂಜಿನಿಯರ್ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಕೊನೆಪೇಟೆಯಿಂದ ಕೆಇಬಿ ಸರ್ಕಲ್‌ವರೆಗೂ ಪಾದಯಾತ್ರೆ ಮಾಡಿ ವೀಕ್ಷಿಸಿದರು.

ಬಳಿಕ ಮಾತನಾಡಿದ ಶಾಸಕರು, ಆಲೂರು ಪಟ್ಟಣದ ವ್ಯಾಪ್ತಿಯಲ್ಲಿ ಈ ಹಿಂದೆ ಮಾಡಿರುವ ಕಾಮಗಾರಿಗಳು ಅವೈಜ್ಞಾನಿಕವಾಗಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಆಗಿಲ್ಲ. ಹಾಗಾಗಿ ಪಟ್ಟಣದ ಕೆ.ಬಿ.ಸರ್ಕಲ್‌ವರೆಗೂ ಮರು ಡಾಂಬರೀಕರಣ, ಪಾದಚಾರಿಗಳು ನಡೆದಾಡಲು ಫುಟಪಾತ್, ಮಳೆನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಸಾರ್ವಜನಿಕರಿಗೆ ಕಲ್ಪಿಸುವುದರ ಜತೆಗೆ ಪಟ್ಟಣದ ಅಭಿವೃದ್ಧಿಗೆ ರೂಪುರೇಷೆಗಳನ್ನು ಹಾಕಿಕೊಂಡು ಕೆಲಸ ಮಾಡುವುದಾಗಿ ತಿಳಿಸಿದರು.

ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯರಾದ ಹಳೇ ಆಲೂರು ರಮೇಶ್, ನಾಗರಾಜ್ ಕ್ಯಾಂಟೀನ್, ನಗರ ಅಧ್ಯಕ್ಷ ಲೋಹಿತ್, ಬೈರಾಪುರ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್, ನಂಜುಂಡಪ್ಪ, ಬಿಜೆಪಿ ಮುಖಂಡರಾದ ಲೋಕೇಶ್, ದಡದಳ್ಳಿ ನವೀನ್, ಜೆಸಿಬಿ ರವಿ ಇದ್ದರು.

See also  ಅಹಿಂಸಾ ತತ್ವಗಳನ್ನು ಎಲ್ಲರೂ ಪಾಲಿಸೋಣ
Share This Article