More

    12 ಲಕ್ಷ ಗೋಣಿ ಚೀಲಗಳ ಪೂರೈಕೆಗೆ ಸರ್ಕಾರ ಆದೇಶ

    ಸಿಂಧನೂರು: ರೈತರ ಜೋಳ ಖರೀದಿಗಾಗಿ ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗೆ 12 ಲಕ್ಷ ಚೀಲಗಳ ಪೂರೈಕೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.

    ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2022-23ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ನಿಗದಿತ ಪ್ರಮಾಣದಲ್ಲಿ ಕಡಲೆಕಾಳು ಖರೀದಿಯಾಗಿಲ್ಲ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದಿಂದ ಖರೀದಿಸಲಾದ ಗೋಣಿಚೀಲಗಳಲ್ಲಿ ಬಾಕಿ ಉಳಿದಿರುವ 12 ಲಕ್ಷ ಗೋಣಿಚೀಲಗಳನ್ನು ಭೌತಿಕವಾಗಿ ಜೋಳ ಭರಿಸಲು ಯೋಗ್ಯವಾಗಿವೆ. ನಿಯಮಿತ ಸಂಸ್ಥೆಯಿಂದ ಪ್ರತಿ ಗೋಣಿಚೀಲದ ದರ 65 ರೂ. ರಂತೆ ಹಾಗೂ ಸಾಗಾಣಿಕಾ ವೆಚ್ಚವನ್ನು ಭರಿಸುವ ಷರತ್ತು ವಿಧಿಸಲಾಗಿದೆ. ಈಗಾಗಲೇ ಬೀದರ್, ಕಲಬುರಗಿ, ಗದಗ, ರಾಯಚೂರು, ಯಾದಗಿರಿ, ಧಾರವಾಡ, ಬೆಳಗಾವಿ ಹಾಗೂ ಇತರ ಜಿಲ್ಲೆಗಳಲ್ಲಿ ದಾಸ್ತಾನು ಮಾಡಿರುವ ಗೋಣಿಚೀಲಗಳನ್ನು ಅವಶ್ಯಕತೆಗನುಗುಣವಾಗಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಅವರು ಎತ್ತುವಳಿ ಮಾಡಿ ರೈತರ ಹಿತದೃಷ್ಠಿಯಿಂದ ಸುಗಮವಾಗಿ ಜೋಳದ ಖರೀದಿ ಪ್ರಕ್ರಿಯೆಯನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಆದೇಶಿಸಿದೆ. ರೈತರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

    ಏ.27 ಕ್ಕೆ ಲೋಕಸಭೆ ಚುನಾವಣೆ ಪ್ರಚಾರ ಸಭೆಗೆ ಸಿಎಂ ಸಿದ್ದರಾಮಯ್ಯ ನಗರಕ್ಕೆ ಆಗಮಿಸಲಿದ್ದಾರೆ. ಸಿರಗುಪ್ಪ, ಕಾರಟಗಿ, ಕನಕಗಿರಿ, ಸಿಂಧನೂರು ಒಳಗೊಂಡಂತೆ ಪ್ರಚಾರ ಸಭೆ ನಡೆಯಲಿದೆ. ಈಗಾಗಲೇ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲಿದೆ. ಗ್ಯಾರಂಟಿಗಳು ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲ ಒದಗಿಸಿವೆ. ಬರಗಾಲದಲ್ಲಿ ಜೀವನ ನಡೆಸಲು ಸಾಧ್ಯವಾಗಿದೆಂದರು. ತಾಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ವೈ, ತಾಪಂ ಮಾಜಿ ಅಧ್ಯಕ್ಷ ಬಿ.ಎಚ್.ನಾಯಕ, ಶೇಖರಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts