More

    ಕೂಸಿನ ಮನೆಗೆ ಶಾಸಕ ಚಾಲನೆ


    ಮಡಿಕೇರಿ: ಗೋಣಿಕೊಪ್ಪದ ಪೊನ್ನಂಪೇಟೆ ತಾಲೂಕಿನ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ಕೂಸಿನ ಮನೆಗೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಗುರುವಾರ ಚಾಲನೆ ನೀಡಿದರು.


    ನಂತರ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರ ಮಕ್ಕಳಿಗೆ ಕೂಸಿನ ಮನೆ ಸಹಕಾರಿಯಾಗಲಿದೆ. ಕೂಸಿನ ಮನೆಯಲ್ಲಿ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನು ನುರಿತ ಆರೈಕೆದಾರರ ಮೂಲಕ ಪೋಷಿಸಲಾಗುತ್ತದೆ. ಇದರ ಸದುಪಯೋಗವನ್ನು ತಿತಿಮತಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಪಡೆದುಕೊಳ್ಳಲು ತಿಳಿಸಿದರು.


    ಚಿಕ್ಕ ವಯಸ್ಸಿನ ಮಕ್ಕಳ ಮಾನಸಿಕ ಹಾಗೂ ಶಾರೀರಿಕ ಬೆಳೆವಣಿಗೆಯು ಪ್ರಮುಖ ಘಟ್ಟವಾಗಿದ್ದು, ಕೂಸಿನ ಮನೆಯಲ್ಲಿ ಈ ಎಲ್ಲ ರೀತಿಯ ಬೆಳವಣಿಗೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಆರೈಕೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.


    ತಿತಿಮತಿ ಗ್ರಾಪಂ ಅಧ್ಯಕ್ಷ ಪೊನ್ನು, ಉಪಾಧ್ಯಕ್ಷೆ ಶ್ಯಾಮಲಾ, ತಾಪಂ ಇಒ ಕೆ.ಸಿ.ಅಪ್ಪಣ್ಣ, ಮನರೇಗಾ ಸಹಾಯಕ ನಿರ್ದೇಶಕ ಎಂ.ಡಿ.ಶ್ರೀನಿವಾಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಗುರುಶ್ರೀ, ಗ್ರಾಪಂ ಸದಸ್ಯರು, ತಾಲೂಕು ಐಇಸಿ ಸಂಯೋಜಕ ನರೇಂದ್ರ, ತಾಂತ್ರಿಕ ಸಹಾಯಕ ನಿರಂಜನ್, ಗ್ರಾಪಂ ಸಿಬ್ಬಂದಿ, ಕೂಸಿನ ಮನೆಯ ಆರೈಕೆದಾರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts