More

    ಸಿಎಂ ಬದಲಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಆರ್‌.ವಿ.ದೇಶಪಾಂಡೆ

    ಕಾರವಾರ: ಸಿದ್ದರಾಮಯ್ಯ ನಾಯಕತ್ವದಲ್ಲಿ ಸರ್ಕಾರ ಬಹಳ ಸ್ಥಿರವಾಗಿದೆ. ರಾಜಕೀಯ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರುತ್ತದೆ. ಅದರರ್ಥ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಾರೆ ಎಂದಲ್ಲ ಎಂದು ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

    ಸಿಎಂ ಬದಲಾವಣೆ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜತೆ ಶನಿವಾರ ಮಾತನಾಡಿದ ಅವರು, ಒಂದು ದೃಷ್ಟಿಯಲ್ಲಿ ಈ ರೀತಿಯ ಅಂಶಗಳು ಒಳ್ಳೆಯದೇ ಚರ್ಚೆಯಾದಾಗ ಹೊಸ ಅಂಶಗಳು ಹೊರ ಬರಬಹುದು. ಸಿದ್ದರಾಮಯ್ಯ ನೇತ್ರತ್ವದ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಯಾವುದೇ ಶಾಸಕರು ಆಪರೇಶನ್ ಕಮಲಕ್ಕೆ ಒಳಗಾಗುತ್ತಿರುವ ಮಾಹಿತಿ ನನಗಿಲ್ಲ. ಸರ್ಕಾರಕ್ಕೆ ಸಂಪೂರ್ಣ ಬಹುಮತವಿದೆ, ಅಸ್ಥಿರವಾಗುವ ಪ್ರಶ್ನೆಯೇ ಇಲ್ಲ ಎಂದರು.
    ಗ್ಯಾರಂಟಿಯಿಂದ ಅನುದಾನದ ಕೊರತೆ
    ಬಿಜೆಪಿ ಸರ್ಕಾರದ ನಂತರ ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ. ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಅನುದಾನ ಬರುತ್ತಿಲ್ಲ. ಈ ಬಗ್ಗೆ ಸಿಎಂ ಅವರ ಜತೆ ಕೆಲ ದಿನಗಳ ಹಿಂದೆ ಮಾತುಕತೆ ನಡೆಸಿದ್ದೇನೆ. ಡಿಸೆಂಬರ್‌ನಲ್ಲಿ ಈ ಕುರಿತು ಚರ್ಚಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದರು.

    ಕಡಲ ತೀರ ಹೊಲಸು- ಅಸಮಾಧಾನ
    ಇಲ್ಲಿನ ಟ್ಯಾಗೋರ್ ಕಡಲ ತೀರದಲ್ಲಿ ಶನಿವಾರ ಸಾಯಂಕಾಲ ಆರ್‌ವಿಡಿ ತಮ್ಮ ಕೆಲ ಬೆಂಬಲಿಗರ ಜತೆ ವಿವಾರ ನಡೆಸಿದರು. ಆದರೆ, ತೀರ ಸ್ವಚ್ಛತೆಯ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣ ಜಿಲ್ಲಾಧಿಕಾರಿಗೆ ಕರೆ ಮಾಡಿ ಮಾತನಾಡಿದ ಅವರು, ಕಡಲ ತೀರ ಹೊಲಸಾಗಿರುವುದು ಸರಿ ಕಾಣುವುದಿಲ್ಲ. ಕಡಲ ತೀರ ಸ್ವಚ್ಛ, ಸುಂದರವಾಗಿದ್ದರೆ ಪ್ರವಾಸಿಗರು ಬರುತ್ತಾರೆ. ಅದರಿಂದ ಜಿಲ್ಲೆಯಲ್ಲಿ ವ್ಯಾಪಾರ, ವ್ಯವಹಾರ ಬೆಳೆಯುತ್ತದೆ. ಉದ್ಯೋಗ ಸೃಷ್ಟಿಯಾಗುತ್ತದೆ. ಪ್ರತಿ 15 ದಿನಕ್ಕೊಂದು ವಿವಿಧ ಪ್ರವಾಸಿ ಸ್ಥಳಗಳಲ್ಲಿ ಸಭೆ ಮಾಡಿ. ಅನುದಾನದ ಕೊರತೆ ಇದ್ದರೆ ಸರ್ಕಾರಕ್ಕೆ ಪ್ರಸ್ತಾವೆ ಸಲ್ಲಿಸಿ, ನಾಳೆಯಿಂದಲೇ ಕಡಲ ತೀರ ಸ್ವಚ್ಛತೆಗೆ ಕ್ರಮ ವಹಿಸಿ ಎಂದರು. ಎಂಲ್‌ಸಿ ಗಣಪತಿ ಉಳ್ವೇಕರ್, ಕಾಂಗ್ರೆಸ್ ಪ್ರಮುಖರಾದ ಕೆ.ಶಂಭು ಶೆಟ್ಟಿ, ದಿಗಂಬರ ಶೇಟ್ ಇದ್ದರು.

    ಇದನ್ನೂ ಓದಿ: ಲೋಕಸಭಾ ಚುನಾವಣೆ- ಅ.29 ರಂದು ಅಂಕೋಲಾದಲ್ಲಿ ಕಾಂಗ್ರೆಸ್ ಮಹತ್ವದ ಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts