More

    ಅರ್ಹರಿಗೆ ಸೌಲಭ್ಯ ದೊರಕಲಿ

    ವಿಜಯಪುರ: ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ದೊರಕಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
    ನಗರದ ಡಾ. .ಗು. ಹಳಕಟ್ಟಿ ಸಭಾಭವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸರ್ಕಾರದ ವಿವಿಧ ಮಹತ್ವದ ಯೋಜನೆಗಳಾದ ಅಂಗವಿಕಲ ಪಿಂಚಣಿ ಯೋಜನೆ, ಸಂಧ್ಯಾ ಸುರಕ್ಷಾ ಪಿಂಚಣಿ, ವೃದ್ಧಾಪ್ಯ ವೇತನ, ವಿಧವಾ ವೇತನ, ಮನಸ್ವಿನಿ ಪಿಂಚಣಿ ಯೋಜನೆಯಡಿ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.
    ಸರ್ಕಾರದ ಪ್ರತಿ ಯೋಜನೆಗಳು ಅರ್ಹ ಲಾನುಭವಿಗಳಿಗೆ ದೊರಕುವುದು ಅವಶ್ಯವಾಗಿದೆ. ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಸಾರ್ವಜನಿಕರು ಕಚೇರಿಗೆ ಅಲೆಯುವುದನ್ನು ತಪ್ಪಿಸಬೇಕಿದೆ. ಅಧಿಕಾರಿಗಳ ಮೂಲಕವೇ ಲಾನುಭವಿಗಳನ್ನು ಗುರುತಿಸಿ ಅವರಿಗೆ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
    ಸರ್ಕಾರದ ಮಹತ್ವದ ಯೋಜನೆಗಳಾದ ಅಂಗವಿಕಲರ ಪಿಂಚಣಿ ಯೋಜನೆ, ಸಂಧ್ಯಾ ಸುರಕ್ಷಾ ಪಿಂಚಣಿ, ವೃದ್ಧಾಪ್ಯ ವೇತನ, ವಿಧವಾ ವೇತನ, ಮನಸ್ವಿನಿ ಪಿಂಚಣಿ ಯೋಜನೆ, ಶಾಸಕರ ಬಯಲುಸೀಮೆ ಪ್ರದೇಶಾಭಿವೃದ್ಧಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಲಾಗಿದ್ದು, ಇನ್ನೂ ಅನೇಕ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
    ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯ ಲಕ್ಷ್ಮ್ಮಣ ಜಾಧವ, ತಹಸೀಲ್ದಾರ್ ಮೋಹನಕುಮಾರಿ, ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿ, ಬಿಜೆಪಿ ಮುಖಂಡರಾದ ಸಾಯಬಣ್ಣ ಭೋವಿ, ಗುರು ಗಚ್ಚಿನಮಠ, ಚಂದ್ರು ಚೌಧರಿ, ರಮೇಶ ಪಡಸಲಗಿ, ಬಸವರಾಜ ಗೊಳಸಂಗಿ, ಶರಣು ಕಾಖಂಡಕಿ, ಬಾಬು ಶಿರಶ್ಯಾಡ, ರಾಜಶೇಖರ ಭಜಂತ್ರಿ, ವಿವೇಕ ಹರಕಾರಿ, ಲಕ್ಕಪ್ಪ ಮಾಲಗಾರ, ಅಡೆವೆಪ್ಪ ಸಾಲಗಲ್ಲ, ಅಶೋಕ ಬೆಲ್ಲದ, ಶಿವಪ್ಪ ಘಂಟಿ, ಮನೋಹರ ಕಾಂಬ್ಳೆ, ಶ್ರೀನಿವಾಸ ಬೆಟಗೇರಿ, ವಿಜುಗೌಡ ಬಿರಾದಾರ, ದತ್ತಾ ಗೊಲಾಂಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts