More

    ಅಧಿವೇಶನದ ಸುದ್ದಿ ಮಾಡಲು ಒಡಿಶಾದಲ್ಲೂ ನಿರ್ಬಂಧ; ಇದು ಪ್ರಜಾಪ್ರಭುತ್ವ ಅಲ್ಲ ಎಂದು ಟೀಕಿಸಿದ ಶಾಸಕ ಅಧೀರಜ್​ ಪಾಣಿಗ್ರಹಿ

    ಭುಬನೇಶ್ವರ್​: ವಿಧಾನಸಭಾ ಕಲಾಪವನ್ನು ಪ್ರಸಾರ ಮಾಡದಂತೆ ನಿಷೇಧಿಸಿ ಮಾಧ್ಯಮಗಳಿಗೆ ಒಡಿಶಾ ಸ್ಪೀಕರ್​ ನಿಷೇಧ ಹೇರಿದ್ದಾರೆ. ಕರ್ನಾಟಕದಲ್ಲೂ ವಿಧಾನಸೌಧದ ಒಳಗೆ ಟವಿ ಕ್ಯಾಮರಾಗಳನ್ನು ನಿಷೇಧಿಸಿ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಒಡಿಶಾದ ಕಾಂಗ್ರೆಸ್​ ಶಾಸಕ ಅಧೀರಜ್​ ಪಾಣಿಗ್ರಹಿ, ಮಾಧ್ಯಮಗಳಿಗೆ ಸುದ್ದಿ ನೀಡುವ ಸ್ವಾತಂತ್ರ್ಯ ನೀಡಿರುವುದು ಪ್ರಜಾಪ್ರಭುತ್ವದ ಸೌಂದರ್ಯ. ಆದರೆ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದರೆ ಅದು ಪ್ರಜಾಪ್ರಭುತ್ವ ಅಲ್ಲ ಎಂದಿದ್ದಾರೆ.

    ಒಡಿಶಾದ ಸ್ಪೀಕರ್ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಶಾಸಕ ಅಧೀರಜ್​ ಪಾಣಿಗ್ರಹಿ ತಿಳಿಸಿದ್ದಾರೆ.

    ಇನ್ನು ರಾಜ್ಯದಲ್ಲಿ ಶುಕ್ರವಾರ (ಫೆ.14) ಸುದ್ದಿಗೋಷ್ಠಿ ನಡೆಸಿದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಹಿಂದಿನಂತೆ ಈ ಬಾರಿಯೂ ಮೀಡಿಯಾ ಕ್ಯಾಮರಾಗಳಿಗೆ ಬ್ರೇಕ್ ಹಾಕಲು ನಿರ್ಧರಿಸಲಾಗಿದೆ. ಲೋಕಸಭಾ ಮತ್ತು ರಾಜ್ಯಸಭಾ ಮಾದರಿ ಅನುಸರಿಸುವುದಾಗಿ ಹೇಳಿದ್ದರು.

    ಈ ಹಿಂದಿನ ಅಧಿವೇಶನದಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಸರ್ಕಾರ ಬದ್ಧವಾಗಿದೆ. ದೃಶ್ಯ ಮಾಧ್ಯಮದ ಕ್ಯಾಮರಾಗಳಿಗೆ ವಿಧಾನಸಭಾ ಸಭಾಂಗಣದ ಒಳಗೆ ಪ್ರವೇಶವಿಲ್ಲ. ಕಲಾಪದ ನೇರ ಪ್ರಸಾರಕ್ಕೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ. ಕ್ಯಾಮರಾಮನ್​ಗಳಿಗೆ ವಿಧಾನಸಭೆಯ ಪಾಸ್ ನೀಡದಂತೆ ಆದೇಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts