More

    ‘ನಾವು ಪರೀಕ್ಷೆ ಬರೆಯಲ್ಲ’ ಅಭಿಯಾನ ವಿದ್ಯಾರ್ಥಿಗಳು ಆರಂಭಿಸಿದ್ದೇಕೆ? ಅಷ್ಟಕ್ಕೂ ಪರೀಕ್ಷೆ ನಡೆಯುತ್ತಿರುವುದಾರೂ ಎಲ್ಲಿ?

    ಐಜ್ವಾಲ್​: ಆನ್​ಲೈನ್​ನಲ್ಲೀಗ ‘ನೋ ಎಕ್ಸಾಂ ನೋ ರಿಸ್ಕ್​’ ಎಂಬ ಅಭಿಯಾನವೀಗ ಹೆಚ್ಚು ಟ್ರೆಂಡ್​ ಆಗುತ್ತಿದೆ. ಇಡೀ ದೇಶವೇ ಕರೊನಾದಿಂದ ಸಂಕಷ್ಟದಲ್ಲಿರುವಾಗ ಪರೀಕ್ಷೆ ಬರೆಯಬೇಕೆ? ಎಂಬುದು ಅವರ ಪ್ರಶ್ನೆ. ಹೀಗಾಗಿ ನಾವು ಪರೀಕ್ಷೆ ಬರೆಯಲ್ಲ ಎಂದು ಹಠ ಹಿಡಿದಿದ್ದಾರೆ. ಅಷ್ಟಕ್ಕೂ ಬೀದಿಗಿಳಿದು ಹೋರಾಟ ಮಾಡೋಕಾಗಲ್ಲವಲ್ಲ, ಅದಕ್ಕಾಗಿ ಆನ್​ಲೈನ್​ನಲ್ಲಿ ಈ ಡಿಜಿಟಲ್​ ಪ್ರೊಟೆಸ್ಟ್​ ಶುರು ಮಾಡಿದ್ದಾರೆ. ಟ್ವಿಟರ್​ನಲ್ಲಿ #No mbse exam No risk” ಎಂಬ ಹ್ಯಾಷ್​ಟ್ಯಾಗ್​​ನಲ್ಲಿ ಅಭಿಯಾನ ನಡೆಸುತ್ತಿದ್ದಾರೆ.

    ಇಷ್ಟಕ್ಕೂ ಪರೀಕ್ಷೆ ನಡೆಯುತ್ತಿರುವುದಾರೂ ಎಲ್ಲಿ ಅಂತೀರಾ? ಈಶಾನ್ಯ ರಾಜ್ಯಗಳಲ್ಲಿ ಒಂದಾದ ಮಿಜೋರಾಂನಲ್ಲಿ ಏಪ್ರಿಲ್​ 22ರಿಂದ 24ರವರೆಗೆ ಎಚ್​ಎಸ್​ಎಸ್​​ಎಲ್​ಸಿ ಅಂದರೆ ನಮ್ಮಲ್ಲಿನ ಪಿಯುಸಿ ಪರೀಕ್ಷೆ ಘೋಷಣೆ ಮಾಡಲಾಗಿದೆ. ಲಾಕ್​ಡೌನ್​ನಿಂದಾಗಿ ಕರ್ನಾಟಕದಲ್ಲಿ ಒಂದೇ ವಿಷಯದ ಪರೀಕ್ಷೆ ನಡೆಸಬೇಕಿದ್ದರೆ, ಅಲ್ಲಿನ್ನೂ ಮೂರು ವಿಷಯಗಳ ಪರೀಕ್ಷೆ ಬಾಕಿ ಉಳಿದಿದೆ.

    ಎರಡು ದಿನಗಳ ಹಿಂದಷ್ಟೇ ಶಿಕ್ಷಣ ಸಚಿವ ಲಾಲ್​ಚಂದ್ಮಾ ರಾಲ್ಟೆ ಪರೀಕ್ಷೆ ದಿನಾಂಕ ಘೋಷಿಸಿದ್ದರು. ಮೇ 3ರವರೆಗೆ ದೇಶಾದ್ಯಂತ ಲಾಕ್​ಡೌನ್ ವಿಸ್ತರಣೆಯಾಗಿರುವಾಗ ಪರೀಕ್ಷೆ ಹೇಗೆ ನಡೆಸುತ್ತೀರಿ? ಎಂಬುದು ವಿದ್ಯಾರ್ಥಿಗಳ ಪ್ರಶ್ನೆ. ಅಂತರ ಜಿಲ್ಲಾ, ಅಂತರ ರಾಜ್ಯ ಪ್ರಯಾಣ ನಿರ್ಬಂಧಿಸಲಾಗಿದೆ. ಒಂದು ವೇಳೆ ವಿದ್ಯಾಥಿರ್ಗಳು ಮಿಜೋರಾಂನಿಂದ ಹೊರ ರಾಜ್ಯಗಳಿಗೆ ತೆರಳಿದ್ದರೆ ಅವರು ಬರುವುದಾರೂ ಹೇಗೆ? ಎನ್ನುತ್ತಿದ್ದಾರೆ.

    ಈ ನಡುವೆ, ಕೆಲ ಜಿಲ್ಲಾಧಿಕಾರಿಗಳು ಕೂಡ ಸಚಿವರ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಲಾಕ್​ಡೌನ್​ ಸಮಯದಲ್ಲಿ ಪರೀಕ್ಷೆ ನಡೆಸುವುದು ಕೇಂದ್ರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಶಿಕ್ಷಣ ಮಂಡಳಿಗೆ ಪತ್ರ ಬರೆದಿದ್ದಾರೆ.
    ಇದೀಗ ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದಂತಿರುವ ಶಿಕ್ಷಣ ಸಚಿವ ಈ ಬಗ್ಗೆ ಸೋಮವಾರ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದಿದ್ದಾರೆ. ಮರುನಿಗದಿ ಮಾಡಿರುವ ಪರೀಕ್ಷೆಯನ್ನು ಮುಂದೂಡುವ ಸಾಧ್ಯತೆಗಳಿವೆ.

    ಇನ್ನೆರಡು ದಿನಗಳಲ್ಲಿ ಶುರುವಾಗಲಿದೆ ಶೇ.45 ಆರ್ಥಿಕ ಚಟುವಟಿಕೆ, ಕಂಟೈನ್​ಮೆಂಟ್​ ಝೋನ್​ಗಳಲ್ಲಷ್ಟೇ ನಿರ್ಬಂಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts