More

    ಮಿರ್ಲೆ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಮರಿ ಚಿರತೆ ಪತ್ತೆ: ಅರಣ್ಯ ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರು

    ಮೈಸೂರು: ರೈತರ ಕಬ್ಬಿನ ಗದ್ದೆಯಲ್ಲಿ ಮರಿ ಚಿರತೆ ಪತ್ತೆಯಾಗಿದೆ. ರಕ್ಷಣೆ ಮಾಡಿದ ಮರಿ ಚಿರತೆಯನ್ನು ಗ್ರಾಮಸ್ಥರು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.

    ಕೆ.ಆರ್​.ನಗರ ತಾಲೂಕಿನ ಮಿರ್ಲೆ ಗ್ರಾಮದ ಸಂತೋಷ್​ ಎಂಬ ರೈತರ ಗದ್ದೆಯಲ್ಲಿ ಕಬ್ಬು ಕಟಾವು ಮಾಡುವಾಗ ಮರಿ ಚಿರತೆ ಕಾಣಿಸಿತು. ಕೂಡಲೇ ಅದನ್ನು ಕಾರ್ಮಿಕರು ರಕ್ಷಣೆ ಮಾಡಿದರು. ಮರಿ ಚಿರತೆ ಪತ್ತೆಯಾಗಿರುವ ಸುದ್ದಿ ಹರಡಿ ಗ್ರಾಮಸ್ಥರು ಗದ್ದೆ ಬಳಿ ಆಗಮಿಸಿ ಅದನ್ನು ಮುದ್ದಾಡಿದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ನೀಡಿದರು.

    ಕಬ್ಬಿನ ನಡುವೆ ಕಾಡು ಹಂದಿ, ಬೆಕ್ಕು ನವಿಲು ಪತ್ತೆಯಾಗುವುದು ಸಾಮಾನ್ಯ. ಆದರೆ ಮರಿ ಚಿರತೆ ಪತ್ತೆಯಾಗಿ ಗ್ರಾಮಸ್ಥರಲ್ಲಿ ಆಶ್ಚರ್ಯ ಮೂಡಿಸಿದೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts