More

    ತಾವು ಧರಿಸಿದ್ದ ಮಾಸ್ಕನ್ನೇ ತೆಗೆದು ಸಂಸದರಿಗೆ ತೊಡಿಸಿದ ಸಚಿವ!

    ಗ್ವಾಲಿಯರ್​​: ಕರೊನಾ ಹಿನ್ನೆಲೆಯಲ್ಲಿ ಮಾಸ್ಕ್​ ತೊಡುವುದು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ವೈರಸ್​ ಸೋಂಕು ಹರಡದಿರಲಿ ಎಂಬ ಕಾರಣಕ್ಕೆ. ಆದರೆ ಬಹುತೇಕ ಆಚರಣೆಗಳು ತಮ್ಮ ಮೂಲ ಉದ್ದೇಶವನ್ನೇ ಕಳೆದುಕೊಳ್ಳುವಂತೆ, ಮಾಸ್ಕ್​ ತೊಡುವುದು ಕೂಡ ಬಹಳ ಜನರಿಗೆ ಕೇವಲ ಒಂದು ನಿಯಮದಂತೆ ತೋರುತ್ತದೆ. ಹೀಗಾಗಿ, ಹಲವರು ಮಾಸ್ಕ್​ಅನ್ನು ಕತ್ತಿಗೆ ತೊಟ್ಟರೆ, ಕೆಲವರು ಜೋಪಾನವಾಗಿ ಜೇಬಿನಲ್ಲಿಟ್ಟುಕೊಂಡು ಓಡಾಡುವುದೂ ಕಂಡುಬರುತ್ತದೆ!

    ಮಾಸ್ಕ್​ ತೊಡುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಸ್ವಚ್ಛವಾದ ಮಾಸ್ಕ್​ಅನ್ನು ತೊಡುವುದು. ಹೀಗಿರುವಾಗ ಒಬ್ಬರು ಬಳಸಿದ ಮಾಸ್ಕ್​ಅನ್ನು ಮತ್ತೊಬ್ಬರು ತೊಟ್ಟರೆ ಉಪಯೋಗಕ್ಕಿಂತ ಹಾನಿಯೇ ಹೆಚ್ಚು. ಆದರೆ, ಇಂಥದ್ದೊಂದು ಪ್ರಸಂಗ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ. ಕೇಂದ್ರ ನಾಗರೀಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯ ಅವರು ಕಾರ್ಯಕ್ರಮವೊಂದಕ್ಕೆ ಹೋದ ಸಂದರ್ಭದಲ್ಲಿ, ಮಾಸ್ಕ್​ ತೊಟ್ಟಿಲ್ಲದ ನಾಯಕರೊಬ್ಬರಿಗೆ ತಾವು ತೊಟ್ಟಿದ್ದ ಮಾಸ್ಕನ್ನೇ ತೆಗೆದು ತೊಡಿಸಿದ್ದಾರೆ!

    ಇದನ್ನೂ ಓದಿ: ಪೆಗಾಸಸ್​ ಫೋನ್​ ಟ್ಯಾಪ್​ ಆರೋಪದ ತನಿಖೆ ನಡೆಸಲಿದೆ, ಸುಪ್ರೀಂ ಕೋರ್ಟ್​ ತಜ್ಞರ ಸಮಿತಿ

    ಈ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ಈ ರೀತಿಯಾಗಿ ಬಳಸಿದ ಮಾಸ್ಕ್​ ತೊಡಿಸಿಕೊಂಡವರು ಗ್ವಾಲಿಯರ್​ನ ಮಾಜಿ ಸಂಸದ ಅರುಣ್​​ ಮಿಶ್ರ ಎಂದು ತಿಳಿದುಬಂದಿದೆ. ಡಬ್ಬಲ್​ ಮಾಸ್ಕ್ ​ಹಾಕಿಕೊಂಡ ಸಚಿವ ಸಿಂಧ್ಯಾರನ್ನು ಸಾರ್ವಜನಿಕ ಸಮಾರಂಭವೊಂದಕ್ಕೆ ಸ್ವಾಗತಿಸುತ್ತಾ ನಿಂತಿರುವ ಹಲವು ನಾಯಕರಲ್ಲಿ ಮಿಶ್ರ ಕೂಡ ಇದ್ದರು. ಅವರು ಮಾಸ್ಕ್​ ತೊಟ್ಟಿಲ್ಲದ್ದನ್ನು ನೋಡಿದ ಸಿಂಧ್ಯ, ದಿಢೀರನೇ ತಾವು ಎನ್​95 ಮಾಸ್ಕ್​​ ಮೇಲೆ ತೊಟ್ಟಿದ್ದ ಸರ್ಜಿಕಲ್​ ಮಾಸ್ಕ್​ಅನ್ನು ತೆಗೆದು  ತೊಡಿಸಿಬಿಟ್ಟಿದ್ದಾರೆ.

    ಈ ಪ್ರಸಂಗವನ್ನು ನೋಡಿ, ವಿರೋಧ ಪಕ್ಷ ಸದಸ್ಯರು ಬಿಜೆಪಿ ಸಚಿವರ ಕಾಲೆಳೆದಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಾರ್ಯಕ್ರಮಗಳನ್ನು ಮಾಡುತ್ತೀರಿ, ಬಳಸಿದ ಮಾಸ್ಕನ್ನು ಮತ್ತೊಬ್ಬ ನಾಯಕರಿಗೆ ನೀಡುತ್ತೀರಲ್ಲಾ ಎಂದು ಉದ್ಗರಿಸಿದ್ದಾರೆ. (ಏಜೆನ್ಸೀಸ್)

    ಹೆಂಡತಿಗೆ ಲಸಿಕೆ ನೀಡಿದ್ದಕ್ಕೆ ನರ್ಸ್ ಮುಖಕ್ಕೆ ಪಂಚ್​ ಮಾಡಿದ ಭೂಪ!

    ಸಿಧು ‘ಸೂಪರ್​ ಸಿಎಂ’ ಆಗಲು ಪ್ರಯತ್ನಿಸಿದರೆ ಕಾಂಗ್ರೆಸ್​ಗೆ ಕುತ್ತು ಎಂದ ಕ್ಯಾಪ್ಟನ್!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts