More

    ಪಂಚಾಯಿತಿ ಚುನಾವಣೆ ಮುಂದೂಡುವಂತೆ ಒತ್ತಡ

    ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಸದ್ಯಕ್ಕೆ ಬೇಡ, ಏನಾದರೂ ಮಾಡಿ ಮುಂದೂಡಲು ಪ್ರಯತ್ನಿಸಿ ಎಂದು ಸರ್ಕಾರದ ಮೇಲೆ ಪಕ್ಷಾತೀತ ಒತ್ತಡ ಇದೆ ಎಂಬ ಸಂಗತಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಬಹಿರಂಗಪಡಿಸಿದ್ದಾರೆ.

    ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಎಲ್ಲ ಕಡೆಯಿಂದ ದೂರವಾಣಿ ಕರೆ ಬರುತ್ತಿದ್ದು ಚುನಾವಣೆ ಮುಂದೆ ಹಾಕಿಸಿ ಎಂದು ಮನವಿ ಮಾಡುತ್ತಿದ್ದಾರೆ. ನ್ಯಾಯಾಲಯ ಚುನಾವಣೆಗೂ ಸರ್ಕಾರಕ್ಕೂ ಸಂಬಂಧವಿಲ್ಲ, ಏನಾದರೂ ಅಗತ್ಯವಿದ್ದರೆ ರಾಜ್ಯಪಾಲರನ್ನು ಕೇಳಿ ಎಂದು ಚುನಾವಣೆ ಆಯೋಗಕ್ಕೆ ಹೇಳಿದೆ. ಹೀಗಿರುವಾಗ ನಾವೇನು ಮಾಡಲು ಸಾಧ್ಯ ಎಂದರು.

    ಚುನಾವಣೆ ಆಯೋಗ ಚುನಾವಣೆ ನಡೆಸುವ ನಿಟ್ಟಿನಲ್ಲಿ ವೇಗವಾಗಿ ಕೆಲಸ ಮಾಡುತ್ತಿದೆ. ಸರ್ಕಾರ ಚುನಾವಣೆ ಮುಂದೂಡಲು ಪ್ರಯತ್ನಿಸುವ ಯಾವುದೇ ಚಿಂತನೆ ಇಲ್ಲ. ಚುನಾವಣೆ ಮುಂದೂಡುವಂತೆ ಯಾರಾದರೂ ಸುಪ್ರಿಂಗೆ ಹೋಗಬಹುದು ಎಂದು ಅಭಿಪ್ರಾಯಪಟ್ಟರು.

    ಇದನ್ನೂ ಓದಿ: ಶಾಸಕ ಈಶ್ವರ್ ಖಂಡ್ರೆಗೆ 5 ಲಕ್ಷ ದಂಡ ವಿಧಿಸಿದ ಹೈಕೋರ್ಟ್; ಕೋವಿಡ್ ನಿಧಿಗೆ ದಂಡದ ಮೊತ್ತ

    ಕರೊನಾ ನಡುವೆಯೇ ಬಿಹಾರದಲ್ಲೇನೋ ಚುನಾವಣೆ ನಡೆದಿದೆ. ಆದರೆ, ಮುಂದೇನಾಗಿದೆ ಎಂದು ಯಾರಿಗೂ ಗೊತ್ತಿಲ್ಲ. ಕರ್ನಾಟಕದಲ್ಲಿ ಕರೊನಾ ಪ್ರಮಾಣ ತಗ್ಗಿದಂತೆ ಕಂಡಿರಬಹುದು. ಆದರೆ, ಚುನಾವಣೆ ನಡೆಸಿದರೆ ಪ್ರತಿ ಮನೆಗೆ ಪ್ರಚಾರ ಮಾಡುವವರು ನಾಲ್ಕೈದು ಬಾರಿಯಾದರೂ ತೆರಳುತ್ತಾರೆ. ಹೀಗಾಗಿ ಚುನಾವಣೆಯಿಂದಾಗಿ ಮಾರಕವಾದೀತೆಂಬ ಭಯ ಇದೆ ಎಂದರು.

    ಇನ್ಮೇಲೆ ಪ್ರತಿ ತಿಂಗಳೂ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ ಅಮಿತ್​ ಷಾ, ಜೆ.ಪಿ.ನಡ್ಡಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts